
ಹೊನ್ನಾವರ: ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಶನ್ ಮತ್ತು ಉತ್ತರ ಕನ್ನಡ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಶನ್ ಇವುಗಳ ಸಹಯೋಗದಲ್ಲಿ ಹೊನ್ನಾವರದ ರೋಟರಿ ಕ್ಲಬ್ ಏರ್ಪಡಿಸಿದ್ದ ರಾಜ್ಯಮಟ್ಟದ ಚೆಸ್ ಟೂರ್ನಿಮೆಂಟ್ ಎರಡು ವಿಭಾಗಗಳಲ್ಲಿ 2 ದಿನಗಳ ಕಾಲ ಪಟ್ಟಣದ ಸಿ.ಬಿಎಸ್.ಸಿ ಸ್ಕೂಲನಲ್ಲಿ ಯಶ್ವಸಿಯಾಗಿ ಸಂಪನ್ನಗೊಂಡಿತ್ತು. 16 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಧನುಶ್ ರಾಮ್, ದ್ವಿತೀಯ ಸ್ಥಾನವನ್ನು ಓಜಸ್ವಿ ಮತ್ತು ತೃತೀಯ ಸ್ಥಾನವನ್ನು ಹಾಸನದ ಪ್ರಜ್ವಲ್ ಪಡೆದುಕೊಂಡರು. 16 ವರ್ಷ ಮೇಲ್ಪಟ್ಟವರ ಮುಕ್ತ ವಿಭಾಗದಲ್ಲಿ ಸಂದರ್ಶನ ಭಟ್ ಪ್ರಥಮ ಸ್ಥಾನವನ್ನು ಕುಶಾಲನಗರದ ಆಗಸ್ಟಿನ್ ದ್ವಿತೀಯ ಸ್ಥಾನವನ್ನು ಮತ್ತು ತೃತೀಯ ಸ್ಥಾನವನ್ನು ಲಿಖಿತ ಚಿಲುಕುರ್ಕಿ ಪಡೆದುಕೊಂಡರು.
ಸಮಾರೊಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಬಳಿಕ ಡಾ|| ಮಂಜುನಾಥ ನಾಯ್ಕ ಮಾತನಾಡಿ ಚೆಸ್ ಆಟವು ನಮ್ಮ ತಾಳ್ಮೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಮೇರಿಕಾದಲ್ಲಿ ನಡೆದ ವಿಕಲಚೇತನರ ಚೆಸ್ಟ್ ಟೂರ್ನಮೆಂಟ್ನಲ್ಲಿ ಬಂಗಾರದ ಪದಕ ಪಡೆದು ಜಾಗತಿಕ ಚಾಂಪಿಯನ್ನಾಗಿ ನಾಡಿಗೆ ಕೀರ್ತಿ ತಂದ ಸಮರ್ಥ ಜೆ. ರಾವ್. ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ದಿನೇಶ ಕಾಮತ್, ರೋಟರಿಯನ್, ಎಸ್.ಎನ್.ಹೆಗಡೆ, ಸೂರ್ಯಕಾಂತ ಸಾರಂಗ, ಎಸ್.ಎಮ್. ಭಟ್ ಉಪಸ್ಥಿತರಿದ್ದರು. ಪ್ರೋ ಜಿ.ಪಿ.ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

Leave a Comment