
ಜೋಯಿಡಾ –
ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಅವರಿಗೆ ತಮ್ಮ ಜೀವನದ ಬಗ್ಗೆ ಕನಸು ಕಾಣುದನ್ನು ಪಾಲಕರು ಹೇಳಿ ಕೊಡಬೇಕು,ಅಂದಾಗ ಮಾತ್ರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಹುದ್ದೆಗೆರಲು ಸಾಧ್ಯ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ದಿವಾಕರ ಶೆಟ್ಟಿ ಹೇಳಿದರು.
ಅವರು ಮಂಗಳವಾರ ಕುಂಬಾರವಾಡಾ ಪ್ರಾಥಮಿಕ ಶಾಲೆಯ ಸರಸ್ವತಿ ಪೂಜೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ಮಗು ಶಾಲೆಗೆ ಹೋಗಿ ಬರಲಿ ಎನ್ನುವುದಕ್ಕಿಂತ ಶಾಲೆಗೆ ಹೋಗಿ ಒಳ್ಳೆಯ ಶಿಕ್ಷಣ ಪಡೆಯಲಿ ಎನ್ನುವ ಭಾವನೆ ಇರಬೇಕು. ಮಕ್ಕಳು ಚಿಕ್ಕವರಿದ್ದಾಗಲೇ ಒಳ್ಳೆಯ ನಡತೆ ಕಲಿಸುವ ಜವಾಬ್ದಾರಿ ಪಾಲಕರು ಮತ್ತು ಶಿಕ್ಷಕರ ಮೇಲೆ ಇರುತ್ತದೆ ಎಂದರು. ಜೋಯಿಡಾ ತಾಲೂಕಿನಲ್ಲಿ ಈ ಹಿಂದೆ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಉತ್ತಮ ವಾಗಿ ಆಗಿದೆ ಅದಕ್ಕೆ ಸಹಕರಿಸಿದ ಜೋಯಿಡಾ ಜನತೆಗೆ ಧನ್ಯವಾದಗಳು ಎಂದು ನಮಸ್ಕರಿಸಿದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕುಂಬಾರವಾಡಾ ಗ್ರಾ.ಪಂ ಅದ್ಯಕ್ಷ ಪುರುಷೋತ್ತಮ ಕಾಮತ್ ಮಾತನಾಡಿ ಜೋಯಿಡಾ ತಾಲೂಕಿನಲ್ಲಿ ಶಿಕ್ಷಣ ಉತ್ತಮವಾಗಿದೆ ಆದರೆ ಇಲ್ಲಿ ಶಿಕ್ಷಕರ ಕೊರತೆ ಇದೆ,ಈ ತಾಲೂಕಿನ ಮಕ್ಕಳಿಗೆ ಅತಿಥಿ ಶಿಕ್ಷಕರೇ ದೇವರಾಗಿದ್ದಾರೆ. ಕೂಡಲೇ ಕುಂಬಾರವಾಡಾ ಶಾಲೆಗೆ ಶಿಕ್ಷಣ ಇಲಾಕೆ ಸರ್ಕಾರಿ ಮುಖ್ಯ ಶಿಕ್ಷಕರನ್ನು ನೇಮಿಸಲಿ ಎಂದು ಡಿ.ಡಿ.ಪಿ.ಐ ದಿವಾಕರ ಶೆಟ್ಟಿ ಅವರಿಗೆ ವೇದಿಕೆಯಲ್ಲಿಯೇ ಮನವಿ ಪತ್ರ ಸಲ್ಲಿಸಿದರು.
ಕುಣಬಿ ಸಮಾಜದ ಅದ್ಯಕ್ಷ ಡಾ.ಜಯಾನಂದ ಡೇರೆಕರ ಮಾತನಾಡಿ ತಾಲೂಕಿನ ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ, ಬಸ್ಸ ವ್ಯವಸ್ಥೆ, ಇನ್ನಿತರ ಮೂಲಸೌಕರ್ಯಗಳು ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯ ರಮೇಶ ನಾಯ್ಕ.ತಾ.ಪಂ.ಕಾರ್ಯ ನಿರ್ವಾಹಣಾಧಿಕಾರಿ ಆನಂದ ಬಡಕುಂದ್ರಿ ,ತಾ.ಪಂ.ಸದಸ್ಯ ಸುರೇಶ ಬಂಗಾರಿ,ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಕೃಷ್ಣಾ ದೇಸಾಯಿ,ಗ್ರಾ.ಪಂ.ಸದಸ್ಯ ದತ್ತಾ ದೇಸಾಯಿ, ಕುಂಬಾರವಾಡಾ ವಲಯ ಅರಣ್ಯ ಅಧಿಕಾರಿ ಪ್ರಭುರಾಜ ಪಾಟೀಲ್,ಎ.ಎಸ.ಐ ಪ್ರಶಾಂತ ಸಾವಂತ.ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಯಶವಂತ ನಾಯ್ಕ ಸಂಗಡಿಗರು ನಿರೂಪಿಸಿ ವಂದಿಸಿದರು.

Leave a Comment