
ಬೆಂಗಳೂರು / ಭಾರಿ ವಿವಾದಕ್ಕೆ ಕಾರಣವಾಗಿದ್ದ ಸರ್ಕಾರಿ ಶಾಲಾ ಆವರಣದಲ್ಲಿ ಅಲ್ಲಾಡ್ಸು, ಅಲ್ಲಾಡ್ಸು ಡ್ಯಾನ್ಸ್ ಪ್ರಕರಣ ಸಂಬಂಧ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದು, ಸರ್ಕಾರಿ ಶಾಲೆಯಲ್ಲಿ ನೃತ್ಯ ಮಾಡಿದವರು ಶಿಕ್ಷಕರಲ್ಲ ಎಂದು ಹೇಳಿದ್ದಾರೆ.

ವಿಡಿಯೋ ಕುರಿತು ಮಾಹಿತಿ ನೀಡಿರುವ ಸುರೇಶ್ ಕುಮಾರ್, ಪ್ರಕರಣದಲ್ಲಿ ಶಾಲಾ ಮುಖ್ಯ ಶಿಕ್ಷಕರದ್ದು ಯಾವುದೇ ತಪ್ಪಿಲ್ಲ. ಮಹಿಳಾ ಸಂಘದವರು ಶಾಲೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ಸಂಘದವರು ನೃತ್ಯ ಮಾಡಿದ್ದಾರೆ ಎಂದು ತಿಳಿಸಿದರು.
ಇನ್ಮುಂದೆ ಶಾಲೆಯ ಆವರಣದಲ್ಲಿ ಇಂತಹ ಕಾರ್ಯಕ್ರಮಕ್ಕೆ ಕೊಡಬಾರದು, ಆದರೆ ಮಹಿಳಾ ಸಂಘ ಶಾಲೆಗೆ ಸಹಾಯ ಮಾಡಿದ್ದರಿಂದ ಆವರಣ ಕೊಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ

Leave a Comment