
ಹೊನ್ನಾವರ: ಮಕ್ಕಳ ಭವಿಷ್ಯವನ್ನು ಉತ್ತುಂಗಕ್ಕೆ ಏರಿಸಲು ತಂದೆ, ತಾಯಿ ಮತ್ತು ಗುರುಗಳ ಪಾತ್ರ ಬಹು ದೊಡ್ಡದು ಎಂದು ಭಟ್ಕಳ ವಿಭಾಗದ ಸಹಾಯಕ ಆಯುಕ್ತ ಸಾಜಿದ್ ಮುಲ್ಲಾ ಹೇಳಿದರು.
ತಾಲೂಕಿನ ಮಂಕಿಯಲ್ಲಿ ಗೋಲ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ರಾತ್ರಿ ಆಯೋಜಿಸಿದ ಗೋಲ್ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತಾನಾಡಿದರು. ಪಾಲಕರು ಮಕ್ಕಳ ಬಗ್ಗೆ ತಿಳಿದುಕೋಳ್ಳಬೇಕು. ಅವರಿಗೆ ಒತ್ತಡ ಹಾಕದೇ ಅವರ ಬಗ್ಗೆ ಗಮನ ಹರಿಸಬೇಕು. ಮಗುವಿನಲ್ಲಿ ಯಾವುದೆ ಸಮಸ್ಯೆ ಉಲ್ಬಣವಾಗುತ್ತಿದ್ದರೆ ತಾಯಿಹೃದಯದಿಂದ ಸಮಸ್ಯೆ ಬಗೆಹರಿಸಬೇಕು. ಶಿಕ್ಷಣದ ಬಗ್ಗೆ ಒಲವು ಇದ್ದ ಶಿಕ್ಷಣ ಪೇಮಿಗಳು ಮಾತ್ರ ಉತ್ತಮ ಶಿಕ್ಷಣ ಸಂಸ್ಥೆ ಹುಟ್ಟು ಹಾಕಲು ಸಾಧ್ಯ. ಇದಕ್ಕೆ ಗೋಲ್ ಸಂಸ್ಥೆ ಸಾಕ್ಷಿಯಾಗಿದೆ ಎಂದರು.
ಗೋಲ್ ಸಂಸ್ಥೆಯ ಚೇರಮೆನ್ ಎ.ಆರ್.ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಜಾಪ್ರಬುತ್ವದ ಮೌಲ್ಯವನ್ನು ಅರಿತುಕೋಳ್ಳಬೇಕು. ಸ್ವಯಂ ಉದೋಗ ಮತ್ತು ಗುಡಿಕೈಗಾರಿಕೆಯನ್ನು ಸ್ಥಾಪಿಸಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ. ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು ಎಂದರು.
ಭಾರತ ಸ್ಕೌಟ್ಸ್ ಗೈಡ್ಸ್ ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹರೀಶ ಗಾಂವಕರ, ಶಿಕ್ಷಣ ಇಲಾಖೆಯ ಅಧಿಕಾರಿ ನಾರಾಯಣ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ.ನಾಯ್ಕ, ಆಡಳಿತ ಮಂಡಳಿಯ ನಿರ್ದೇಶಕಿ ದೀಪಾ ರಾವ್, ಪ್ರಾಚಾರ್ಯ ರಮೇಶ ಯರಗಟ್ಟಿ ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.ನಂತರ ವಿದ್ಯಾಥಿಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.

Leave a Comment