
ಹಳಿಯಾಳ:- ಸಾಮಾಜಿಕ ಜಾಲತಾಣ “ಯುಟ್ಯೂಬ್”ನಲ್ಲಿ ಕಿಡಿಗೇಡಿಗಳು ರಾಷ್ಟ್ರಪುರುಷ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಹಿಂದೂಗಳ ಬಗ್ಗೆ ಅವಹೇಳನಕಾರಿ ಪೊಸ್ಟ್ ಹಾಕಿ ವಿಕೃತಿ ಮೆರೆದಿದ್ದು ಈ ಬಗ್ಗೆ ಮಂಗಳವಾರ ರಾತ್ರಿ ಹಿಂದೂ ಸಮುದಾಯದವರು ಹಾಗೂ ಪಕ್ಷಾತೀತವಾಗಿ ಮುಖಂಡರುಗಳು, ಕಾರ್ಯಕರ್ತರು ಹಳಿಯಾಳ ಪೋಲಿಸ್ ಠಾಣೆ ಎದುರು ಜಮಾಯಿಸಿ ದುಷ್ಕøತ್ಯ ಎಸಗಿದ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದರು.
ಸಾಮಾಜಿಕ ಜಾಲತಾಣ ಯುಟ್ಯೂಬ್ನಲ್ಲಿ “MIYA BHAI SAB KA BAAP” (ಮಿಯಾ ಬಿವಿ ಸಬಕಾ ಬಾಪ) ಎಂದು ಆಂಗ್ಲದಲ್ಲಿ ಬರೆದಿರುವ ಖಾತೆ ಹೊಂದಿರುವ ಅನಾಮಧೆಯ ವ್ಯಕ್ತಿ ಕಳೆದ 6 ದಿನಗಳ ಹಿಂದೆ ಹಳಿಯಾಳದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆದ ಮೇರವಣಿಗೆಯಲ್ಲಿ ಅಶ್ವಾರೂಢ ಶಿವಾಜಿ ಪುಥ್ಥಳಿ ಇರುವ ಶಿವಾಜಿ ವೃತ್ತದ ಬಳಿಯಿಂದ ಸಾಗಿದಾಗ ಹಾಗೂ ಹಿಂದೂ ದೇವಾಲಯದ ಎದುರಿನಿಂದ ಸಾಗಿದ ವಿಡಿಯೋ ತುಣುಕುಗಳನ್ನು ಅಪಲೋಡ್ ಮಾಡಿ ಅದಕ್ಕೆ ರಾಷ್ಟ್ರಪುರುಷ ಶಿವಾಜಿ ಮಹಾರಾಜರ ಹಾಗೂ ಹಿಂದೂಗಳ ಮಾತೆಯರಿಗೆ ಅವಹೇಳನವಾಗುವ ರೀತಿಯಲ್ಲಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ.

ಇದನ್ನು ನೋಡಿದ ಯುವಕರು ತಕ್ಷಣ ಹಿರಿಯ ಗಮನಕ್ಕೆ ತಂದಿದ್ದು ಮಂಗಳವಾರ ರಾತ್ರಿ ಮೊದಲು ಬಿಜೆಪಿ ಪಕ್ಷ, ವಿಶ್ವ ಹಿಂದೂ ಪರಿಷತ್, ಮರಾಠಾ ಸಂಘಟನೆ, ಆರ್.ಎಸ್.ಎಸ್, ಭಜರಂಗದಳ ಸೇರಿದಂತೆ ವಿವಿಧ ಸಂಘಟನೆಯವರು ಹಾಗೂ ಬಳಿಕ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು, ಮರಾಠಾ ಸಮಾಜದವರು, ಹಿಂದೂ ಮುಖಂಡರು ಠಾಣೆಗೆ ಆಗಮಿಸಿ ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಪಡಿಸಿಕೊಂಡು ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ ಕಿಡಿಗೇಡಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಲಿಖಿತ ದೂರು ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಜು ಧೂಳಿ, ಸಂತೋಷ ಘಟಕಾಂಬಳೆ, ತಾನಾಜಿ ಪಟ್ಟೇಕರ, ವಿಲಾಸ ಯಡವಿ, ವಿಜಯ ಬೋಬಾಟಿ, ತುಕಾರಾಮ ಪಟ್ಟೇಕರ, ಅಪ್ಪಾರಾವ ಪೂಜಾರಿ, ಶ್ರೀನಿವಾಸ ಘೊಟ್ನೇಕರ, ಕೃಷ್ಣಾ ಶಹಾಪುರಕರ, ಎಲ್.ಎಸ್.ಅರಿಶೀನಗೇರಿ, ಅನಿಲ ಚವ್ವಾಣ, ಶಂಕರ ಬೆಳಗಾಂವಕರ, ಚೂಡಪ್ಪಾ ಬೋಬಾಟಿ, ಅಜೋಬಾ ಕರಂಜೆಕರ, ಸಿದ್ದು ಶೆಟ್ಟಿ ಮೊದಲಾದವರು ಇದ್ದರು.


Leave a Comment