
ಹಳಿಯಾಳ:- ಸಾಗುವಳಿ ಮಾಡಿದ ಜಮೀನನ್ನು ಬಿಟ್ಟು ಬೇರೆಕಡೆ ಸಿಪಿಟಿ(ಟ್ರಂಚ್) ಹೊಡಿಸಬೇಕು ಮತ್ತು ಫಲಾನುಭವಿಗಳ ಸಾಗುವಳಿ ಮಾಡಿದ ಜಮೀನನ್ನು ಶೀಘ್ರವೇ ಜಿಪಿಎಸ್ ಮಾಡಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮೀತಿ(ಕೆಂಪು ಸೇನೆ) ಸಂಘಟನೆಯಿಂದ ಬುಧವಾರ ಹಳಿಯಾಳ ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೆಂಪು ಸೇನೆಯ ಜಿಲ್ಲಾಧ್ಯಕ್ಷ ವ್ಹಿ ಬಿ ರಾಮಚಂದ್ರ ಅವರ ನೇತೃತ್ವದಲ್ಲಿ ಅತಿಕ್ರಮಣದಾರ ರೈತರು, ಫಲಾನುಭವಿಗಳು ಪಟ್ಟಣದ ಅರಣ್ಯ ಇಲಾಖೆಗೆ ಆಗಮಿಸಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಅರಣ್ಯ ಅತೀಕ್ರಮಣವನ್ನು ಸಾಗುವಳಿ ಮಾಡುತ್ತಾ ಹಳಿಯಾಳ ತಾಲೂಕಿನ ಜನರು ಸುಮಾರು ವರ್ಷಗಳಿಂದ ವ್ಯವಸಾಯ ಮಾಡುತ್ತಾ ಬಂದಿದ್ದಾರೆ. ಈ ಹಿಂದೆ ಸÀರ್ಕಾರ ಜಿ.ಪಿ.ಎಸ್. ಮಾಡಲು ಅನುಮತಿ ನೀಡಿದ್ದಾರೆ ಆದರೇ ಕೆಲವು ಫಲಾನುಭವಿಗಳ ಜಿಪಿಎಸ್ ಈವರೆಗೆ ಆಗಿರುವುದಿಲ್ಲ ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೂ ತರಲಾಗಿದ್ದು ಅಲ್ಲದೇ ಅಸಿಸ್ಟಂಟ್ ಕಮೀಷನರ್ ಅವರ ಗಮನಕ್ಕೆ ತಂದಾಗ ಸಮಾಜ ಕಲ್ಯಾಣ ಇಲಾಖೆ ಹಳಿಯಾಳದವರಿಗೆ ಜಿಪಿಎಸ್ ಮಾಡಲು ಸೂಚಿಸಿದ್ದಾರೆ ಆದರೇ ಈವರೆಗೆ ಕ್ರಮ ಕೈಗೊಳ್ಳಲಾಗಿಲ್ಲ ಎನ್ನಲಾಗಿದೆ.

ಆದರೇ ಅರಣ್ಯ ಇಲಾಖೆಯವರು ಮಾತ್ರ ಸಿಪಿ.ಟಿ. (ಟ್ರಂಚ) ಹೊಡೆದಿರುವುದರಿಂದ ರೈತರಿಗೆ ಬಹಳ ತೊಂದರೆಯಾಗಿದೆ. ಕಾರಣ ಸದರ ಸಾಗುವಳಿ ಮಾಡಿದ ಜಮೀನನ್ನು ಬಿಟ್ಟು ಬೇರೆಕಡೆ ಟ್ರಂಚ್ ಹೊಡೆಸಲು ನಮ್ಮದೇನು ಅಭ್ಯಂತರ ಇರುವುದಿಲ್ಲ ಎಂದಿರುವ ರೈತರು ಕೂಡಲೇ ಜಿಪಿಎಸ್ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಸಹಕಾರಿಯಾಗುಂತೆ ವಿನಂತಿಸಲಾಗಿದೆ.
ಮನವಿ ಸಲ್ಲಿಸುವಾಗ ಸಂಘಟನೆಯ ರಾಜು ಕುರುಬರ, ಅಶೋಕ ಕೆಸರೆಕರ, ಸುಭಾಷ ಜಾಧವ, ಶಕೀಲ ಚೌಕಿದಾರ, ಮಂಜುಳಾ ವಡ್ಡರ ಮೊದಲಾದವರು ಇದ್ದರು.

Leave a Comment