
ಕುಮಟಾ/ ತಾಲೂಕಿನ ಸರರ್ಕಾರಿ ಅಸ್ಪತ್ರೆ ಹಾಗೂ ಸರರ್ಕಾರಿ ಆಯುರ್ವೇದ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಗತಿಗಳನ್ನು ಪರಿಶೀಲಿಸಿದರು. ಇದೇ ಸಂದರ್ಬದಲ್ಲಿ ಆಸ್ಪತ್ರೆಯ ಸ್ಥಿತಿಗತಿಯ ಬಗ್ಗೆ ಮೆಚ್ಚಗೆ ವ್ಯಕ್ತಪಡಿಸಿದ ಶಾಸಕರು ಆಯುರ್ವೇದ ಆಸ್ಪತ್ರೆ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತಿದೆ. ಪ್ರತಿನಿತ್ಯ 20 ರಿಂದ 60 ರೋಗಿಗಳು ಸರರ್ಕಾರಿ ಆಯುರ್ವೇದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ಕುಮಟಾ ತಾಲೂಕಿನಿಂದ ಅಲ್ಲದೆ ಶಿರಸಿ ಮುಂತಾದ ಪ್ರದೇಶಗಳಿಂದಲೂ ಬಂದು ಸರರ್ಕಾರಿ ಆಯುರ್ವೇದ ಆಸ್ಪತ್ರೆಗೆ ರೋಗಿಗಳು ಆಗಮಿಸುತ್ತಿದ್ದಾರೆ.ಸರಕಾರ ಹೆಚ್ಚಿನ ಮುತುವರ್ಜಿ ವಹಿಸಿ ಈ ಆಸ್ಪತ್ರೆಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಓದಗಿಸಿ ಕೊಡಬೇಕಿದೆ. ಅದು ಯಾವುದೆ ರೀತಿಯ ಸಮಸ್ಯೆಯನ್ನು ನನ್ನ ಗಮನಕ್ಕೆ ತಂದಲ್ಲಿ, ಸಮಸ್ಯೆ, ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತನೆ ಎಂದು ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಕುಮಟಾ ಸರರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ ಗಣೇಶ ನಾಯ್ಕ, ಡಾ ಶ್ರೀನಿವಾಸ ನಾಯಕ ಆಯುರ್ವೇದ ಆಸ್ಪತ್ರೆಯ ವೈದ್ಯಾದಿಕಾರಿಗಳಾದ ಡಾ. ಪಿ.ಬಿ ಭಾರತಿ, ಹಾಗೂ ಪುರಸಭಾ ಸದಸ್ಯರಾದ ಸಂತೋಷ ನಾಯ್ಕ ಹಾಜರಿದ್ದರು.


Leave a Comment