
ಆರ್ಯ ಈಡಿಗ ನಾಮಧಾರಿ ಕ್ರಿಕೆಟ್ ಮಂಡಳಿ ಕುಮಟಾ ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ ನಾಮಧಾರಿ ಕ್ರಿಕೆಟ್ ಪಂದ್ಯಾವಳಿಯು ಜನವರಿ 17 ಶುಕ್ರವಾರದಂದು,
ಕುಮಟಾದಮಹಾತ್ಮಗಾಂಧಿಕ್ರಿಡಾಂಗಣದಲ್ಲಿಅದ್ದೂರಿಯಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಪುರಸಭಾ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಆದ ಸಂತೋಷ ನಾಯ್ಕ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.ನಂತರ ಕ್ರಿಕೆಟ್ ಪಂದ್ಯಾವಳಿಯ ಕುರಿತು ಮಾತನಾಡಿದ ಅವರು ಎಲ್ಲಾ ತಂಡಗಳು ಸ್ಪರ್ದೆಯಲ್ಲಿ ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ, ಈ ಕ್ರೀಡೆಯ ಮೂಲಕ ಪ್ರೀತಿ, ವಿಶ್ವಾಸ ಬೆಳೆದು ಬರಲಿ ಕ್ರೀಡಾಕೂಟ ಯಶಸ್ವಿಯಾಗಲಿ ಸಮಾಜದ ಪ್ರತಿಭೆಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಬೆಳಗಲಿಎಂದರು.

ಕ್ರಿಡಾಂಗಣ ಉದ್ಘಾಟಿಸಿದ ಬೆಂಗಳೂರು ತಾಂಡವ ಕಲಾನಿಕೇತನ ಅಧ್ಯಕ್ಷರಾದಮಂಜುನಾಥ್ ನಾಯ್ಕ ಮಾತನಾಡಿ ಇಂದಿನ ಕಾರ್ಯಕ್ರಮ ಚಿಕ್ಕದಾಗಿ ಉತ್ತಮವಾಗಿ ಆಯೋಜನೆಗೊಂಡಿದೆ. ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ನಾಮಧಾರಿ ಸಮಾಜದ ಯುವಕರಿಗೆ ಸಾಧನೆಗೆ ವೇದಿಕೆಯಾಗಲಿ ಎಂದರು..
ಕುಮಟಾ ಡಯಟ್ ಉಪನಿರ್ದೇಶಕರಾದ ಈಶ್ವರ ನಾಯ್ಕ ಮಾತನಾಡಿ ಸಮಾಜದ ಯುವಕರು ರಾಜ್ಯ, ರಾಷ್ಟ್ರ, ಮಟ್ಟದಲ್ಲಿ ಬೆಳೆಯಲು ಸಾಧನೆ ಮಾಡಲು ಈ ಕ್ರೀಡೆಯನ್ನು ಆಯೋಜಿಸುವ ಮೂಲಕ ಉತ್ತಮ ವೇದಿಕೆಯನ್ನು ಸಿದ್ದಮಾಡಿಕೊಡುತ್ತಿದ್ದಾರೆ.ಇದರ ಪ್ರಯೋಜನವನ್ನು ಸಮಾಜದ ಯುವಕರು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಸಂಘದ ಅಧ್ಯಕ್ಷರಾದ ಸುಬ್ರಾಯ್ ನಾಯ್ಕ ಮಾತನಾಡಿ
ಸಮಾಜದ ವತಿಯಿಂದ ಕಾರ್ಯಕ್ರಮ ಸಂಘಟಿಸುವುದು ಕಷ್ಟದ ಕೆಲಸ, ಕ್ರಿಡಾಪಟುಗಳು ಯಾವುದೇ ದ್ವೇಷ ಅಸೂಯೆಗಳಿಗೆ ಆಸ್ಪದ ಕೊಡದೆ ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕು ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪುರಸಭಾ ಮುಖ್ಯಾಧಿಕಾರಿಗಳಾದ ಸುರೇಶ್ ಎಂ ಕೆ,ವೈದ್ಯರಾದ ಚೈತ್ರಾ ದೀಪಕ ನಾಯ್ಕ, ಹನೇಹಳ್ಳಿ ಪ್ರಾಥಮಿಕ ಅಂಗನವಾಡಿ ಕೇಂದ್ರದ ವೈದ್ಯಾಧಿಕಾರಿ ಶಿವ ನಾಯ್ಕ,ರಾಜೇಶ ನಾಯ್ಕ,ಶಿಕ್ಷಕರಾದ ಮಂಜುನಾಥ ನಾಯ್ಕ ಸೇರಿದಂತೆ ಕ್ರೀಡಾಪಟುಗಳು ಉಪಸ್ಥಿತರಿದ್ದರು

Leave a Comment