
ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಭಾಷಾ ಜ್ಞಾನದ ಬಗ್ಗೆ ಇನ್ನಷ್ಟು ಆಸಕ್ತಿ ಮೂಡಿಸಲು ಹಾಗೂ ನಿರರ್ಗಳವಾಗಿ ಇಂಗ್ಲೀಷ್ ಭಾಷೆ ಮಾತನಾಡಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಇಂಗ್ಲೀಷ್ ಕ್ಲಬ್ ಹೊನ್ನಾವರ ಇವರ ವತಿಯಿಂದೆÆAದು ದಿನದ ಕಾರ್ಯಗಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಲಕ್ಷೇಶ್ವರದ ದತ್ತಾತ್ರೇಯ ವಿದ್ಯಾಸಂಸ್ಥೆಯ ಪ್ರಾಚಾರ್ಯರಾದ ಅಶೋಕ ಎಂ.ಪೂಜಾರ ಮಾತನಾಡಿ ಇಂದು ಇಂಗ್ಲೀಷ್ ಜ್ಞಾನ ತೀರಾ ಅಗತ್ಯವಾಗಿದ್ದು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾದ ಮಹತ್ವದ ಜವಾಬ್ದಾರಿ ಇದೆ. ಕೇವಲ ಪರಿಕ್ಷೆ ದೃಷ್ಟಿಯಿಂದ ವಿದ್ಯಾರ್ಥಿಗಳನ್ನು ಸಜ್ಜು ಮಾಡದೇ ಅವರ ಭವಿಷ್ಯದ ದೃಷ್ಠಿಯಿಂದ ನಾವು ಸಂಪೂರ್ಣ ಮಾಹಿತಿ ನೀಡಬೇಕು. ಶಿಕ್ಷಕರಿಗೆ ಈ ಬಗ್ಗೆ ಹೆಚ್ಚಿನ ಜ್ಞಾನ ಇದ್ದರೆ ಮಾತ್ರ ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡಲು ಸಾಧ್ಯ. ಶಿಕ್ಷಕರು ವಿದ್ಯಾರ್ಥಿಗಳಿಗಎ ಸ್ಪೋಕನ್ ಇಂಗ್ಲೀಷ್,ಕೌಶಾಲ್ಯಭಿವೃದ್ದಿ, ವ್ಯಾಕರಣದಂತಹ ವಿಷಯಗಳನ್ನು ಅರಿತು ವಿದ್ಯಾರ್ಥಿಗಳಿಗೆ ತಿಳಿಸಬೇಕಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಭಜಂತ್ರಿ ಮಾತನಾಡಿ ಈ ಕಾರ್ಯಗಾರದ ಸದುಪಯೋಗವನ್ನು ಎಲ್ಲಾ ಶಿಕ್ಷಕರು ಪಡೆದುಕೊಳ್ಳುವಂತೆ ತಿಲೀಸಿ ತಮ್ಮ ಶಾಲೆಗೆ ತೆರಳಿದಬಳಿಕ ಮಕ್ಕಳಿಗೆ ಈ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಯೋಜಕರಾದ ಜಿ.ಎಚ್.ನಾಯ್ಕ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ ನಾಯ್ಕ, ಇಂಗ್ಲೀಷ್ ಕ್ಲಬ್ ಅಧ್ಯಕ್ಷರಾದ ಫಿಲೋಮೀನಾ ರೊಡ್ರಗೀಸ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಕುರಿತು ಅನಿಲಗೋಡ ಜನತಾ ವಿದ್ಯಾಲಯದ ಸಹಶಿಕ್ಷಕಿ ಕಲ್ಪನಾ ರೆಡ್ಡಿ ಪ್ರಾಸ್ತವಿಕವಾಗಿ ಮಾತನಾಡಿ ಗಣ್ಯರನ್ನು ಪರಿಚಯಿಸಿದರು. ಫಿಲೋಮಿನಾ ರೋಡ್ರಗೀಸ್ ಸ್ವಾಗತಿಸಿ ತಿಮ್ಮಪ್ಪ ಹೆಗಡೆ ವಂದಿಸಿದರು.
ಕಾರ್ಯಗಾರದ ಬಳಿಕ ವೇಲಫೇರ್ ಸಂಸ್ಥೆಯ ಜನತಾ ವಿದ್ಯಾಲಯ ಅನಿಲಗೋಡ ಪ್ರೌಡಶಾಲೆಗೆ ಭೇಟಿ ನೀಡಿ ೧೦ನೇ ತರಗತಿ ವಿದ್ಯಾರ್ಥಿಗಳೋಂದಿಗೆ ಚರ್ಚಿಸಿದರು. ಶಾಲಾ ಶಿಕ್ಷಕರು ಆತ್ಮೀಯತೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.
Leave a Comment