
ಪ್ರಧಾನವÀುಂತ್ರಿ ಉಜ್ವಲಾ ಯೋಜನೆಯಡಿಯಲ್ಲಿ ದೊರೆಯುವ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ನಲ್ಲಿ ಅನಿಲದ ಬದಲಾಗಿ ನೀರು ತುಂಬಿರುವ ಪ್ರಕರಣವೊಂದು ಹೊನ್ನಾವರ ತಾಲೂಕಿನ ಚಂದಾವರ ಗ್ರಾಪಂ ವ್ಯಾಪ್ತಿಯ ಶಿರೂರಿನಲ್ಲಿ ಸಂಭವಿಸಿದೆ
ಶಿರೂರಿನ ಬೇಬಿ ಶ್ರೀಧರ ನಾಯ್ಕ ಅವರ ಮನೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ಇತ್ತೀಚೆಗೆ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿಯಲ್ಲಿ ಹೊನ್ನಾವರದ ಕರ್ಕಿ ನಾಕಾದಲ್ಲಿರುವ `ಶ್ರೀದೇವಿ ಕೃಪಾ’ ಏಜೆನ್ಸಿ ವತಿಯಿಂದ ಸಿಲಿಂಡರ್ ಹಾಗೂ ಗ್ಯಾಸ್ ಸ್ಟೋವ್ ಪಡೆದಿದ್ದರು. ನ. 20 ರಂದು ಖಾಲಿಯಾಗಿರುವ ಸಿಲಿಂಡರ್ನ್ನು ನೋಂದಣಿ ಮಾಡಿಸಿಕೊಂಡಿದ್ದರು. ಸೋಮವಾರ ಬೆಳಿಗ್ಗೆ ಬೇಬಿ ನಾಯ್ಕ ಎಂಬುವರು ತಮ್ಮ ಹಳೆಯ ಗ್ಯಾಸ್ ಸಿಲಿಂಡರ್ ಖಾಲಿಯಾದ ಹಿನ್ನೆಲೆಯಲ್ಲಿ ಹೊಸದಾಗಿ ಖರೀದಿಸಿದ ಸಿಲಿಂಡರ್ ಅಳವಡಿಸಿ ಅಡುಗೆ ಮಾಡಲು ಮುಂದಾಗಿದ್ದರು. ಹಲವಾರು ಬಾರಿ ಲೈಟರ್ನಿಂದ ಗ್ಯಾಸ್ ಒಲೆಗೆ ಬೆಂಕಿ ಹಚ್ಚಲು ಎಸ್ಟೇ ಬಾರಿ ಪ್ರಯತ್ನಿಸಿದರೂ ಸಾಧ್ಯವಾಗದೇ ಇರುವುದರಿಂದ ತಮ್ಮ ಮಗನ ಹತ್ತಿರ ವಿಷಯ ತಿಳಿಸಿದ್ದಾರೆ. ಈ ವೇಳೆ ಬೇಬಿ ನಾಯ್ಕ ಅವರ ಮಗ ಚಿದಾನಂದ ಮತ್ತೊಮ್ಮೆ ಸ್ಟೋವ್ ಹಚ್ಚಲು ಪ್ರಯತ್ನಿಸಿದ್ದಾರೆ. ಆಗಲೂ ಸಾಧ್ಯವಾಗದೇ ಇರುವುದನ್ನು ಮನಗಂಡು ಸಿಲಿಂಡರ್ನ್ನು ಇಳಿಮುಖಮಾಡಿ ನೋಡಿದಾಗ ಸಿಲಿಂಡರ್ನ ರಂದ್ರದಲ್ಲಿ ನೀರು ಬರುತ್ತಿರುವುದನ್ನು ಖಚಿತಪಡಿಸಿದ್ದಾನೆ. ಅಲ್ಲದೇ ಸಿಲಿಂಡರ್ನ್ನು ಅಲುಗಾಡಿಸಿದಾಗ ಅದರ ಒಳಭಾಗದಲ್ಲಿ ಹೆಚ್ಚಿನ ಪ್ರಾಮಾಣದಲ್ಲಿ ನೀರಿನ ಶಬ್ಧ ಕೇಳಿಸುತ್ತಿದ್ದು, ಅನಿಲದ ಜತೆಗೆ ಶೇ.80 ರಷ್ಟು ನೀರು ಮಿಶ್ರಣ ಮಾಡಿರುವುದು ದೃಢವಾಗಿದೆ. ಗ್ಯಾಸ್ ಸಿಲಿಂಡರ್ನಿಂದ ಹೊರಬರುತ್ತಿರುವ ನೀರನ್ನು ಬೆಂಕಿಗೆ ಸ್ಪರ್ಷಿಸಿದಾಗಲೂ ಬೆಂಕಿ ಹೊತ್ತಿಕೊಳ್ಳದೇ ಇರುವುದು ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಶ್ರೀದೇವಿ ಕೃಪಾ’ ಏಜೆನ್ಸಿ ಸಿಬ್ಬಂದಿ. ಮಾಹಿತಿ ನೀಡಿ “ಎಲ್ಪಿಜಿ ಗ್ಯಾಸ್ ಸಿಲಿಂಡರ್ನಲ್ಲಿ ನೀರು ಮಿಶ್ರಣವಾಗುವ ದೂರುಗಳು ಕೆಲವು ಮಾತ್ರ. ಗ್ರಾಹಕರಿಗೆ ಹೀಗೆ ಆದಲ್ಲಿ ನಮ್ಮನ್ನು ಸಂಪರ್ಕಿಸಿದರೆ ಬದಲಿ ಸಿಲಿಂಡರ್ ನೀಡುತ್ತೇವೆ. ನೀರಿನ ಮಿಶ್ರಣದ ಬಗ್ಗೆ ನಾವು ಶಿವಮೊಗ್ಗದ ಗೋಡನ್ನಿನ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುವಂತೆ ತಿಳಿಸುತ್ತೇವೆ”ಎಂದಿದ್ದಾರೆ.
ಸಿಲಿಂಡರ್ನಲ್ಲಿ ಪೂರ್ತಿಯಾಗಿ ನೀರು ಮಿಶ್ರಣ ಮಾಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಈ ಕುರಿತು ನಾನು `ಶ್ರೀದೇವಿ ಕೃಪಾ’ ಏಜೆನ್ಸಿಯರನ್ನು ಸಂಪರ್ಕಿಸಿದ್ದೇನೆ. ಈ ರೀತಿಯ ಹಲವಾರು ದೂರುಗಳು ಬರುತ್ತವೆ ಎನ್ನುತ್ತಾರೆ. ಆದರೆ ದೂರದ ಹಳ್ಳಿಗರಿಗೆ ಮತ್ತು ಬಡವರಿಗೆ ಇದು ಅನ್ಯಾಯವಾದಂತೆ. ಕೂಡಲೆ ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳುವುದು ಸೂಕ್ತ’ ಎಂದು ಚಿದಾನಂದ ನಾಯ್ಕ, ಶಿರೂರು ಆಗ್ರಹಿಸಿದ್ದಾರೆ.
……….
Leave a Comment