
ಹೊನ್ನಾವರ ತಾಲುಕಿನ ಜಲವಳ್ಳಿ ವಿ.ಎಸ್.ಎಸ್.ನ ನೂತನ ನಿರ್ದೇಶಕರ ಆಯ್ಕೆಯ ಚುನಾವಣೆಯಲ್ಲಿ ಶಾಸಕ ಸುನಿಲ್ ನಾಯ್ಕ ಬೆಂಬಲಿಗ ಹಾಲಿ ಅಧ್ಯಕ್ಷ ಜಯಂತ ನಾಯ್ಕ ನೇತೃತ್ವದ ಹಳೆಯ ತಂಡವೇ ಗೆಲುವು ಸಾಧಿಸುವ ಮೂಲಕ ಕೂತೂಹಲಕ್ಕೆ ತೆರೆ ಬಿದ್ದಿದ್ದು ಜಿದ್ದಾಜಿದ್ದಿನ ಕದನದಲ್ಲಿ ಸುನೀಲ ನಾಯ್ಕ ಬಣ ಗೆಲುವು ಸಾಧಿಸಿದೆ.
ಮೂರು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದ ಸಹಕಾರಿ ಸಂಘದಲ್ಲಿ ಮೂರು ಸಮಾನ್ಯಸಭೆಯ ಕಡ್ಡಾಯ ಹಾಜರಾತಿ ನಿಯಮದಿಂದ, ಕೇವಲ 888 ಸದಸ್ಯರು ಮಾತ್ರ ಅರ್ಹ ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರಾದರೂ, ಚುನಾವಣೆ ಸಮೀಪಿಸುತ್ತಿದ್ದಂತೆ ನಡೆದ ರಾಜಕೀಯ ಮೇಲಾಟದಲ್ಲಿ ವಿರೋದಿ ಬಣದವರು ಹೈಕೋರ್ಟ ಮೊರೆಹೋಗಿ 600 ಕ್ಕೂ ಹೆಚ್ಚು ಸದಸ್ಯರ ಮತದಾನದ ಹಕ್ಕನ್ನು ಪಡೆದುಕೊಂಡು ಬಂದಿದ್ದರು. ಸೇರಿಗೆ ಸವ್ವಾಸೇರು ಎನ್ನುವಂತೆ ಹಾಲಿ ಅಧ್ಯಕ್ಷರ ತಂಡದವರೂ ಕೋರ್ಟಿಂದ 350ಕ್ಕೂ ಹೆಚ್ಚು ಸದಸ್ಯರ ಮತದಾನದ ಹಕ್ಕನ್ನು ಪಡೆದುಕೊಂಡ ಕಾರಣ ಜಿದ್ದಾಜಿದ್ದಿನ ಸ್ಪರ್ದೆಗೆ ಕಣ ಸಿದ್ಧವಾಗಿತ್ತು.

ಹಾಲಿ ಅಧ್ಯಕ್ಷ ನಾರಾಯಣ ಮಂಜುನಾಥ ನಾಯ್ಕ(ಜಯಂತ) ನೇತೃತ್ವದ ತಂಡದಿಂದ ಹಿಂದುಳಿದ ವರ್ಗ ಅಭ್ಯರ್ಥಿಗಳಾದ ಪಿ.ಟಿ.ನಾಯ್ಕ, ದೇವರಾಯ ಜೆ ನಾಯ್ಕ, ಪರಿಶಿಷ್ಟ ಜಾತಿಯಿಂ ಜಿ.ಟಿ.ಹಳ್ಳೇರ, ಪರಿಶಿಷ್ಟ ಪಂಗಡದಿಂದ ಮಹೇಂದ್ರ ಬಡಿಯಾ ಗೊಂಡ, ಮಹಿಳಾ ಸಾಮಾನ್ಯ ಕ್ಷೇತ್ರದಿಂದ ಭಾರತಿ ಪ್ರಕಾಶ ನಾಯ್ಕ, ಸೀತಾ ಶ್ರೀನಿವಾಸ ನಾಯ್ಕ, ಸಾಮಾನ್ಯ ವರ್ಗದಲ್ಲಿ ನಾರಾಯಣ ಮಂಜುನಾಥ ನಾಯ್ಕ, ಕೇಶವ ಮಾದೇವ ಗೌಡ, ತಿಮ್ಮಪ್ಪ ಕೇಶವ ನಾಯ್ಕ, ತ್ರಿವಿಕ್ರಮ ಶೇಷಗಿರಿ ನಾಯ್ಕ, ಮಂಜುನಾಥ ತಿಮ್ಮಪ್ಪ ನಾಯ್ಕ ಸಾಲಗಾರರಲ್ಲದ ಕ್ಷೇತ್ರದಿಂದ ಸುಬ್ರಹ್ಮಣ್ಯ ಗಣಪತಿ ನಾಯ್ಕ ಜಯಗಳಿಸಿದ್ದಾರೆ.

Leave a Comment