
ಹಳಿಯಾಳ :- ಉಕ ಜಿಲ್ಲೆಯ “ಜಮಿಅತ್ ಉಲಮಾ ಎ ಹಿಂದ” ಸಂಘಟನೆಯ ಹಳಿಯಾಳ ಘಟಕದವರ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ಶುಕ್ರವಾರ ರಾಷ್ಟ್ರಪತಿಗಳಿಂದಲೂ ಅಂಕಿತವಾಗಿರುವ ಪೌರತ್ವ ತಿದ್ದುಪಡಿ ವಿಧೇಯಕ (ಸಿಎಬಿ) ವಿರೋಧಿಸಿ ಪಟ್ಟಣದ ಮಿನಿ ವಿಧಾನಸೌಧದ ಎದುರು ಮೌನ ಪ್ರತಿಭಟನೆ ನಡೆಸಿದರು.
ಶುಕ್ರವಾರ ಕೇಂದ್ರ ಸರ್ಕಾರ ಮಂಡಿಸಿರುವ ವಿಧೇಯಕದ ವಿರುದ್ದದ ಬಿತ್ತಿಪತ್ರಗಳನ್ನು ಹಿಡಿದು ಮಿನಿ ವಿಧಾನಸೌಧಕ್ಕೆ ಆಗಮಿಸಿದ ಅವರು ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದರು.
ಮನವಿಯಲ್ಲಿ ಧರ್ಮದ ತಳಹದಿ ಮೇಲೆ ಪೌರತ್ವ (ಸಿಎಬಿ) ಕಾನೂನು ರೂಪಿಸುವುದಕ್ಕೆ ನಮ್ಮ ಬಲವಾದ ವಿರೋಧವಿದೆ. ಈ ವಿಧೇಯಕದಿಂದ ಸಂವಿಧಾನದ ಕಲಂ-14 ಮತ್ತು 15ರನ್ವಯ ಭಾರತದ ಪ್ರಜೆಗಳ ಸಮಾನತೆ ನಿರಾಕರಿಸುವುದರಿಂದ ನಮ್ಮ ತೀವೃ ವಿರೋಧವಿದೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದ್ದಾರೆ.

ದಲಿತ ಸಂಘಟನೆ ಬೆಂಬಲ :- ಮುಸ್ಲಿಂ ಸಮುದಾಯದ ಪ್ರತಿಭಟನೆಗೆ ತಮ್ಮ ಸಂಪೂರ್ಣ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮೀತಿ(ಭೀಮವಾದ) ಸಂಘಟನೆಯ ಜಿಲ್ಲಾ ಸಂಚಾಲಕ ಅಣ್ಣಪ್ಪಾ ಬಂಡಿವಾಡ ಸ್ವತಂತ್ರ್ಯ ಭಾರತದಲ್ಲಿ ಎಲ್ಲರಿಗೂ ಜೀವಿಸುವ ಹಕ್ಕಿದೆ. ಇಲ್ಲಿ ಮುಸ್ಲಿಂರ ಜೊತೆಗೆ ಕ್ರೀಶ್ಚಿಯನ್ನರಿಗೂ ತೊಂದರೆ ಆಗಬಾರದು ನಾವು ಅವರನ್ನು ಬಿಟ್ಟು ಕೊಡುವುದಿಲ್ಲ ಹಾಗೂ ಅವರಿಗೆ ತೊಂದರೆ ಆಗಲೂ ಬಿಡುವುದಿಲ್ಲ. ನಾವು ಸಂವಿಧಾನದ ಪರವಾಗಿದ್ದೇವೆ. ಸ್ವತಂತ್ರ್ಯ ಭಾರತ ಸ್ವತಂತ್ರ್ಯವಾಗಿಯೇ ಇರಬೇಕು. ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ವಿಧೇಯಕವನ್ನು ನಾವು ಒಪ್ಪುವುದಿಲ್ಲ ಎಂದು ವಿದೇಯಕವನ್ನು ವಿರೋಧಿಸಿದ ಅಣ್ಣಪ್ಪಾ ಇದನ್ನು ಬದಲಾಯಿಸದಿದ್ದರೇ ಊಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದರು.
ಪ್ರತಿಭಟನೆಯಲ್ಲಿ ಮುಸ್ಲಿಂ ಧರ್ಮಗುರುಗಳಾದ ಮೌಲಾನಾ ಫಯಾಜ ಇಟ್ಟಂಗಿವಾಲೆ, ಮೌಲಾನಾ ಮುಸ್ತಾಕ, ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಲಿಮ ಬಸರಿಕಟ್ಟಿ, ಪುರಸಭೆ ಕಾಂಗ್ರೇಸ್ ಸದಸ್ಯ ಅಜರ ಬಸರಿಕಟ್ಟಿ, ಪ್ರಮುಖರಾದ ಸುಬಾನಿ ಹುಬ್ಬಳ್ಳಿ, ಗುಲಾಬಷಾ ಲತಿಫನವರ, ಇಮ್ತಿಯಾಜ ಶೇಖ, ರಾಜು ಮುಲ್ಲಾ, ಅಲ್ಲಾಭಕ್ಷ ಮುಜಾವರ, ಇರ್ಫಾನ್ ದೊಡ್ಮಣಿ, ರಹೀಜ ಕೊಟುರ ಮೊದಲಾದವರು ಇದ್ದರು.

Leave a Comment