
ಸಂಸದ ಅನಂತಕುಮಾರ ಹೆಗಡೆ ಅಧ್ಯಕ್ಷತೆಯಲ್ಲಿ ಶಿರಸಿಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗು ಐ.ಆರ್.ಬಿ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ರಾಷ್ಟ್ರೀಯ ಹೆದ್ದಾರಿ ೬೬ರ ಕಾಮಗಾರಿ ಕುರಿತು ವಿಸ್ತೃತವಾಗಿ ಚರ್ಚಿಸಿ, ಸ್ಥಳೀಯ ನಾಗರೀಕರ ಹಲವು ಸಮಸ್ಯೆ ಮತ್ತು ಕೊರತೆಗಳ ಕುರಿತು ಹಲವಾರು ಸಲಹೆ ಸೂಚನೆಗಳನ್ನು ನೀಡಿದರು.
ಈ ಕೆಳಕಂಡಂತ ವಿಷಯಗಳ ಬಗ್ಗೆ ಚರ್ಚೆ ನಡೆಯಿತು-
೧. ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ನಂ.೬೬ ರಲ್ಲಿ ಪದೇ ಪದೇ ಅಪಘಾತಗಳಾಗುತ್ತಿದ್ದು, ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮವಾಗಿ ಹೆದ್ದಾರಿಯ ಹಲವು ಪ್ರದೇಶಗಳಲ್ಲಿ, ವೈಜ್ಞಾನಿಕ ಮಾರ್ಪಾಡುಗಳನ್ನು ಮಾಡುವಂತೆ ಸೂಚಿಸಲಾಯಿತು.
೨. ಹಾರವಾಡದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ, ಸೀಬರ್ಡ್ ಕಾಲೋನಿಯಿಂದ ಅಂಕೋಲದವರೆಗೂ ಸರ್ವೀಸ್ ರಸ್ತೆಯನ್ನು ನಿರ್ಮಿಸುವುದರ ಜೊತೆಗೆ, ಮಳೆಗಾಲದ ಸಮಯದಲ್ಲಿ ಈ ಪ್ರದೇಶಗಳಲ್ಲಿ ಸರಾಗವಾಗಿ ನೀರು ಹರಿದುಹೋಗುವಂತೆ ಕ್ರಮಕೈಗೊಳ್ಳುವುದು.
೩. ಆವರ್ಸಾ, ಕರ್ಕಿ, ಹಳದೀಪುರ, ಹೊನ್ನಾವರ ಹಾಗೂ ಶಿರಾಲಿಗಳಲ್ಲಿ ೩೦ ಮೀಟರ್ ನಿಂದ ೪೫ಮೀಟಲ್ ವರೆಗೆ ಹೆದ್ದಾರಿ ಅಗಲ ಹೆಚ್ಚಿಸುವುದು, ಜೊತೆಗೆ ಸರ್ವೀಸ್ ರಸ್ತೆ ನಿರ್ಮಿಸುವುದು. ಕಾರವಾರ ಕಡೆಯಿಂದ ಅಂಕೋಲಾ ಪ್ರವೇಶಿಸುವ ಹೆದ್ದಾರಿ ಭಾಗದಲ್ಲಿ ವೃತ್ತ ನಿರ್ಮಿಸುವುದು ಹಾಗೂ ಸಣ್ಣ ವಾಹನಗಳಿಗಾಗಿ ಅಂಡರ್ ಪಾಸ್ ನಿರ್ಮಿಸುವುದು.
೪. ಕುಮಟಾ-ಶಿರಸಿ ರಸ್ತೆಯ ದೀವಗಿಯಲ್ಲಿ ಅಪಘಾತ ನಿಯಂತ್ರಣಕ್ಕಾಗಿ ಸಿಗ್ನಲ್ ಅಳವಡಿಸುವುದು ಹಾಗೂ ಹೆಚ್ಚುವರಿ ಭೂಸ್ವಾಧೀನ ಮಾಡಿಕೊಂಡು ಶಾಶ್ವತ ರಸ್ತೆ ವಿಸ್ತರಣೆ ಮಾಡುವುದು. ರಸ್ತೆ ನಿರ್ಮಾಣ ತಜ್ಙರ ಅಭಿಪ್ರಾಯ ಪಡೆದು ಮೇಲ್ಸೆತುವೆ ನಿರ್ಮಾಣ ಮಾಡಿದಲ್ಲಿ ವಾಹನ ಸಂಚಾರ ಸುಗಮವಾಗುತ್ತದೆ.

೫. ಮಂಕಿಯಲ್ಲಿ ಸರ್ವೀಸ್ ರಸ್ತೆ ಮತ್ತು ಅಂಡರ್ ಪಾಸ್ ನಿರ್ಮಿಸುವುದು, ಕಾಯ್ಕಿಣಿಯಲ್ಲಿ ಅಂಡರ್ ಪಾಸ್ ನಿರ್ಮಾಣ, ಕೆಳಗಿನೂರಿನಲ್ಲಿ ರಸ್ತೆ ಸುರಕ್ಷತೆಗೆ ಮೆಟಲ್ ಬೀಮ್ ಅಳವಡಿಸುವುದು. ಭಟ್ಕಳ ಪಟ್ಟಣದಲ್ಲಿ ಅಂಡರ್ ಪಾಸ್ ನಿರ್ಮಿಸುವುದು ಹಾಗೂ ಸರ್ವಿಸ್ ರಸ್ತೆ ಅಳವಡಿಸುವುದು ಸೇರಿದಂತೆ ಮುಂತಾದ ಅವಶ್ಯಕ ಕಾರ್ಯಗಳನ್ನು ಹಾಗೂ ಹೆದ್ದಾರಿ ಯೋಜನೆಯನ್ನು ಕೂಡಲೇ ಕಾರ್ಯಗತಗೊಳಿಸಲು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.
ಈ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಾದ ಶ್ರೀ ಶಿಸು ಮೋಹನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಶ್ರೀ ಕಿರಣ ಬಿಸೂರ್ ಹಾಗು ಶ್ರೀ ನವೀನ್, ಐ.ಆರ್.ಬಿ ಸಂಸ್ಥೆಯ ಮುಖ್ಯ ವ್ಯವಸ್ಥಾಪಕರಾದ ಶ್ರೀ ಮೋಹನದಾಸ ಮತ್ತು ಶ್ರೀ ಎಸ್. ಎನ್. ಕುಲಕರ್ಣಿ ಮುಂತಾದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment