
ಯಲ್ಲಾಪುರ /ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ವತಿಯಿಂದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆದ ರಾಜ್ಯ ಮಟ್ಟದ ಸ್ಫರ್ಧೆಯಲ್ಲಿ ಕುಮಾರ ತೇಜಸ್ವಿ ಅನಂತ ಭಟ್ಟ ಬಾಳಗೀಮನೆ ಈತನು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಉತ್ತೀರ್ಣನಾಗಿದ್ದಾನೆ.
ಕುಮಾರ ತೇಜಸ್ವಿ ಈತನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ವಿಶ್ವದರ್ಶನ ಪ್ರೌಢಶಾಲೆಯಲ್ಲಿ 9 ನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಮೈಸೂರಿನ ಶ್ರೀರಂಗ ಮಟ್ಟಣದ ಚಂದ್ರವನ ಆಶ್ರಮದಲ್ಲಿ ಪರೀಕ್ಷೆ ನಡೆಸಲಾಗಿತ್ತು. ತೇಜಸ್ವಿ ಈತನು ಬಾಳಗೀಮನೆ ಗೋಪಾಲಕೃಷ್ಣ ದೇವಸ್ಥಾನದ ಪುರೋಹಿತರಾದ ಅನಂತ ಭಟ್ಟ ಮತ್ತು ಗಾಯತ್ರಿ ಭಟ್ಟ ದಂಪತಿಯ ಪುತ್ರನಾಗಿದ್ದಾನೆ.

Leave a Comment