
ಬಾಗಲಕೋಟೆ ಜಿಲ್ಲೆ ಮುದೋಳ ತಾಲೂಕು ಮೇಲಗಿರಿಯಲ್ಲಿ ನಡೆಯಲಿರುವ 14 ವರ್ಷದ ಒಲಂಪಿಕ್ ಖೋಖೋ ತಂಡವನ್ನು ಜಿಲ್ಲಾ ಮಟ್ಟದ ಆಟಗಾರರನ್ನು ಹೊನ್ನಾವರ ಸೆಂಥ್ ಥಾಮಸ್ ಪ್ರೌಡಶಾಲಾ ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಕರ್ನಾಟಕ ಒಲಂಪಿಕ್ ಅಸೋಶಿಯೇಶನ್ ಹಾಗೂ ಕರ್ನಾಟಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಇವರ ಆಶ್ರಯದಲ್ಲಿ
ಹಮ್ಮಿಕೊಂಡ ಆಯ್ಕೆ ಕಾರ್ಯಕ್ರಮವನ್ನು ಸೆಂಥ್ಥಾಮಸ್ ಮುಖ್ಯೋಪಧ್ಯಾಯರಾದ ಎಸ್.ವೈ ಬೈಲೂರು ಕ್ರೀಡಾ ಧ್ವಜಾರೋಹನದ ಮೂಲಕ ಚಾಲನೆ ನೀಡಿದರು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳು ರಾಜ್ಯಮಟ್ಟದಲ್ಲಿ ಮಿಂಚುವ ಅವಕಾಶ ಕಲ್ಪಿಸಲು ಅಧ್ವೆತ ಸಂಸ್ಥೆ ಮುಂದಾಗಿದ್ದು ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ರಾಜ್ಯಮಟ್ಟದಲ್ಲಿಯೂ ಸಾದನೆ ಮಾಡಿ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಜಿಲ್ಲೆಯ ಪ್ರತಿಭೆಗಳು ಮಿಂಚಲಿ ಎಂದಲಿ ಶುಭ ಹಾರೈಸಿದರು.

ಜಿಲ್ಲಾ ಪಂಚಾಯತ ಸದಸ್ಯೆ ಗಾಯತ್ರಿ ಗೌಡ ಮಾತನಾಡಿ ಇಂದಿನ ಮಕ್ಕಳು ಕ್ರೀಡೆಗಿಂತಲೂ ಮೊಬೂಲ್ ಮೂಲಕ ವಾಟ್ಸಪ್ ಫೆಸಬುಕ್ನಲ್ಲಿ ಮಗ್ನರಾಗಿರುವುದು ಕಳವಳಕಾರಿಯಾಗಿದೆ. ಇಂದು ಮೋಬೈಲ್ ಒಳ್ಳೆಯ ಅಂಶವನ್ನು ಮಾತ್ರ ಬಳಸಿಕೊಳ್ಳೊಣ. ವಿಶಾಲವಾದ ಕ್ರೀಡಾಂಗಣದಲ್ಲಿ ಹುಮ್ಮಸ್ಸಿನಿಂದ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಇದ ಹುಮಸ್ಸು ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ಇರಲಿ. ಅಲ್ಲಿ ಸಾಧನೆ ಮಾಡುವ ಮೂಲಕ ನಮ್ಮ ಜಿಲ್ಲೆಗೆ ಕಿರ್ತಿ ತರುವಂತೆ ಕರೆ ನೀಡಿದರು.
ವೇದಿಕೆಯಲ್ಲಿ ಮಂಕಿ ಗ್ರಾಮ ಪಂಚಾಯತ ಸದಸ್ಯ ಸುರೇಶ ಖಾರ್ವಿ, ಎನ್.ಎಮ್.ಎಸ್ ಮುಖ್ಯೊಪಧ್ಯಾಪಕರಾದ ಪ್ರೇಮಾಕಾಂತ, ದೈಹಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷೆ ಸಾಧನಾ ಬರ್ಗಿ, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಶ್ರೀಕಾಂತ ನಾಯ್ಕ, ಅಧ್ವೆತ ಸೊಟ್ರ್ಸ ಕ್ಲಬ್ ರಾಘವೇಂದ್ರ ಉಪಸ್ಥಿತರಿದ್ದರು.


Leave a Comment