
ಹಳಿಯಾಳ:- 2010 ರಲ್ಲಿ ಆಗಿನ ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ (ಕರ್ನಾಟಕ ಪ್ರಿವೆನಷನ್ ಆಫ್ ಕವ್ ಸ್ಲಾಟರ್ ಮತ್ತು ಪ್ರಿವೆನಷನ್(ಅಮೆಂಡಮೆಂಟ್) ಬಿಲ್ 2010 ಕಾನೂನು ಜಾರಿಗೊಳಿಸಿತ್ತು ಬಳಿಕ ಇದನ್ನು ಕಾಂಗ್ರೇಸ್ ಸರ್ಕಾರ ರದ್ದುಗೊಳಿಸಿತ್ತು ಆದರೇ ಪುನಃ ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಗೋ ಹತ್ಯೆ ನಿಷೇಧ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಹಿಂದೂ ಜನಜಾಗೃತಿ ಸಮೀತಿ ಆಗ್ರಹಿಸಿದೆ.
ಮಂಗಳವಾರ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಸಂಘಟನೆಯವರು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.
ಮನವಿಯಲ್ಲಿ 2014ರಲ್ಲಿ ಕಾಂಗ್ರೆಸ್ ಆಡಳಿತ ಸರಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಗೋಹತ್ಯೆ ನಿಷೇಧ ಕಾನೂನಿನ ಬಿಲ್ ಅನ್ನು ರದ್ದುಗೊಳಿಸಿತ್ತು. ಈಗ ಪುನಃ ಬಿಜೆಪಿಯೇ ಅಧಿಕಾರದಲ್ಲಿದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರವರು ರಾಜ್ಯದಲ್ಲಿ ಪುನಃ ಗೋಹತ್ಯೆ ನಿμÉೀಧ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಅಲ್ಲದೇ ಗೋಮಾಂಸ ಮಾರಾಟ ಮತ್ತು ಸಾಗಾಣಿಕೆಯ ಮೇಲೆ ಕಠಿಣ ನಿರ್ಬಂಧವನ್ನು ವಿಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಆಂದೋಲನದವರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗೋವುಗಳ ಕಳ್ಳ ಸಾಗಾಣಿಕೆ ಮಾಡುವವರನ್ನು ತಡೆಯುವ ಹಿಂದೂ ಕಾರ್ಯಕರ್ತರಿಗೆ ರಕ್ಷಣೆಯನ್ನು ಒದಗಿಸಬೇಕು, ಹಿಂದೂ ಕಾರ್ಯಕರ್ತರ ಮೇಲಾಗಿರುವ ಆಕ್ರಮಣಗಳಲ್ಲಿ ಸಂಬಂಧಿಸಿದ ಗೋವುಗಳ ಕಳ್ಳಸಾಗಾಣಿಕೆದಾರರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಮುಂತಾದ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.
ಅಶ್ಲೀಲತೆ ಮತ್ತು ಲವ್ ಜಿಹಾದ್ ಪ್ರೋತ್ಸಾಹಿಸುವ `ಬಿಗ್ ಬಾಸ್ -13’ ಈ ರಿಯಾಲಿಟಿ ಶೋವನ್ನು ಕೂಡ ನಿಷೇಧಿಸುವಂತೆ ಹಾಗೂ ಆಂಧ್ರ ಪ್ರದೇಶದಲ್ಲಿ ದಸರಾ ಮತ್ತು ಸಂಕ್ರಾಂತಿಯ ಸಮಯದಲ್ಲಿ ರೈಲ್ವೆ ಟಿಕೇಟಿನ ದರವನ್ನು ಹೆಚ್ಚಿಸುವುದರ ವಿರುದ್ಧವು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಮನವಿ ಸಲ್ಲಿಸುವಾಗ ಸಂಘಟನೆಯ ಮಂಜುನಾಥ ಎಮ್.ಕೆ, ರಾಜು ಹಳ್ಳುಕರ, ವಿನೋದ ಗಿಂಡೆ ಮೊದಲಾದವರು ಇದ್ದರು.


Leave a Comment