
ಹೊನ್ನಾವರ: ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕಾ ಪಂಚಾಯತ್ ಹೊನ್ನಾವರ, ತಾಲೂಕಾ ಯುವ ಒಕ್ಕೂಟ ಹೊನ್ನಾವರ, ಶ್ರೀ ಮಹಾಗಣಪತಿ ಚಾರಿಟೆಬಲ್ ಮತ್ತು ಸ್ಪೋಟ್ಸ್ ಕ್ಲಬ್ ಕಾಸರಕೋಡ ಇವರ ಸಂಯುಕ್ತ ಆಶ್ರಯದಲ್ಲಿ ರವಿವಾರ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ನಡೆಯಿತು.
ತಾ.ಪಂ ಸದಸ್ಯ ತುಕಾರಾಂ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ಯುವಜನತೆಗೆ ಸ್ಪೂರ್ತಿಯ ಸೆಲೆಯಾದ ವಿವೇಕಾನಂದರ ಜಯಂತಿ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳು ಆಗಮಿಸಿ ಸ್ಪೂರ್ತಿದಾಯಕ ಮಾತುಗಳನ್ನಾಡಬೇಕು. ತಮ್ಮ ಜವಬ್ದಾರಿಯನ್ನು ಮರೆಯಬಾರದು. ಯುವ ಸಂಘಟನೆಗಳು ಸಮಾಜಮುಖಿ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.

ತಾಲೂಕಿನ ಅತ್ಯಂತ ಕ್ರೀಯಾಶೀಲ ಸಂಘಗಗಳೆಂದು ಗುರುತಿಸಲ್ಪಟ್ಟ ಧರ್ಮಜ್ಯೊತಿ ಮಹಿಳಾ ವಾಹಿನಿ ಮಾಗೋಡ, ಕನ್ನಡ ಜ್ಯೋತಿ ಯುವಕ ಸಂಘ ಗೇರುಸೊಪ್ಪ, ಶ್ರೀ ಜೈನ ಜಟಕೆಶ್ವರ ಯುವಕ ಸಮಿತಿ ಟೊಂಕ,ಕಾಸರಕೋಡ ಸಂಘಗಳಿಗೆ ಸ್ವಾಮಿ ವಿವೇಕಾನಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವೈಯಕ್ತಿಕ ಯುವ ಪ್ರಶಸ್ತಿಯನ್ನು ನಿಲುಮೆ ಯುವ ವೇದಿಕೆಯ ಮಂಕಿ ರಘು ಮೇಸ್ತ ಅವರಿಗೆ ನೀಡಲಾಯಿತು.
ತಾ.ಪಂ ಸದಸ್ಯ ಅಣ್ಣಯ್ಯ ನಾಯ್ಕ ಮಾತನಾಡಿ, ಇಂದು ವಿವೇಕಾನಂದರ ಸಂದೇಶ ಸಾರುವ ದಿನ. ಅದರಿಂದ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಯುವಕ ಸಂಘಟನೆಗಳು ಹೆಚ್ಚಿನ ಜವಾಬ್ದಾರಿ ಹೊತ್ತು ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಯುವ ಒಕ್ಕುಟದ ಅಧ್ಯಕ್ಷ ರಾಜೇಶ್ ನಾಯ್ಕ ಮಾತನಾಡಿ ಜಿಲ್ಲೆಯ ಅತ್ಯಂತ ಕ್ರೀಯಾಶೀಲ ಸಂಘಟನೆ ಹೊನ್ನಾವರ ತಾಲೂಕಾ ಯುವ ಒಕ್ಕೂಟವಾಗಿದೆ. ಯುವಕ ಸಂಘಟನೆಗಳು ಚುನಾವಣೆ ಸಂದರ್ಭದಲ್ಲಿ ಡೊನೆಷನ್ ಪಡೆದು ದೊಡ್ಡ ದೊಡ್ಡ ಬ್ಯಾನರ್ ಹಾಕಿ ಕ್ರೀಡಾಕೂಟಗಳ ನಡೆಸುವುದು ಅಥವಾ ಕೇವಲ ರಾಜಕೀಯಕ್ಕೆ ಸಿಮೀತವಾಗಬಾರದು. ವಿವೇಕಾನಂದರಂತಹ ಮಹಾನುಭಾವರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು. ಯುವಜನ ಸೇವಾ ಕ್ರೀಡಾ ಇಲಾಖೆ ಅತ್ಯಂತ ಜಿಡ್ಡುಗಟ್ಟಿದ ಇಲಾಖೆ. ಪುನಶ್ಚೇತನವೇ ಇಲ್ಲವಾಗಿದೆ ಎಂದು ಭೇಸರ ವ್ಯಕ್ತಪಡಿಸಿದರು.
ತಾಲೂಕಾ ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕ ಮಾತನಾಡಿ ಸಂಘಗಳು ಊರಿನ ಅಭಿವೃದ್ದಿ ಬಗ್ಗೆ ಚಿಂತನೆ ಮಾಡಬೇಕು. ಯುವ ಜನತೆಗೆ ಪ್ರೋತ್ಸಾಹ ಸಿಗಲಿ ಎನ್ನುವ ದ್ರಷ್ಟಿಯಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ . ಇದು ಯಾವುದೇ ಪಕ್ಷಕ್ಕೆ ಸಿಮೀತವಾಗಿರದೇ ಪಕ್ಷಾತೀತವಾದ ಒಕ್ಕೂಟವಾಗಿದೆ ಎಂದರು.
ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿವೇಕಾನಂದರ ಸ್ಪೂರ್ತಿದಾಯಕ ಸಂದೇಶಗಳನ್ನು ಯುವ ಸಮುದಾಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಹಾಯಕ ಯುವಜ£ Àಕ್ರೀಡಾಧಿಕಾರಿ ಸುಧೀಶ್ ನಾಯ್ಕ ಸ್ವಾಗತಿಸಿದರು. ಸುನೀತಾ ನಾಯ್ಕ ನಿರೂಪಿಸಿದರು. ರಾಜೇಶ್ ವಂದಿಸಿದರು.


Leave a Comment