\

ಹಳಿಯಾಳ :- ಪಟ್ಟಣದ ದುರ್ಗಾನಗರ ನಿವಾಸಿಯಾಗಿದ್ದ ನಿವೃತ್ತ ಎಎಸ್ಐ ಬಾಳು ಜೆ ಜಾಧವ ಅನಾರೋಗ್ಯ ಸಮಸ್ಯೆಯಿಂದ ತಮ್ಮ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು.
ವೀರಪ್ಪನ್ ಶೈಲಿಯ ತಮ್ಮ ಮಿಸೆಯಿಂದಲೇ ಪಟ್ಟಣದಲ್ಲಿ ಚಿರಪರಿಚಿತರಾಗಿದ್ದ ಬಾಳು ಅವರು ಹಳಿಯಾಳ ಪುರಸಭೆಯ ಬಿಜೆಪಿ ಸದಸ್ಯೆ ಸಂಗೀತಾ ಜಾಧವ ಅವರ ತಂದೆಯಾಗಿದ್ದಾರೆ. ದಿವಂಗತ ಬಾಳು ಅವರು ಗೋವಾ ಪೋಲಿಸ್ ಇಲಾಖೆಯಲ್ಲಿ ಅಸಿಸ್ಟಂಟ್ ಸಬ್ ಇನ್ಸಪೆಕ್ಟರ್ ಆಗಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿ ಹಳಿಯಾಳದಲ್ಲಿ ಬದುಕು ಕಟ್ಟಿಕೊಂಡಿದ್ದರು. ಅವರ ನಿಧನಕ್ಕೆ ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ, ಬಿಜೆಪಿ ಘಟಕ, ಪುರಸಭೆ ಸದಸ್ಯರು ಹಾಗೂ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Leave a Comment