
ಹಳಿಯಾಳ :- ಜಯ ಕರ್ನಾಟಕ ಸಂಘಟನೆಯು ನೆರೆ ಪರಿಹಾರ ವಿಷಯದಲ್ಲಿ ರಾಜ್ಯಾದ್ಯಂತ ಸಾವಿರಾರು ಜನತೆಗೆ ನೆರವಾಗಿದೆ ಅಲ್ಲದೇ ಜನಸಾಮಾನ್ಯರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿಯೂ ಇನ್ನು ಹೆಚ್ಚಿನ ಜನ ಸೇವೆ ಮಾಡಲು ಸಂಘಟನೆ ಉತ್ಸುಕವಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಆರ್. ಚಂದ್ರಪ್ಪ ಭರವಸೆ ನೀಡಿದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಜಯ ಕರ್ನಾಟಕ ಜಿಲ್ಲಾ ಮತ್ತು ತಾಲೂಕಾ ಸಂಘಟನೆಗಳು ಹಮ್ಮಿಕೊಂಡ ಕನ್ನಡ ರಸಮಂಜರಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.
ಹಳಿಯಾಳದಲ್ಲಿ ಜಯ ಕರ್ನಾಟಕ ಸಂಘಟನೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸಂಘಟನೆಯ ಈ ಮೊದಲಿನ ತಾಲೂಕಾ ಅಧ್ಯಕ್ಷರಾದ ವಿಲಾಸ ಕಣಗಲಿಯವರ ಉತ್ತಮ ರೀತಿಯಲ್ಲಿ ಸಂಘಟನೆಯನ್ನು ಮುಂದುವರೆಸಿಕೊಂಡು ಹೋಗುವುದನ್ನು ಮನಗೊಂಡು ಅವರನ್ನು ಘಟ್ಟದ ಮೇಲಿನ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಚಂದ್ರಪ್ಪ ಘೋಷಿಸಿದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ನಪ್ಪ ಓಲೆಕರ ಮಾತನಾಡಿ ಸಂಘಟನೆಯು ರೈತರ ಮತ್ತು ಕೂಲಿ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದೆ ಅಲ್ಲದೇ ಸರ್ಕಾರದ ಸವಲತ್ತುಗಳನ್ನು ಜನ ಸಾಮಾನ್ಯರಿಗೆ ದೊರಕಿಸಿ ಕೊಡುವಲ್ಲಿ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಘಟ್ಟದ ಮೇಲಿನ ಅಧ್ಯಕ್ಷರಾದ ವಿಲಾಸ ಕಣಗಲಿ ಮಾತನಾಡಿ ಸಾಮಾಜಿಕ ಚಟುವಟಿಕೆ, ನಾಡು-ನುಡಿ ಭಾಷೆ ಹಾಗೂ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಸಾರ್ವಜನೀಕರ ಸಹಕಾರವು ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದ ಹಳಿಯಾಳ ತಾಲೂಕಿನ ಒಟ್ಟೂ 61 ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ, ನಗದು ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ಹಳಿಯಾಳದ ಆದಿಶಕ್ತಿ ಪಿಠಾಧ್ಯಕ್ಷರಾದ ಶ್ರೀ ಕೃಷ್ಣಾನಂದ ಭಾರತಿ ಸ್ವಾಮಿಜೀ, ಕ್ರೀಶ್ಚಿಯನ್ ಧರ್ಮ ಗುರುಗಳಾದ ಜ್ಞಾನಪ್ರಕಾಶರಾವ್ ಹಾಗೂ ಮುಸ್ಲಿಂ ಧರ್ಮಗುರು ಮುಫ್ತಿ ಫಯಾಜಅಹ್ಮದ ಇಟ್ಟಂಗಿವಾಲೆ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಲ್ಸನ್ ಫರ್ನಾಂಡಿಸ್, ಪ್ರಮುಖರಾದ ವಿಕ್ರಾಂತ ಶೆಟ್ಟಿ, ಸಿದ್ದಾಪುರ ತಾಲೂಕಾಧ್ಯಕ್ಷ ಶಂಕರಮೂರ್ತಿ ನಾಯ್ಕ, ಯಲ್ಲಾಪುರದ ದತ್ತಯಾತ್ರೇಯ ಹುಂದ್ರೆ, ಹಳಿಯಾಳದ ಯಲ್ಲಪ್ಪಾ ಮಾಲವನಕರ, ಶಿರಾಜ ಮುನವಳ್ಳಿ, ದತ್ತಾ ಬಾಂದೇಕರ ಪ್ರಮುಖರಾದ ಸುಭಾಷ ಟೊಸುರ, ಕಿರಣ ಕಮ್ಮಾರ, ಗೋಪಾಲ ಗರಗ, ಅನೀಸ್ ಪೀರವಾಲೆ, ಜ್ಯೋತಿಬಾ, ಸಿಕಂದರ ಮುಲ್ಲಾ,ವಿನೋದ, ಅಮರ ಮೊದಲಾದವರು ಇದ್ದರು.
Leave a Comment