
ಪ್ರೀತಿಯಾಗುವ ಶುಭ ಆರಂಭವು,ನನ್ನೆದೆಯಲಿ ಮೊದಲ ರೊಮಾಂಚನವು,ಕನಸು ನನಸಿನಲ್ಲೂ ನಿನ್ನ ನೆನಪೆಲ್ಲವು,ತಲೆ ಕೆಡಿಸಿದೆ ಆ ಚೆಂದದಿ ನಿನ್ನ ರೂಪವು.
ನೀನಿರುವೆ ಬಲು ಸುಂದರ,ಬರುವೆಯಾ ಒಮ್ಮೆ ಹತ್ತಿರ,ಕೇಳಬೇಕೆನಿಸಿದೆ ನಿನ್ನ ಇಂಚರ,ನಿನ್ನ ಬಿಟ್ಟು ಹೋಗಲಾರೆನು ದೂರ.
ನಿನ್ನನು ಕೈ ಬಡಲಾರೆ,ಪ್ರೀತಿಸುವೇನು ನಾ ಮನಸಾರೆ,ನನ್ನ ಹೃದಯದ ಬಾಗಿಲಿಗೆ ಒಮ್ಮೆ ಬಾರೆ,ಜನ್ಮ ಜನ್ಮಕೂ ನಾ ನಿನ್ನ ಮರೆಯಲಾರೆ.
ಹೊತ್ತು ಗೊತ್ತಿಲ್ಲದೆ ನಿನ್ನೆ ಕಾಣುವ ಬದುಕಾಗಿದೆ,ಈ ಜೀವಕೆ ನಿನ್ನ ಹೆಸರೆ ಉಸಿರಾಗಿದೆ,ಕದ್ದು ಮುಚ್ಚಿ ಪ್ರೀತಿ ಶುರುವಾಗಿದೆ.ಮನಸೆಲ್ಲಾ ನೀನೆಂದು ಬರೆದಾಗಿದೆ.

Leave a Comment