
ಹೊನ್ನಾವರ –
ಇತ್ತೀಚೆಗೆ ಬೀಸಿದ ಗಾಳಿ ಹಾಗೂ ಮಳೆಗೆ ಮರಗಳು ಉರುಳಿ ಮನೆಗೆ ಹಾನಿಯಾಗಿದ್ದವರಿಗೆ ಮೊದಲ ಹಂತದ ಪರಿಹಾರವನ್ನು ಶಾಸಕ ದಿನಕರ ಶೆಟ್ಟಿ ಮಂಗಳವಾರ ವಿತರಿಸಿದ್ದಾರೆ.
ಘಟನೆ ನಡೆದ ದಿನವೂ ಹಾನಿಯಾದ ಪ್ರದೇಶಗಳಿಗೆ ಬೇಟಿ ನೀಡಿದ್ದ ಶಾಸಕರು ಆಸ್ತಿಪಾಸ್ತಿಗೆ ಹಾನಿಯಾದವರ ಕುಟುಂಭಕ್ಕೆ ತಕ್ಷಣ ನೆರವು ನೀಡುವುದಾಗಿ ತಿಳಿಸಿದ್ದರು.
ಅದರಂತೆ ಇಂದು ಮತ್ತೆ ಘಟನಾ ಸ್ಥಳಕ್ಕೆ ಬೇಟಿನೀಡಿ ಮನೆಗೆ ಹಾನಿಯಾದ ಕುಟುಂಭದವರಾದ ಶೋಭಾ ಗಣೇಶ ಮೇಸ್ತ 57060 -00 ರು, ನಾಗವೇಣಿ ನಾಗಪ್ಪ ಮೇಸ್ತ ಇವರಿಗೆ 95000 -00 ರು ಹಾಗೂ ಸುಶೀಲಾ ರಾಮ ಮೇಸ್ತ ಇವರಿಗೆ 42795 -00 ರು ಚೆಕ್ ವಿತರಿಸಿದರು. ಅತೀ ಕಡಿಮೆ ಸಮಯದಲ್ಲಿ ಮೊದಲ ಹಂತದ ಪರಿಹಾರ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು ಶಾಸಕರ ಜೊತೆ ಪಟ್ಟಣ ಪಂಚಾಯತ ಸದಸ್ಯರಾದ ವಿಜಯ ಕಾಮತ್, ಸುಭಾಷ ಹರಿಜನ ಮುಂತಾದವರು ಉಪಸ್ಥಿತರಿದ್ದರು.
Leave a Comment