ಹಳಿಯಾಳ:- ಕೆನರಾ ಬ್ಯಾಂಕ್ನಲ್ಲಿ ಖಾತೆಯನ್ನು ಹೊಂದಿದ್ದು ಸಿಂಡ್ ಆರ್ಸೆಟಿ ಬೆಳಗಾಂವ ಮತ್ತು ಕುಮಟಾ ಹಾಗೂ ರೂಡ್ಸೆಟಿ ಧಾರವಾಡದಲ್ಲಿ ತರಬೇತಿಯನ್ನು ಪಡೆದ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ಶಿಬಿರಾರ್ಥಿಗಳಿಗೆ ಜೊತೆಗೆ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲೆಯ ಕೆನರಾ ಬ್ಯಾಂಕ್ ಗ್ರಾಹಕರಿಗೆ ‘ಸಾಲ ಮೇಳ’ವನ್ನು ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯಲ್ಲಿ ದಿ. 21 ರಂದು ಬೆಳಿಗ್ಗೆ 10.00 ಗಂಟೆಗೆ ಆಯೋಜಿಸಲಾಗಿದೆ.
ಸ್ವ-ಉದ್ಯೋಗ ಆಕಾಂಕ್ಷಿಗಳು, ರೈತರು ಹಾಗೂ ಇತರೆ ವ್ಯಾಪಾರ-ವ್ಯವಹಾರದಲ್ಲಿ ನಿರತರಾದವರು, ಗೃಹ ಸಾಲ, ವಾಹನ ಸಾಲಕ್ಕಾಗಿ ಕೆನರಾ ಬ್ಯಾಂಕ್ ಸಾಲ ಸೌಲಭ್ಯ ಅಗತ್ಯವಿದ್ದಲ್ಲಿ ಸಾಲದ ಅವಶ್ಯಕತೆಯ ಸೂಕ್ತ ವಿವರ ಹಾಗೂ ದಾಖಲಾತಿಗಳೊಂದಿಗೆ ಸಾಲ ಮೇಳದಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
Leave a Comment