
ಪ್ರವಾಸಿ ತಾಣವಾಗಿರುವ ಅಪ್ಸರಕೊಂಡ ಸಮುದ್ರ ತೀರದ ಪಕ್ಕದ ಗುಡ್ಡದಮೇಲೆ ಕಿಡಿಗೇಡಿಗಳು ಯಾರೋ ಸಿಗರೇಟು ಸೇದಿಯೋ ಅಥವಾ ಬೇಕೆಂತಲೇ ಕಡ್ಡಿ ಗೀರಿದ ಪರಿಣಾಮವೋ ಒಣಗಿದ ಹುಲ್ಲಿಗೆ ಬೆಂಕಿ ಹತ್ತಿಕೊಂಡು ಇಡೀ ಗುಡ್ಡಕ್ಕೆ ವ್ಯಾಪಿಸುವ ಅಪಾಯ ಸ್ಥಳಿಯರು ಹಾಗೂ ಅರಣ್ಯ ಇಲಾಖೆಯವರ ಸಮಯಪ್ರಜ್ಞೆಯಿಂದ ತಪ್ಪಿದೆ.

ಅಪ್ಸರಕೊಂಡ ಗುಡ್ಡದಮೇಲೆ ಎಲ್ಲೆಲ್ಲಿಂದಲೋ ಬಂದು ಕುಳಿತು ತಿಂದು ಕುಡಿದು ಮಜಾ ಮಾಡಿ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಇಂತಹ ಅನಾಹುತಗಳಿಗೆ ಕಾರಣವಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದೃಷ್ಟವಶಾತ್ ಈವತ್ತರು ಬೆಂಕಿ ತಗುಲಿದ ಜಾಗದ ಸುತ್ತಮುತ್ತ ಹುಲ್ಲುಗಾವಲು ಬಿಟ್ಟರೆ ಹೆಚ್ಚು ಮರಗಳು ಇರಲಿಲ್ಲ, ಇದೇ ಬೆಂಕಿ ನಂದಿಸುವುದಕ್ಕೆ ಸಾಧ್ಯವಾಗದೇ ಎಲ್ಲಾಕಡೆ ಹಬ್ಬಿದರೆ ದೊಡ್ಡ ದುರಂತಕ್ಕೆ ಕಾರಣವಾಗುತ್ತಿತ್ತು. ಹಿಂದೆಯೂ ಅನೇಕ ಬಾರಿ ಇದೇ ರೀತಿಯ ದುರ್ಘಟನೆ ಸಂಭವಿಸಿತ್ತಾದರೂ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡಿಲ್ಲ. ಗುಡ್ಡದ ಮೇಲೆ ಬಂದು ಲಂಗು ಲಗಾಮಿಲ್ಲದವರಂತೆ ವರ್ತಿಸುವವರಿಗೆ ಕಡಿವಾಣ ಹಾಕುವತ್ತ ಇಲಾಖೆ ಗಮನ ಹರಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

Leave a Comment