
ಸರ್ಕಾರ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳಬೇಕು ದೇಶದ ಉತ್ತಮ ಪ್ರಜೆಗಳಾಗಿ ಬಾಳುವಂತೆ ಎಂದು ಶಾಸಕ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಶನಿವಾರ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಕಾರದಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಲ್ಯಾಪ್ಟಾಪ್ 373 ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು. ಸರ್ಕಾರ ನೀಡುವ ಲ್ಯಾಪಟಾಪ್ ನಿಮ್ಮ ಶಿಕ್ಷಣಾಭ್ಯಾಸಕ್ಕೆ ಪೂರಕವಾಗಿರುವಂತೆ ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಕೇವಲ ಕುಮಟಾಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ ಎನ್ನುವ ಆರೋಪವಿದೆ. 2008ರಲ್ಲಿ ಕಾಲೇಜಿಗೆ ಜಾಗ ಮಂಜೂರು ಮಾಡಿಸಿ 2ಕೋಟಿ ಬಿಡುಗಡೆ ಮಾಡಿಸಿದ್ದೇನೆ. ಅದಾದ ನಂತರ ಅಧಿಕಾರದಲ್ಲಿದ್ದವರು ಯಾವುದೇ ಅನುದಾನ ತಂದಿಲ್ಲ. ಈ ಅವಧಿಯಲ್ಲಿ 8 ಕೋಟಿ ಅನುದಾನ ತಂದಿದ್ದೇನೆ. ಕಾಲೇಜಿಗೆ ಅವಶ್ಯಕತೆ ಇರುವ ಕಟ್ಟಡ ಇನ್ನು ಒಂದುವರ್ಷದ ಅವಧಿಯಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಿದೆ ಎಂದರು.

ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು. ಬಿಎಸ್ ಯಡಿಯೂರಪ್ಪ ನೇತೃತ್ವದ ಸರಕಾರ ಈ ಯೋಜನೆಯನ್ನು 2.5 ಲಕ್ಷ ರೂ. ಒಳಗಿನ ಆದಾಯದ ಎಲ್ಲ ವಿದ್ಯಾರ್ಥಿಗಳಿಗೆ ವಿಸ್ತರಿಸಿದೆ. ಇದರಿಂದಾಗಿ ಪಾಲಕರ ಹೊರೆಯನ್ನು ಕಡಿಮೆ ಮಾಡಿದೆ ಎಂದರು. ಅವರ ಹೊರೆಯನ್ನು ಕೊಂಚ ತಗ್ಗಿಸಲು ಆರ್ಥಿಕವಾಗಿ ಹಿಂದುಳಿದವರಿಗೆ ಊಚಿತ ಲ್ಯಾಪ್ಟಾಪ್ ವಿತರಿಸುವ ಸೌಲಬ್ಯ ಸರ್ಕಾರ ಜಾರಿಗೆ ತಂದಿದೆ. ಇಲೆಕ್ಟ್ರಾನಿಕ್ಸ್ ಉಪಕರಣಗಳ ಕೇವಲ ನಮ್ಮ ಉಪಯೋಗಕ್ಕೆ ಬಳಸಿಕೊಳ್ಳಬೇಕೆ ವಿನಃ ಅವು ನಮ್ಮ ಸಮಯವನ್ನು ವ್ಯರ್ಥಮಾಡುವ ರೀತಿಯಲ್ಲಿ ಬಳಸಬಾರದು. ಇಂದು ಮಾನವೀಯತೆ ಮರೆಯಾಗುತ್ತಿದೆ. ನಾವು ಯಂತ್ರಗಳಾಗದೇ ಮನುಷ್ಯರಾಗಿರೋಣ ಮಾನವೀಯ ಗುಣಗಳಿಗೆ ಸ್ಪಂದಿಸೋಣ. ಪಾಲಕರು ತಮ್ಮ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಕಾಲೇಜಿಗೆ ಭೇಟಿ ನೀಡಿ ಅವರ ಹಾಜರಾತಿಗಳ ಮಾಹಿತಿ ಪಡೆಯಬೇಕು ಎಂದರು. ವಿದ್ಯಾರ್ಥಿ ಜೀವನದ ಸಮಯ ಅಮೂಲ್ಯವಾಗಿದ್ದು ಉತ್ತಮವಾಗಿ ಬಳಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವೇದಿಕೆಯಲ್ಲಿ ಕಾಲೇಜೀನ ಪ್ರಾಂಸುಪಾಲೆ ಡಾ.ಸುಮಂಗಲಾ ನಾಯ್ಕ, ಸಿಡಿಸಿ ಸದಸ್ಯ ಎಮ್ ಎಸ್ ಹೆಗಡೆ ಕಣ್ಣಿ ಗ್ರಾ.ಪಂ. ಅಧ್ಯಕ್ಷ ಕೊಂಡಕೆರೆ ಟಿ.ಎಸ್.ಹೆಗಡೆ, ಗ್ರಾ.ಪಂ. ಅಧ್ಯಕ್ಷ ಸುರೇಶ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ ಪಾಲಕ-ಪೋಷಕ ವೃಂದದವರು ಆಗಮಿಸಿದ್ದರು.

Leave a Comment