
ಜೋಯಿಡಾ –
ತಾಲೂಕಿನ ಜೋಯಿಡಾ ಬಸ್ ನಿಲ್ದಾಣದಲ್ಲಿ ಅನಾರೋಗ್ಯದಿಂದ ಮಲಗಿದ್ದ ಬಸವೇಣ್ಣಪ್ಪ.ಯಲ್ಲಪ್ಪ,ಹುಗ್ಗೆಣ್ಣವರ ಎಂಬ ವೃದ್ದನ್ನು ಜೋಯಿಡಾದ ಎ.ಎಸ್.ಐ. ನರೇಂದ್ರ ಆಚಾರಿ ಮತ್ತು ಸಿಬ್ಬಂದಿಗಳು ಅವರ ಮೂಲ ಮನೆಗೆ ತಲುಪಿಸಿದ ಘಟನೆ ನಡೆದಿದೆ.
ಘಟನೆಯ ವಿವರ –
ಬಸವೇಣ್ಣಪ್ಪ ಹುಗ್ಗೆಣ್ಣವರ ಇವರು ಮೂಲತಃ ಕುಂದಗೊಳದ ಲಕ್ಷೀಶದವರು ಕಳೆದ ೪೦ ವರ್ಷ ದ ಹಿಂದೆ ಜೋಯಿಡಾದ ಕಾಡಿಗೆ ಬಿದಿರು ಕಡಿಯುವ ಕೆಲಸಕ್ಕೆ ಬಂದಿದ್ದರು, ಕೆಲ ವರ್ಷಗಳ ಹಿಂದೆ ಈ ಕೆಲಸ ಬಂದ ಆದ ಕಾರಣ ಇಲ್ಲಿನ ಕೆಲ ಹೋಟೆಲ್ ಮತ್ತು ತೋಟದಲ್ಲಿ ಕೆಲಸ ಮಾಡಿ ಕೊಂಡಿದ್ದರು. ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಜೋಯಿಡಾ ಆಸ್ಪತ್ರೆಯಲ್ಲಿ ದಾಖಲಾಗಿದ್ದರು,ಅಲ್ಲಿ ತನ್ನ ಊರು ತನ್ನ ಮಕ್ಕಳ ಬಗ್ಗೆ ತಿಳಿಸಿ ಅವರು ಈಗ ಎಲ್ಲಿದ್ದಾರೆ ಎಂಬುದು ತನಗೆ ತಿಳಿದಿಲ್ಲ ಎಂದು ತನ್ನ ಅಳಲು ತೊಡಿಕೊಂಡರು. ಈ ಬಗ್ಗೆ ಮಾಹಿತಿ ತಿಳಿದ ಜೋಯಿಡಾ ಪೋಲಿಸ್ ನರೇಂದ್ರ ಆಚಾರಿ ತಂಡ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಜ್ಜನ ಹತ್ತಿರ
ವಿವರ ಪಡೆದು ಗದಗ,ಕುಂದಗೋಳ ,ಧಾರವಾಡ ಜಿಲ್ಲೆಗಳ ಪೋಲಿಸರೊಂದಿಗೆ ಮಾಹಿತಿ ಕಲೆ ಹಾಕಿ ಇವರ ಮಕ್ಕಳನ್ನು ಹುಡುಕಿ ಅವರನ್ನು ಜೋಯಿಡಾಕ್ಕೆ ಕರೆಸಿ ಅವರ ತಂದೆಯನ್ನು ಅವರಿಗೆ ಒಪ್ಪಿಸಿದರು.
ವೃದ್ದನನ್ನು ಅವನ ಮನೆ ತಲುಪಿಸುವ ಕೆಲಸ ಮಾಡಿದ ಪೋಲಿಸ್ ಇಲಾಕೆಗೆ ಜೋಯಿಡಾದ ಜನತೆ ಅಭಿನಂದಿಸಿದೆ.
ನರೇಂದ್ರ ಆಚಾರಿ – ಎ.ಎಸ್.ಐ ಜೋಯಿಡಾ ಪೋಲಿಸ್ ಠಾಣೆ.
೮೦ ವರ್ಷದ ವೃದ್ದನನ್ನು ಕಂಡು ನನಗೆ ತುಂಬಾ ಬೇಸರವಾಯಿತು. ಆತನ ಮಕ್ಕಳಿದ್ದು ಕಷ್ಟದ ಕಾಲಕ್ಕೆ ಅವರು ಜೊತೆಗೆ ಇಲ್ಲ ಎಂಬ ಕೊರಗು ಅಜ್ಜನಿಂದ ಕೇಳಿ ಬಂತು. ಕೂಡಲೇ ಅಜ್ಜನ ಹತ್ತಿರ ಅವರಿಗೆ ತಿಳಿದ ಮಾಹಿತಿ ಪಡೆದು ಅವರ ಮಕ್ಕಳನ್ನು ಹುಡುಕಿದೇವು.ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಿಂದ ಈ ಕೆಲಸ ಸಾಧ್ಯವಾಯಿತು.

Leave a Comment