
ಹೊನ್ನಾವರ : ಅದ್ಭುತ ಶಕ್ತಿಯಾಗಿದ್ದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಜಗತ್ತು ಕಂಡ ಮಹಾನ್ ನಾಯಕಿಯಾಗಿ ಹೊರಹೊಮ್ಮಿದ್ದರು ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ನುಡಿದರು.ಅವರು ಇಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ 35ನೇ ಪಣ್ಯ ತಿಥಿ ಮತ್ತು ದೇಶದ ಪ್ರಥಮ ಗೃಹಮಂತ್ರಿ ಸರದಾರ್ ವಲ್ಲಭಾಯಿ ಪಟೇಲ್ರವರ 144 ನೇ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ತಮ್ಮ ಜೀವನದುದ್ದಕ್ಕೂ ದೇಶದ ಐಕ್ಯತೆ, ಸಮಗ್ರತೆಗೆ ಹೋರಾಡಿ, ಕೊನೆಗೂ ಹಂತಕರ ಗುಂಡಿಗೆ ಬಲಿಯಾದ ನಾಯಕಿ ಶ್ರೀಮತಿ ಇಂದಿರಾಗಾಂಧಿ ಎಂದು ಸ್ಮರಿಸಿದರು. ಸುಮಾರು 17 ವರ್ಷಗಳಿಗೂ ಹೆಚ್ಚಿನ ಅವಧಿ ಭಾರತ ದೇಶವನ್ನು ಪ್ರಧಾನ ಮಂತ್ರಿಯಾಗಿ ಮುನ್ನಡೆಸಿ ‘ಉಳುವವನೇ ಒಡೆಯ’ ‘ಗರಿಬಿ ಹಟಾವ್’, ‘ಹಸಿರು ಕಾಂತ್ರಿ’, ಬ್ಯಾಂಕ್ ರಾಷ್ಟ್ರೀಕರಣದ ಮೂಲಕ ಬಡವರ ಕಣ್ಮಣಿಯಾಗಿ ಹೊರಹೊಮ್ಮಿದ್ದರು ಎಂದರು. ಇನ್ನೊರ್ವ ನಾಯಕ “ಉಕ್ಕಿನ ಮನುಷ್ಯ” ಎಂದೇ ಖ್ಯಾತರಾಗಿದ್ದ ಸರದಾರ ವಲ್ಲಬಾಯಿ ಪಟೇಲ್ರನ್ನು ಕೊಂಡಾಡಿದ ತೆಂಗೇರಿ, ಪಟೇಲ್ ಮತ್ತು ಇಂದಿರಾಗಾಂಧಿ ಇಂದಿನ ಯುವ ಪೀಳಿಗೆÉಗೆ ಆದರ್ಶರಾಗಿದ್ದಾರೆ ಎಂದರು. 1947 ರಲ್ಲಿ ಭಾರತದ ಪ್ರಥಮ ಗೃಹ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸರದಾರ ವಲ್ಲಭಬಾಯಿ ಪಟೇಲ್ ಅನೇಕ ದಿಟ್ಟ ನಿರ್ಣಯ ಕೈಗೊಂಡಿದ್ದರು. ಸ್ವತಂತ್ರ ಭಾರತದ ಶಿಲ್ಪಿ ಎಂದೇ ಹೆಸರಾಗಿದ್ದ ಅವರು, ರಾಜನ ಆಳ್ವಿಕೆಯಲ್ಲಿದ್ದ 550 ಪ್ರಾಂತ್ಯಗಳನ್ನು ಒಗ್ಗೂಡಿಸಿ ಅಖಂಡ ಭಾರತಕ್ಕೆ ಭದ್ರ ಬುನಾದಿ ಹಾಕಿದ್ದರು ಎಂದು ಪಟೇಲ್ರ ಆಡಳಿತವನ್ನು ಶ್ಲಾಘೀಸಿದರು.

ಕಾರ್ಯಕ್ರಮದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು, ಮುಖಂಡರು ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ದೇಶದ ಪ್ರಥಮ ಗೃಹಮಂತ್ರಿ ಸರದಾರ ವಲ್ಲಬಾಯಿ ಪಟೇಲ್ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಒಂದು ನಿಮಿಷದ ಮೌನ ಆಚರಿಸಿ ಗೌರ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಆಗ್ನೇಲ್ ಡಾಯಸ್, ಕಾಂಗ್ರೆಸ್ ಅÀಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯಾ ಸಾಬ್ ಜೋಗಮಠ, ಪಕ್ಷದ ಮುಖಂಡರಾದ ನೆಲ್ಸನ್ ರೊಡ್ರಗಿಸ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಬಾಲು ನಾಯ್ಕ, ಕೃಷ್ಣ ಹರಿಜನ,
ಸಿರಾಜ್ ಶೇಖ್, ಆದಂ ಶೇಖ್, ಜೋಸೆಫ್ ಡಯಾಸ್, ಸುದರ್ಶನ್ ಹೊನ್ನಾವರ, ಗಣಪತಿ ಮೇಸ್ತ, ಮಾದೇವ ನಾಯ್ಕ ಕರ್ಕಿ, ಮೋಹನ್ ಮೇಸ್ತ, ಹೆನ್ರಿ ಲೀಮಾ, ಚಂದ್ರಶೇಖರ್ ಚಾರೋಡಿ, ಸಾಲ್ವೋದರ್ ಲೋಪಿಸ್ ಇನ್ನೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಬಿ.ಸಿ.ಸಿ. ಕಾರ್ಯದರ್ಶಿ ಬ್ರಾಜಿಲ್ ಪಿಂಟೊ ಎಲ್ಲರನ್ನೂ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.



Leave a Comment