
ಹಳಿಯಾಳ: ಇಂದಿನ ಯುವಕರು ಸಂಸ್ಕøತಿ ಸಂರಕ್ಷಣೆಯ ರಾಯಬಾರಿಗಳು ನಿಮಗೆ ನಮ್ಮ ಮೂಲ ಕಲೆಗಳನ್ನು ಪರಿಚಯ ಮಾಡುವುದರಿಂದ ನೀವು ಮುಂದಿನ ಜನಾಂಗಕ್ಕೆ ಪರಿಚಯ ಮಾಡುತ್ತೀರಿ ಆದ್ದರಿಂದಲೇ ಈ ವಿಚಾರ ಸಂಕಿರಣವನ್ನು ಕಾಲೇಜು ಮಕ್ಕಳಿಗೆ ಹಮ್ಮಿ ಕೊಳ್ಳಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಹೇಳಿದರು.
ಪಟ್ಟಣದ ಶಿವಾಜಿ ಕಾಲೇಜಿನ ಸಭಾ ಭವನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಹೊಂಗಿರಣ ಮತ್ತು ಸ್ಥಳೀಯ ಸಂಘ ಸಂಸ್ಥೆಯ ಸಹಯೋಗದಲ್ಲಿ ನಡೆದ ಯಕ್ಷ ಸಂಭ್ರಮ ಮೂರನೇಯ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮದ ನಿರ್ದೇಶಕರಾದ ಡಾ. ಬಸು ಬೇವಿನಗಿಡದ ಸೂತ್ರದ ಗೊಂಬೆಯಾಟದ ಬಗ್ಗೆ ಉಪನ್ಯಾಸ ನೀಡಿದರು.

ಯಕ್ಷಗಾನ ಕಲಾವಿದೆ ಮಯುರಿ ಉಪಾಧ್ಯಾಯ ಮಾತನಾಡಿ ಯಕ್ಷಗಾನ ಕಲಾವಿದರ ಅವಲೋಕನದಲ್ಲಿ ಮಾತನಾಡಿ ಮಹಿಳೆಯರ ಸ್ಥಿತಿಗತಿಯ ಕುರಿತು ತಿಳಿಸಿದರು. ಮೂಡಲಪಾಯ ಯಕ್ಷಗಾನದ ವಿದ್ವಾಂಸರಾದ ಡಾ.ಕರಿಶೆಟ್ಟಿ ರುದ್ರಪ್ಪ ಮಾತನಾಡಿ ಮೂಡಲಪಾಯ ಯಕ್ಷಗಾನದ ಪ್ರಾತ್ಯಕ್ಷಿಕೆಯನ್ನು ಮಾಡಿದರು. ಆ ಯಕ್ಷಗಾನದ ಕುಣಿತ, ಹಾಡಿನ ದಾಟಿ ಮತ್ತು ಅದರ ಹೆಜ್ಜೆಗಳನ್ನು ಮಕ್ಕಳಿಗೆ ಪ್ರಾಯೋಗಿಕವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ಸದಸ್ಯೆ ನಿರ್ಮಲಾ ಹೆಗಡೆ, ಯಕ್ಷಗಾನ ಕಲಾವಿದೆ ಸುಮಂಗಲಾ ಹೆಗಡೆ, ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಜಿಡಿ ಗಂಗಾಧರ, ಬಯಲಾಟ ಅಕಾಡೆಮಿ ಸದಸ್ಯ ಸಿದ್ದಪ್ಪ ಬಿರಾದಾರ, ನಿವೃತ್ತ ಉಪನ್ಯಾಸಕ ಎಸ್.ಎಚ್.ಕಡೆಮನಿ ಇತರರು ಇದ್ದರು. ನಾರಾಯಣ ಮಿರಾಶಿ ಸ್ವಾಗತಿಸಿದರು. ಉಪಾನ್ಯಸಕ ವಿಠ್ಠಲ ಭೋವಿ ನಿರೂಪಿಸಿದರು. ಗಜಾನನ ಮಾಂಗ್ಲಿ ವಂದಿಸಿದರು.
Leave a Comment