
ತಾಲೂಕಾ ಆಸ್ಪತ್ರೆಯಲ್ಲಿ ಸಹಾಯಕ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಬಸವರಾಜಪ್ಪ ರವರು ವಯೋ ನಿವೃತ್ತಿ ಹೊಂದಿದ್ದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂಧಿಗಳು ಅವರನ್ನು ಆತ್ಮೀಯವಾಗಿ ಸನ್ಮಾನಿಸಿ,ಬೀಳ್ಕೊಟರು.ಪ್ರಥಮ ದರ್ಜೆ ಸಹಾಯಕರಾಗಿ ಸರಕಾರಿ ಸೇವೆ ಸೇರಿದ ಕೆ.ಬಸವರಾಜಪ್ಪರವರು ಸುಮಾರು 35ವರ್ಷಗಳ ಕಾಲ ವಿವಿಧಡೆ ಸೇವೆ ಸಲ್ಲಿಸಿದ್ದಾರೆ. ಹೊನ್ನಾವರ ತಾಲೂಕಾ ಆಸ್ಪತ್ರೆಯ ಪ್ರಥಮ ಸಹಾಯಕ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದು ವಿಶೇಷ.ತುಂಬ ಸರಳ ವ್ಯಕ್ತಿಗಳಾಗಿದ್ದರು. ಆಡಳಿತ ವೈದ್ಯಾಧಿಕಾರಿ ಡಾ|| ರಾಜೇಶ ಕಿಣಿ ರವರು ಸನ್ಮಾನಿಸಿ ಮಾತನಾಡುತ್ತ “ಆಸ್ಪತ್ರೆಯ ಕಛೇರಿ ಕೆಲಸಗಳು ಸುಲಲಿತಾಗಿ ನಡೆಯಲು ಕೆ.ಬಸವರಾಜಪ್ಪರವರ ಪಾತ್ರ ಮುಖ್ಯವಾಗಿದೆ.ಎಲ್ಲ ಸಿಬ್ಬಂಧಿಗಳ ಜೊತೆ ಸೌಜನ್ಯದಿಂದ ಇರುತ್ತಿದ್ದರಿಂದ ಎಲ್ಲರ ಪ್ರೀತಿ ಪಾತ್ರಕ್ಕೆ ಒಳಗಾಗಿದ್ದರು. ಎಷ್ಟೇ ಒತ್ತಡದಲ್ಲಿದರೂ ಯಾರೊಂದಿಗೂ ಏರು ಧ್ವನಿಯಲ್ಲಿ ಮಾತನಾಡುತ್ತಿರಲಿಲ್ಲ ಇತರರಿಗೆ ಮಾದರಿಯಾಗುವಂತೆ ಕಾರ್ಯನಿರ್ವಹಿಸಿದ್ದಾರೆ,ತಮ್ಮ ಹುದ್ದೆಯ ಗತ್ತು ದೌಲತ್ತನ್ನು ಎಂದಿಗೂ ಕಾಣಿಸದೇ ಸರಳವಾಗಿರುತ್ತಿದ್ದರು. ಅವರ ನಿವೃತ್ತಿ ಜೀವನ ಸುಖಮಯವಾಗಿರಲಿ” ಎಂದು ಹೇಳಿದ್ದರು. ಆಸ್ಪತ್ರೆಯ ಸಿಬ್ಬಂಧಿಗಳಾದ ಅರುಣ ತಾಮ್ಸೆ, ಪ್ರಶಾಂತ ರೋಕಡೆ, ರವರು ಕೆ.ಬಸವರಾಜಪ್ಪನವರ ಜೊತೆಗಿನ ವೃತ್ತಿ ಒಡನಾಟಗಳನ್ನು ಹಂಚಿಕೊಂಡರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಬಸವರಾಜಪ್ಪನವರು “ಹೊನ್ನಾವರ ಆಸ್ಪತ್ರೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಿಬ್ಬಂಧಿ ಮತ್ತು ವೈದ್ಯರುಗಳ ಸಹಕಾರವೇ ಕಾರಣ.ಇಲ್ಲಿನ ನನ್ನ ಮೂರು ವರ್ಷಗಳ ಅಧಿಕ ಕಾಲದ ಸೇವೆ ಮರೆಯಲಾಗದು. ವೃತ್ತಿ ಜೀವನದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದರು. ಆಪ್ತಸಮಾಲೋಚಕರಾದ ವಿನಾಯಕ ಪಟಗಾರ ಕಾರ್ಯಕ್ರಮ ನಿರ್ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂಧಿವರ್ಗ ಭಾಗವಹಿಸಿದ್ದರು.

Leave a Comment