
ಜೋಯಿಡಾ –
ರಾಜ್ಯದಲ್ಲಿರುವ ಪ್ರತಿಯೊಬ್ಬ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಸಿಗಬೇಕು ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರಾಜ್ಯ ಅರಣ್ಯ ಅತಿಕ್ರಮಣದಾರರ ಅಧ್ಯಕ್ಷ ರವಿಂದ್ರ ನಾಯ್ಕ ಹೇಳಿದರು.
ಅವರು ಜೋಯಿಡಾದಲ್ಲಿ ಇಂದು ಬುಧವಾರ ಕುಣಬಿ ಭವನದಿಂದ ನಡೆದ ಬೃಹತ ಮೆರವಣಿಗೆಯಲ್ಲಿ ಅರಣ್ಯ ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು,ಜೋಯಿಡಾದಂತ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳ ದೌರ್ಜನ್ಯ ಹೆಚ್ಚಾಗಿದೆ, ಇಲ್ಲಿನ ಜನರಿಗೆ ಮೂಲ ಸೌಕರ್ಯಕ್ಕೂ ತಡೆಯೊಡ್ಡುತ್ತಿದ್ದಾರೆ, ಹೀಗಾದರೆ ನಾವೂ ಸುಮ್ಮನೆ ಕುಳಿತುಕೊಳ್ಳುವವರಲ್ಲ, ಅರಣ್ಯ ಅಧಿಕಾರಿಗಳು ರೈತರ ಭೂಮಿ ಕಸಿಯುವ ಪ್ರಯತ್ನ ಮಾಡಿದರೆ ದೊಡ್ಡ ಹೋರಾಟವೆ ಮಾಡಬೇಕಾಗುತ್ತದೆ ಎಂದರು.
ಅರಣ್ಯ ಅಧಿಕಾರಿಗಳು ಕಾನೂನಿನ ತಿಳುವಳಿಕೆ ಇಲ್ಲದೆ ಇಲ್ಲಿ ಕೆಲಸ ಮಾಡಿದಂತೆ ಕಾಣುತ್ತಿದೆ

ರೈತರ ಅತಿಕ್ರಮಣ ಭೂಮಿಯಲ್ಲಿ ಜೆಸಿಬಿ ಯಂತ್ರಗಳನ್ನು ಬಳಸಿ ಕಾಲುವೆ ನಿರ್ಮಿಸಿದ್ದಾರೆ ಇದು ಖಂಡನೀಯ, ಹೀಗೆ ಆದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಕೆ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ,ಜಿ,ಪಿ,ಎಸ್ ಆದ ಅತಿಕ್ರಮಣದಾರರಿಗೆ ಏಕೆ ತೊಂದರೆ ಕೊಡುತ್ತಿದ್ದಿರಿ, ಮೂಲ ಸೌಕರ್ಯವಿಲ್ಲದೆ ಜನರು ಹೇಗೆ ಬದುಕಲು ಸಾಧ್ಯ. ನ್ಯಾಯಾಲಯ ತಿರಸ್ಕರಿಸಿದ ಅರ್ಜಿದಾರರು ಮತ್ತು ಪುನ: ಅರ್ಜಿ ಸಲ್ಲಸಲೇ ಬೇಕು, ಜಿಲ್ಲಾಡಳಿತಕ್ಕೆ ಪ್ರತಿಯೊಬ್ಬರು ಪತ್ರ ಹಾಕಬೇಕು. ಕಾನೂನಾತ್ಮಕ ಹೋರಾಟದಿಂದ ನಮಗೆ ನ್ಯಾಯ ಸಿಗುತ್ತದೆ, ಅರಣ್ಯ ಅತಿಕ್ರಮಣದಾರರು 3 ತಲೆ ಮಾರಿನ ಮಾಹಿತಿ ಕೊಡುವ ಅವಶ್ಯಕತೆ ಇಲ್ಲ. ಅರಣ್ಯ ಇಲಾಕೆ ಸಿಬ್ಬಂದಿಗಳು ಜನರ ಮೂಲಬೂತ ಸೌಕರ್ಯಕ್ಕೆ ಅಡ್ಡಿ ಮಾಡಿದರೆ ಕೂಡಲೇ ನನಗೆ ತಿಳಿಸಿ ಎಂದರು.

ಕುಂಬಾರವಾಡಾ ಗ್ರಾ,ಪಂ,ಅಧ್ಯಕ್ಷ ಪುರುಷೋತ್ತಮ ಕಾಮತ ಮಾತನಾಡಿ ಜೋಯಿಡಾದ ಜನತೆಯನ್ನು ಅರಣ್ಯ ಇಲಾಕೆಯವರು ನಾಯಿ,ದನಗಳಂತೆ ನೋಡುತ್ತಿದ್ದಾರೆ, ಸ್ವಾಮಿ ! ನಾವು ಮನುಷ್ಯರೇ, ನಿಮ್ಮ ಮಾತಿಗೆ ಬೆಲೆ ಕೊಟ್ಟು ಸಾಕಾಗಿದೆ, ಜೋಯಿಡಾದ ಜನರು ಸುಮ್ಮನಿದ್ದಾರೆ ಎಂದರೆ ಅದೂ ಅವರ ದೌರ್ಬಲ್ಯವಲ್ಲ ಎಚ್ಚರವಿರಲಿ ಎಂದರು.
ಹೋರಾಟಗಾರ ಸುಭಾಷ ಗಾವಾಡಾ, ಜಯಾನಂದ ಡೇರೆಕರ, ಇನ್ನು ಕೆಲವರು ಅತಿಕ್ರಮಣದಾರರನ್ನು ಉದ್ದೇಶಿಸಿ ಮಾತನಾಡಿದರು.
ಈ ಮೆರವಣಿಗೆಯಲ್ಲಿ ಜಿ,ಪಂ,ಸದಸ್ಯ ರಮೇಶ ನಾಯ್ಕ, ನಂದಿಗದ್ದಾ ಗ್ರಾ,ಪಂ,ಅದ್ಯಕ್ಷ ಅರುಣ ದೇಸಾಯಿ, ಸದಸ್ಯ ರಾಮಕೃಷ್ಣ ದಾನಗೇರಿ, ಉಳವಿ ಗ್ರಾ,ಪಂ,ಅದ್ಯಕ್ಷ ಮಂಜುನಾಥ ಮೊಕಾಶಿ, ಅರಣ್ಯ ಅತಿಕ್ರಮಣದಾರರ ಯಲ್ಲಾಪುರದ ಅಧ್ಯಕ್ಷ ಭೀಶ್ಮಿ.ಇತರರು ಉಪಸ್ಥಿತರಿದ್ದರು.

ಅರಣ್ಯ ಅತಿಕ್ರಮಣದಾರರ ಸಭೆ ಇದೆ ಎಂದು ತಿಳಿದಿದ್ದರು, ಹಿರಿಯ ಅರಣ್ಯ ಅಧಿಕಾರಿಗಳಾಗಲಿ, ಸಮಾಜ ಕಲ್ಯಾಣ ಇಲಾಕೆಯ ಅಧಿಕಾರಿಗಳಾಗಲಿ ಇವರ ಮಾತಿಗೆ ಬೆಲೆಕೊಟ್ಟು ಮಾತುಕತೆಗೆ ಬರಲೇ ಇಲ್ಲ. ಜೋಯಿಡಾದ ತಹಶೀಲ್ದಾರ ಕೂಡ ಇರಲಿಲ್ಲ, ಇದರಿಂದ ಹೋರಾಟಗಾರ ರವೀಂದ್ರ ನಾಯ್ಕ, ಮತ್ತು ಗ್ರಾ,ಪಂ,ಸದಸ್ಯರು ಜನಪ್ರತಿನಿಧಿಗಳು ಕೆಂಡ ಮಂಡಲವಾದರು. ಜೋಯಿಡಾದ ಸಿ,ಪಿ,ಐ ಬಾಬಾಸಾಹೇಬ ಹುಲ್ಲನ್ನವರ ಇವರಿಗೆ ಸಮಾಧಾನದ ಮಾತುಗಳೊಂದಿಗೆ ಸಭೆ ಶಾಂತಗೊಳಿಸಿದರು. ಜೋಯಿಡಾ ತಹಶೀಲ್ದಾರ ಕಚೇರಿಯಲ್ಲಿ ಅರಣ್ಯ ಅತಿಕ್ರಮಣದಾರರು ಮತ್ತು ಅಧಿಕಾರಿಗಳ ಚರ್ಚೆ ನಡೆಯುವುದೆಂದು ಮೊದಲೇ ತಿಳಿದಿದ್ದ ಅಧಿಕಾರಿಗಳು ಗೈರಾಗಿದ್ದರು, ಅರಣ್ಯ ಅಧಿಕಾರಿಗಳು ಬರಲೇ ಬೇಕೆಂದು ಪಟ್ಟು ಹಿಡಿದಾಗ ,ಅಣಶಿ ಎ,ಸಿ,ಎಪ್, ಎಸ್ ತೋಡ್ಕರ ಸಭೆಗೆ ಹಾಜರಾಗಿ ಅರಣ್ಯ ಇಲಾಕೆಯಿಂದ ಅರಣ್ಯ ಅತಿಕ್ರಮಣದಾರರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಬರವಸೆ ನೀಡಿದರು.
ಇದಾದ ನಂತರ ಅತಿಕ್ರಮಣದಾರರ ಅರ್ಜಿಗಳನ್ನು ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳು ಸ್ವೀಕಾರ ಮಾಡಿದರು, ಸಾವಿರಾರು ಜನರು ತಮ್ಮ ಅರ್ಜಿಗಳನ್ನು ಸಲ್ಲಿಸುವಾಗ ಆ ಮುಂದೆ ತಾ ಮುಂದೆ ಎಂದು ಗಲಿಬಿಲಿಯಿಂದ ಅರ್ಜಿ ನೀಡಿದ ಘಟನೆ ನಡೆಯಿತು.

Leave a Comment