
ಹೊನ್ನಾವರ ತಾಲೂಕಿನ ಕಕಿ೯ ಗ್ರಾಮದ ಕೋಣಕಾರ ಸಮೀಪದಲ್ಲಿ ಇಂದು ಸಂಜೆ ಮಾಹಸತಿ ಮಂದಿರದ ಸಮೀಪ ರಾಷ್ಟ್ರೀಯ ಹೆದ್ದಾರಿ (66)ರಲ್ಲಿ ಕಾರು ಮತ್ತು ಬೈಕ್ ನಡುವೆ ಅಫಘಾತ ಸಂಭವಿಸಿದ್ದ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿದೆ ಬೈಕ್ ಸವಾರ ಕಕಿ೯, ಶಿಕಾರಿನ ಮಂಜುನಾಥ ಗೌಡ ಎಂದು ತಿಳಿದು ಬಂದಿದೆ ಮುಗ್ವಾ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾಗಿದ್ದರು ಇವರೊಂದಿಗೆ ಪುಟ್ಟ ಬಾಲಕಿ ಸಹ ಇದ್ದಳು ಅದ್ರಷ್ಟವಷಾತ್ ಯಾವುದೇ ತೊಂದರೆ ಆಗಿಲ್ಲಾ ಎಂದು ಹೇಳಲಾಗುತ್ತಿದೆ.

ಕಾರಿನಲ್ಲಿದ್ದವರು ಉಡುಪಿಯಿಂದ ಮದುವೆ ಮುಗಿಸಿಕೊಂಡು ವಾಪಸ್ ಧಾರವಾಡಕ್ಕೆ ಹೋಗುತ್ತಿರುವಾಗ ಈ ಘಟನೆ ಸಂಭವಿಸಿದೆ. ಕಾರಿನ ಚಾಲಕನ ಅತೀ ವೇಗ ಮತ್ತು ನಿಲ೯ಕ್ಷ್ ದ ಚಾಲನೇಯೇ ಈ ದುರ್ಘಟನೆ ಆಗಲು ಕಾರಣ ಎನ್ನಲಾಗಿದೆ.

ಕಾರು ಬೈಕ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂದಿನ ಏರಡು ಚಕ್ರ ಪಂಚರ್ ಆಗಿದೆ. ಕೆಲ ದಿನದ ಹಿಂದೆ ಬೈಕ್ ಯೊಂದಕ್ಕೆ ಕೋಳಿ ತುಂಬಿದ ಮಹೇಂದ್ರ ಬುಲೇರೋ ವಾಹನ ಡಿಕ್ಕಿಯಾಗಿ ಕಕಿ೯ಯ ಸೋನಾರಕೇರಿಯ ವೆಕ್ತಿಯೊಬ್ಬರು ಮ್ರತಪಟ್ಟು ಮತ್ತೋಬ್ಬರಿಗೆ ಗಂಭೀರ ಗಾಯಗೊಂಡ ಇದೇ ಸ್ತಳದಲ್ಲಿ ಸಂಭವಿಸಿತ್ತು. ಪದೆಪದೇ ಅಫಘಾತಕ್ಕೆ ಐ. ಆರ್.ಬಿ. ಕಂಪನಿಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೈಗೊಂಡ ಚತುಸ್ಫಥದ ಅವೈಜ್ಞಾನಿಕ ಕಾಮಗಾರಿಯೇ ದುಘ೯ಟನೆಗಳು ಮರುಕಳಿಸುತ್ತಿರಲು ಕಾರಣ ಎನ್ನಲಾಗಿದೆ.
ಈ ಸಂಭದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment