
ಹೊನ್ನಾವರ : ಇಲ್ಲಿನ ಹಡಿನಬಾಳದ ರಾಗಶ್ರೀ ಸಂಗೀತ ಮತ್ತು ಸಾಂಸ್ಕøತಿಕ ಸಂಸ್ಥೆ (ರಿ.) ಇದರ ಆಶ್ರಯದಲ್ಲಿ ಅಭಿನಂದನೆ, ಸನ್ಮಾನ ಹಾಗೂ ಸಂಗೀತ ಕಾರ್ಯಕ್ರಮವು ಕಲಾಶ್ರೀ ಸಭಾಭವನ ಕರ್ಕಿಯಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ, ವೇ| ಮೂ| ಸುಬ್ರಹ್ಮಣ್ಯ ಭಟ್ಟರವರು ಮಾತನಾಡಿ ಪ್ರಾಮಾಣಿಕರಾಗಿ ನಿಷ್ಕಳಂಕರಾದ ಆರ್. ಜಿ. ಭಟ್ಟ ಡಿ.ಎಫ್.ಓ. ಹಾಗೂ ಆರ್. ಜಿ. ಭಟ್ಟ ಇಂಜಿನೀಯರ್, ಕುಮಟಾ ಇವರ ಸೇವಾ ನಿವೃತ್ತಿಯ ವೃತ್ತಿ ಪರತೆಯನ್ನು ಶ್ಲಾಘಿಸಿ ಇವರ ಪಕ್ವವಾದ ಅನುಭವವನ್ನು ಸಮಾಜ ಉಪಯೋಗಿಸಿಕೊಂಡು, ಇನ್ನೂ ಹೆಚ್ಚಿನ ಸಮಾಜ ಸೇವೆ ಅವರಿಂದ ಸಿಗಲಿ, ಎಂದು ಅವರಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾದ ಡಾ| ಜಿ.ಜಿ. ಸಭಾಹಿತರವರು ಮಾತನಾಡಿ, ಸನ್ಮಾನಿತರು ಈವರೆಗೆ ನಿಭಾಯಿಸಿದ ಕಷ್ಟದ ಸಂದರ್ಭವನ್ನು ವಿವರಿಸಿ ಅವರ ಅರ್ಥಪೂರ್ಣ ಸೇವೆಯನ್ನು, ಅವರಿಗೆ ನೀಡಿದ ಅಭಿನಂದನೆಯನ್ನು ಶ್ಲಾಷಿಸಿ, ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಪ್ರೊ. ಎಸ್. ಶಂಭು ಭಟ್ಟ ಮಾತನಾಡಿ ರಾಗಶ್ರೀ ಸಂಸ್ಥೆ ಎಷ್ಟೋ ಸಾಮಾಜಿಕ ಮೌಲ್ಯದ ಕಾರ್ಯಗಳನ್ನು ಉಪಯುಕ್ತ ಸಂಸ್ಕøತಿಯ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಇವರುಗಳಿಗೆ ಅಭಿನಂದನೆ ಮಾಡುತ್ತಿರುವುದು, ಸ್ತುತ್ಯಾರ್ಹ ಎಂದು ಬಣ್ಣಿಸಿ ಇವರುಗಳ ಮುಂದಿನ ಜೀವನ ಸುಖ-ಶಾಂತಿಯಿಂದ ಕೂಡಿರುವಂತೆ ಪ್ರಾರ್ಥಿಸಿ ಹಾರೈಸಿದರು.
ಶ್ರೀ ಶ್ರೀಕಾಂತ ಭಟ್ಟ, ತರಂಗ ಎಲೆಕ್ಟ್ರೋನಿಕ್ಸ್, ಕುಮಟಾ ಇವರು ಅಭಿನಂದನಾ ನುಡಿಗಳನ್ನು ಆಡಿದರು. ರಾಗಶ್ರೀ ಅಧ್ಯಕ್ಷ ವಿದ್ವಾನ ಶಿವಾನಂದ ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕಾರ್ಯಕ್ರಮದ ಪೂರ್ವದಲ್ಲಿ ರಾಗಶ್ರೀಯ ಭಾಗ್ಯಲಕ್ಷೀ ಎಸ್. ಭಟ್ಟ ಇವಳಿಂದ ಸಂಗೀತ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ಗಳಿಸಿತು. ಇವಳಿಗೆ ಗೀತಾ ಭಟ್ಟ, ಶಿರಸಿ ಸಂವಾದಿನಿಯನ್ನು ಹಾಗೂ ಯೋಗಾನಂದ ತಬಲಾ ಸಾಥನ್ನು ನೀಡಿದರು. ಕಾರ್ಯಕ್ರಮದ ನಂತರ ಪದ್ಮಶ್ರೀ ಪಂ. ಅಜಯ ಚಕ್ರವರ್ತಿ ಶಿಷ್ಯರಾದ ವಿದ್ವಾನ ಗುರುದತ್ತ ಎ.ಕೆ. ಕಲ್ಕತ್ತ ಅವರ ಸಂಗೀತ ಕಾರ್ಯಕ್ರಮ ನೆರೆದ ಅಪಾರ ಜನರನ್ನು ಮಂತ್ರ ಮುಗ್ದಗೊಳಿಸಿತು.
ರಾಗ ಯಮನ್ ಹಾಗೂ ಹಾಡಿದ ಭಜನೆಗಳು ಕಾರ್ಯಕ್ರಮ ಕಳೆಗಟ್ಟುವಂತೆ ಮಾಡಿತು. ಇವರಿಗೆ ಪಂ. ಗೋಪಾಲ ಕೃಷ್ಣ ಹೆಗಡೆ ಕಲ್ಬಾಗ್ ಹಾಗೂ ವಿದ್ವಾನ್ ಪ್ರಕಾಶ ಹೆಗಡೆ ಶಿರಸಿ ಉತ್ತಮವಾಗಿ ಸಾಥ್ ನೀಡಿ ಕಾರ್ಯಕ್ರಮ ಯಶಸ್ವಿ ಆಗುವಂತೆ ಮಾಡಿದರು. ಕಲಾಶ್ರೀಯ ಶ್ರೀ ಎಂ. ಟಿ. ಭಟ್ಟ, ಪ್ರಾ. ಎಸ್. ಜಿ. ಭಟ್ಟ, ಪ್ರಾ. ಡಿ.ಎನ್. ಭಟ್ಟ, ಸುಬ್ರಾಯ ಭಾಗ್ವತ, ಕಪ್ಪೆಕೆರೆ ಹಾಗೂ ಇತರ ಗಣ್ಯರು, ಕಲಾವಿದರನ್ನು ಗೌರವಿಸಿದರು. ರಾಗಶ್ರೀಯ ಕಾರ್ಯದರ್ಶಿ ವಿದ್ವಾನ ಎನ್.ಜಿ. ಹೆಗಡೆ, ಕಪ್ಪೆಕೆರೆ ಧನ್ಯವಾದ ಸಮರ್ಪಿಸಿದರು.

Leave a Comment