
ಕುಮಟಾದ ಶಂಭಯ್ಯ ಹಾಗೂ ಜಯಂತಿ ಇವರ ೨ ನೇ ಮಗಳಾದ ಅನನ್ಯ ಎಸ್ ವೈದ್ಯ ಬಾಲ್ಯದಿಂದಲೇ ಹಲವಾರು ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು,ಓದಿನ ಜೊತೆಗೆ ಕಲಾಪ್ರಪಂಚದಲ್ಲೂ ಹೆಸರು ಮಾಡುತ್ತಿರುವ ಪ್ರತಿಭೆ.
ತನ್ನ ಪ್ರಾಥಮಿಕ ಶಾಲೆಯಿಂದಲೇ ಹಲವಾರು ಸಾಂಸ್ಕೃತಿಕ ಚಟವಟಿಕೆಗಳಲ್ಲಿ ಭಾಗವಹಿಸಿ ಬಹುತೇಕ ಎಲ್ಲದರಲ್ಲೂ ಮೇಲುಗೈ ಸಾಧಿಸುವ ಛಲ ಹೊಂದಿದ್ದಾಳೆ. ನೃತ್ಯ ,ನಾಟಕ, ಛದ್ಮವೇಷ ಹಾಗೂ ಇನ್ನಿತರ ಕಲಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಇವಳು ಬಾಲ್ಯದಿಂದಲೇ ಛದ್ಮವೇಷದಲ್ಲಿ ಮೇಲುಗೈ ಸಾಧಿಸಿರುವಾಕೆ. ವಲಯ ಹಾಗೂ ಜಿಲ್ಲಾ ಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುವ ಈಕೆ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯ ೩೫ ಸ್ಪರ್ಧಿಗಳಲ್ಲಿ ಈಕೆಯೂ ಒಬ್ಬಳಾಗಿ ಸ್ಪರ್ದಿಸಿ ವಿಜೇತಳಾಗಿ ಉತ್ತರ ಕನ್ನಡ ಜಿಲ್ಲೆಯ,ಕುಮಟಾದ ಹಿರಿಮೆ ಹೆಚ್ಚಿಸಿದ್ದಾಳೆ ಎಂದರೆ ತಪ್ಪಾಗಲಾರದು.ತನ್ನ ಗೆಲುವಿನೊಂದಿಗೆ ತನ್ನ ತಂದೆ ತಾಯಿ ಹಾಗೂ ತನ್ನ ಶಾಲೆ,ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

ಛದ್ಮವೇಷ ಅಲ್ಲದೆ ನಾಟಕ ಹಾಗೂ ನೃತ್ಯದಲ್ಲೂ ಕೂಡಾ ಸಾಧನೆ ಮಾಡಿದ್ದೂ, ಕುಮಟಾ ತಾಲ್ಲೂಕು ಮಟ್ಟದ ಡ್ಯಾನ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಪಡೆದಿದ್ದಾಳೆ. ಸೂಪರ್ ಸ್ಟಾರ್ ಡಾನ್ಸ್ ಅಕಾಡೆಮಿ ಸರ್ಪನಕಟ್ಟ ಭಟ್ಕಳ ಇವರು ಆಯೋಜಿಸಿದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು, “ಬಡಗಣಿ ತಟದಲಿ” ಎಂಬ ಕಿರುಚಿತ್ರದಲ್ಲೂ ನಟಿಸಿ, ಈಗ ಇನ್ನೊಂದು ಕಿರುಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಇವಳ ಈ ಸಾಧನೆಗೆ ಮೆಚ್ಚಿ “ನಾವು ನಮ್ಮಿಷ್ಟ” ಎಂಬ ಫೇಸ್ಬುಕ್ ಗ್ರೂಪ್ ನಿಂದ ನಡೆಸಿದ ೬ನೇ ವರ್ಷದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಆಯ್ದ ವಿದ್ಯಾರ್ಥಿಗಳಲ್ಲಿ ಇವಳನ್ನೂ ಸಹ ಸನ್ಮಾನಿಸಿ ಗೌರವಿಸಿದ್ದಾರೆ.
ಹೀಗೆಯೇ ಈಕೆಯ ಸಾಧನೆ ಹೆಚ್ಚಿ, ತಂದೆ ತಾಯಿ,ಊರಿಗೆ, ಜಿಲ್ಲೆಗೆ,ರಾಜ್ಯಕ್ಕೆ ಕೀರ್ತಿ ತರುವಂತಾಗಲಿ ಎಂಬುದು ನಮ್ಮ ಆಶಯ.

Leave a Comment