ಸ್ವಚ್ಚ ಹೊನ್ನಾವರ ಕನಸನ್ನು ಹೊತ್ತಿರುವ ಯುವಬ್ರೀಗೆಡ್ ಡಿಸೆಂಬರ್ 15ರಂದು ಮಡಿವಾಳ ಹಳ್ಳ ಸ್ವಚ್ಚ ಮಾಡುವ ಸಂಕಲ್ಪ ಇಟ್ಟುಕೊಂಡಿದೆ ಎಂದು ಯುವ ಬ್ರಿಗೆಡ್ ಜಿಲ್ಲಾ ಸಂಚಾಲಕರಾದ ಮಹೇಶ ಕಲ್ಯಾಣಪುರ ಪತ್ರಿಕಾಗೊಷ್ಟಿಯಲ್ಲಿ ಮಾಹಿತಿ ನೀಡಿದರು.

ಲಕ್ಷ್ಮೀನಾರಾಯಣ ನಗರದ ವಿವೇಕಾನಂದ ಸೇವಾ ಕೇಂದ್ರದಲ್ಲಿ ನಡೆದ ನಡೆದ ಮಾಧ್ಯಮಗೊಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಹೊನ್ನಾವರದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನ ಹಲವು ಹಳ್ಳಗಳು ಬತ್ತಿ ಹೋಗುತ್ತಿದೆ. ಇದರಲ್ಲಿ ಪಟ್ಟಣದ ಮಡಿವಾಳ ಹಳ್ಳವು ಒಂದಾಗಿದ್ದು ಇಂದು ಪ್ಲಾಸ್ಟಿಕ್, ಹಾಗೂ ಇತರೆ ಕಸಗಳಿಂದ ತುಂಬಿ ಹೋಗಿರುದನ್ನು ಮನಗಂಡು ಸ್ವಚ್ಚ ಮಾಡಬೇಕೆಂದು ತಿರ್ಮಾನಿಸಿದೆವು ನಮ್ಮ ಉದ್ದೇಶ ಸುಂದರ ಪರಿಸರವನ್ನು ಮುಂದಿನ ಪೀಳಿಗೆಗೆ ಮೀಸಲಾಗಿಡುವ ದೃಷ್ಟಿಯಿಂದ ಈ ಕಾರ್ಯಕ್ಕೆ ಮುಂದಾಗಿದ್ದು ಡಿಸೆಂಬರ್ 15ರ ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮೊಂದಿಗೆ ಕೈ ಜೋಡಿಸುವಂತೆ ಕೋರಿದರು.

ಯುವ ಬ್ರೀಗೆಡ್ ಕಾರ್ಯಕರ್ತ ರಾಮದಾಸ ಹಳದೀಪುರ ಮಾತನಾಡಿ ರವಿವಾರದಂದು ಬೆಳಿಗ್ಗೆ 7ಗಂಟೆಯಿಂದ ಸಾಯಂಕಾಲದವರೆಗೂ ನಡೆಯಲಿದೆ. ಕೇವಲ ಇದು ಆರಂಭವಾಗಿದ್ದು ಮುಂಬರುವ ದಿನದಲ್ಲಿ ಇನ್ನಷ್ಟು ಹಳ್ಳಗಳನ್ನು ಸ್ವಚ್ಚಮಾಡುವ ಗುರಿ ಹೋಂದಿದ್ದೇವೆ. ಈಗಾಗಲೇ ಪಟ್ಟಣ ಪಂಚಾಯತಿ, ಸ್ವಚ್ಚ ಹೊನ್ನಾವರ, ಕ್ಲಿನ್ ಗ್ರೀನ್ ಹೊನ್ನಾವರ ದೂರದ ಮಂಗಳೂರಿನ ಕೆನರಾ ಇಂಜನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಇವರೊಂದಿಗೆ ತಾಲೂಕಿನ ಗ್ರಾಮಸ್ಥರು ಆಗಮಿಸಿ ಸಹಕರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಹೊನ್ನಾವರ ತಾಲೂಕ ಸಂಚಾಲಕರಾದ ರಾಘವೇಂದ್ರ ಮೇಸ್ತ ಉಪಸ್ಥಿತರಿದ್ದರು.

Leave a Comment