
ಹೊನ್ನಾವರ ತಾಲೂಕಿನ ಭಾಸ್ಕೇರಿ ಹೊಳೆ ಸೇರುವ ದೊಡ್ಡಹಿತ್ತಲ್ ಸೇತುವೆ ಬಳಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯನ್ನು ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಸಾಲ್ಕೋಡ್ ಚೆಕ್ ನಿರ್ಮಾಣ ಮುಗಿದಿದ್ದು ಅದೇ ಮಾದರಿಯಲ್ಲಿ ಈ ಸ್ತಳದಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಲು ಈಗಾಗಲೇ ಪಂಚಾಯತ ವತಿಯಿಂದ ಚಾಲನೆ ನೀಡಲಾಗಿತ್ತು. ಸ್ಥಳಕ್ಕೆ ಕಾಮಗಾರಿ ಬಳಿಕ ಮಾಧ್ಯಮದವರೊಂದಿಗೆ ಶಾಸಕ ದಿನಕರ ಶೆಟ್ಟಿ ಮಾತನಾಡಿ ಹೊಸಾಕುಳಿ ಗ್ರಾಮದಲ್ಲಿ ನನ್ನ ಅವದೀಯಲ್ಲಿ ಅನೇಕ ಕಾಮಗಾರಿಗಳು ಪ್ರಗತಿಯಲ್ಲಿದೆ.

ಪಂಚಾಯತ ವತಿಯಿಂದ ಈಗಾಗಲೇ ಚೆಕ್ ಡ್ಯಾಂ ನಿರ್ಮಾಣವನ್ನು ಮಾಡುತ್ತಿದ್ದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಕುಡಿಯುವ ನೀರು ಹಾಗೂ ಬೆಳೆಗೆ ನೀರಿನ ಅಭಾವ ಬೇಸಿಗೆಯಲ್ಲಿ ತಪ್ಪುವುದರಿಂದ 5 ಲಕ್ಷ ರೂಪಾಯಿಯನ್ನು ನೀಡಲು ಇಂದು ಅವರಿಗೆ ಭರವಸೆ ನೀಡಿದ್ದೇನೆ ಮುಂದಿನ ದಿನದಲ್ಲಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದ್ದು ಗ್ರಾಮಸ್ಥರಿಗೆ ಅನೂಕೂಲವಾಗಲಿದೆ. ಅಲ್ಲದೆ ಗ್ರಾಮದ ರಸ್ತೆ ಸ್ಥಿತಿಗತಿಯ ಬಗ್ಗೆ ಬೇಡಿಕೆ ನೀಡಿದ್ದು ಅದನ್ನು ಮುಂದಿನ ದಿನದಲ್ಲಿ ಬಗೆಹರಿಸುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ ಅಧ್ಯಕ್ಷ ಸುರೇಶ ಶೆಟ್ಟಿ, ಟಿ.ಎಸ್.ಹೆಗಡೆ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ, ಗ್ರಾಮ ಪಂಚಾಯತ ಸದಸ್ಯ ಶ್ರೀಧರ ಹೆಗಡೆ, ಬಿಜೆಪಿ ಮುಖಂಡರಾದ ಎಂ.ಎಸ್.ಹೆಗಡೆ, ರಮೇಶ ನಾಯ್ಕ, ಉಮೇಶ ನಾಯ್ಕ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment