
ಹೊನ್ನಾವರ , ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ಮಕ್ಕಳು ಪಟ್ಟಣದ ಮಕ್ಕಳಂತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ ಮತ್ತು ಪ್ರತಿಭಾವಂತರೂ ಆಗಿದ್ದಾರೆ ಆದರೆ ಅವಕಾಶದ ಕೊರತೆ ಇದೆ ಆದರೆ ಸರ್ಕಾರ ಇತ್ತೀಚಿನÀ 5-6 ವರ್ಷಗಳಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮೀಣ ಭಾಗದ ಮಕ್ಕಳನ್ನು ಉತ್ತೇಜಿಸುವ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದು ಹೊನ್ನಾವರ ತಾಲೂಕಾ ಪಂಚಾಯತ ಅಧ್ಯಕ್ಷ ಉಲ್ಲಾಸ ನಾಯ್ಕ ಹೇಳಿದರು.
ಅವರು ಬಾಲಭವನ ಸೊಸೈಟಿ, ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾವರ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ, ಹೊನ್ನಾವರ ಆಶ್ರಯದಲ್ಲಿ ತಾಲೂಕಿನ ಹೊದ್ಕೆ-ಶಿರೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ ತಾಲೂಕಾ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಲಾಶ್ರೀ ಎನ್ನುವುದು ಹೆಸರೇ ಸೂಚಿಸುವಂತೆ ಇದು ಕಲೆಗಳನ್ನು ಪ್ರದರ್ಶನದ ಮೂಲಕ ಪ್ರತಿಭೆಯನ್ನು ಗುರುತಿಸುವುದು, ಪ್ರೋತ್ಸಾಹಿಸುವುದು ಮತ್ತು ಪೋಷಿಸುವುದಾಗಿದೆ, ಆ ನಿಟ್ಟಿನಲ್ಲಿ ಇದು ಅತ್ಯಂತ ಉತ್ತಮವಾದ ಕಾರ್ಯಕ್ರಮವಾಗಿದೆ ಎಂದರು.
ಮುಖ್ಯ ಅತಿಥಿ, ಎಸ್.ಡಿ.ಎಮ್. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಡಿ. ಹೆಗಡೆ ಮಾತನಾಡಿ ಕಲೆ, ಸಾಹಿತ್ಯ ಮತ್ತು ಸಂಗೀತವನ್ನು ಪ್ರೀತಿಸದವರು ಮನುಷ್ಯತ್ವವನ್ನು ಮರೆತಂತೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹೊನ್ನಾವರ ತಾಲೂಕಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವಿ.ಎಚ್.ಪಾಟೀಲ ಮಾತನಾಡಿ ಸಾಂಸ್ಕøತಿಕ ಚಟುವಟಿಕೆಗಳನ್ನು ಒಳಗೊಂಡ ಇಂಥ ಕಾರ್ಯಕ್ರಮಗಳು ಸರ್ಕಾರಿ ಶಾಲೆಯ ಮತ್ತು ಸೌಲಭ್ಯ ವಂಚಿತ ಮಕ್ಕಳಿಗೆ ದೊರಕಬೇಕೆಂಬುದು ಬಾಲಭವನ ಸೊಸೈಟಿ ಮತ್ತು ಇಲಾಖೆಯ ಆಶಯವಾಗಿದೆ, ಹಾಗಾಗಿ ಗ್ರಾಮೀಣ ಪ್ರದೇಶದ ಮಕ್ಕಳನ್ನು ಹೆಚ್ಚೆಚ್ಚು ತೊಡಗಿಸಿಕೊಳ್ಳುವಂತೆ ಮಾಡುವ ಪ್ರಯತ್ನದಲ್ಲಿ ಸಾರ್ವಜನಿಕರ ಪಾತ್ರ ತುಂಬಾ ಮುಖ್ಯವಾಗುತ್ತದೆ ಎಂದರು. ವೇದಿಕೆಯ ಮೇಲೆ ಕಲಾವಿದ, ಶಿಕ್ಷಕ ಬಿ.ವಿ. ಭಂಡಾರಿ, ಹೊದ್ಕೆ-ಶಿರೂರು-ಕಡ್ನೀರ ಪ್ರಢಶಾಲಾ ಮುಖ್ಯಾಧ್ಯಾಪಕ ಮಂಜುನಾಥ ಹಿತ್ತಲಮಕ್ಕಿ, ಎಚ್ಪಿಎಸ್ ಮುಖ್ಯಾಧ್ಯಾಪಕ ಎನ್ ಜೆ ಮುಕ್ರಿ ಮತ್ತು ಕೆ.ಪಿ.ವಿನೋದ ಇದ್ದರು.
ಮುಂಜಾನೆಯಿಂದ ಸಾಯಂಕಾಲದವರೆಗೆ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಮುಖ್ಯಾಧ್ಯಾಪಕ ಮಂಜುನಾಥ ಹಿತ್ತಲಮಕ್ಕಿ ಬಹುಮಾನ ವಿತರಿಸಿದರು
ವಿ.ಆರ್.ನಾಯಕ್ ಸ್ವಾಗತಿಸಿದರು, ಉಮೇಶ ನಾಯ್ಕ ವಂದಿಸಿದರು, ಮಹೇಶ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.
Leave a Comment