
ಹೊನ್ನಾವರ ಬಸ್ ನಿಲ್ಧಾಣ ಕನಸು ಇದೀಗ ನನಸಾಗುವತ್ತ ಸಾಗಿದ್ದು ಶನಿವಾರ ಶಾಸಕ ದಿನಕರ ಶೆಟ್ಟಿ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಗುತ್ತಿಗೆದಾರರನ್ನು ಸ್ಥಳಕ್ಕೆ ಕರೆತಂದು ಪರಿಶೀಲನೆ ನಡೆಸಿ ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚೆ ನಡೆಸಿದರು.
ಮಳೆಗಾದಲ್ಲಿ ಮಳೆನೀರು ಸೋರುವ ಕೆಲ ವರ್ಷದ ಹಿಂದೆ ಗೊಡೆ ಕುಸಿತದಿಂದ ಸಾರ್ವಜನಕರ ಆತಂಕಕ್ಕೆ ಕಾರಣವಾಗಿದ್ದ ಪಟ್ಟಣದ ಸುಸಜ್ಜೀತ ಬಸ್ ನಿಲ್ಧಾಣ ನಿರ್ಮಾಣಕ್ಕೆ ಕೆಲವೇ ದಿನದಲ್ಲಿ ಗ್ರೀನ್ ಸಿಗ್ನಲ್ ಸಿಗುವುದು ಬಹುತೇಕ ಖಾತ್ರಿಯಾಗಿದೆ. ಈ ಹಿಂದೆ ನೀಡಿದ್ದ ಭರವಸೆ ಹಳೆಯ ಬಸ್‍ಸ್ಟ್ಯಾಂಡ್ ಪೂರ್ತಿ ತೆಗೆದು ಅದೇ ಸ್ಥಳದಲ್ಲಿ 6ಕೋಟಿ ರೂಪಾಯಿ ವೆಚ್ಚದ ನೂತನ ಬಸ್‍ಸ್ಟ್ಯಾಂಡ್ ನಿರ್ಮಾಣವಾಗಲಿದ್ದು ಶಾಸಕ ದಿನಕರ ಶೆಟ್ಟಿ, ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಇಂಗ್ಲೀಷ್ ‘ಎಲ್’ ಆಕಾರದಲ್ಲಿ ನಿರ್ಮಾಣವಾಗಲಿರುವ ಬಸ್ ನಿಲ್ದಾಣ ಒಂದು ಪ್ರದೇಶದಿಂದ ಬಸ್ ಒಳಗೆ ಹೋಗಿ ಇನ್ನೊಂದು ಪ್ರದೇಶದಿಂದ ಹೊರಗೆ ಬರಲು ವ್ಯವಸ್ಥೆ ಮಾಡಲಾಗುವುದು. ಆಟೋ ರಿಕ್ಷಾ ಮತ್ತು ಸಾರ್ವಜನಿಕರ ಬೈಕ್ ನಿಲುಗಡೆಗೆ ಪ್ರತ್ಯೇಕ ಸ್ಥಳ ಸಾಧ್ಯವಾದರೆ ಮೊದಲ ಕಟ್ಟಡದ ಒಂದು ಭಾಗದ ಮೇಲಂತಸ್ಥಿನಲ್ಲಿ ವ್ಯವಸ್ಥೆ ಮಾಡಿಕೊಡುವ ಜೊತೆ ಮಳೆಗಾಲದಲ್ಲಿ ಸಮಸ್ಯೆ ಉಂಟುಮಾಡುವ ರಾಜಾಕಾಲುವೆಯ ಆ¼ವನ್ನುÀ ಹೆಚ್ಚಿಸಬೇಕು ಎನ್ನುವ ಶಾಸಕರ ಸಲಹೆಯನ್ನು ಅಧಿಕಾರಿಗಳು ಒಪ್ಪಿಕೊಂಡರು. ತುರ್ತು ಪೋಲೀಸ ಮೈದಾನದಲ್ಲಿ ಬಸ್‍ಸ್ಟ್ಯಾಂಡ್ ನಿರ್ಮಿಸಬೇಕು, ಒಂದು ವರ್ಷದಲ್ಲಿ ನೂತನ ಕಟ್ಟಡವನ್ನು ಗುತ್ತಿಗೆದಾರರು ನಿರ್ಮಿಸಿಕೊಡುವಂತೆ ಶಾಸಕರು ಸೂಚಿಸಿದ್ದರಲ್ಲದೇ ಪೋಲೀಸ ಮೈದಾನ ಪಡೆಯಲು ಸಂಬಂಧಪಟ್ಟ ಅಧಿಕಾರಿಗೆ ಪತ್ರ ಬರೆಯುದಾಗಿಯು ತಿಳಿಸಿದರು. ಆದರೆ ಪೋಲೀಸ್ ಮೈದಾನದ ಸ್ಥಳ ಪೋಲಿಸ್ ಇಲಾಖೆಯ ನಿತ್ಯ ಬಳಕೆಗೆ ಬೇಕು. ಇಲ್ಲಿ ಬೇರೆ ತಾಲೂಕಿನಿಂದ ಹಾಗೂ ಸ್ಥಳಿಯ ಬಸ್ ಒಮ್ಮಲ್ಲೆ ಇದ್ದರೆ ಸಾಕಷ್ಟು ಸ್ಥಳವಿಲ್ಲ ಆದರೂ ಅನಿವಾರ್ಯವಾಗಿ ಇದೇ ಸ್ಥಳದಲ್ಲಿ ತಾತ್ಕಲಿಕ ಶೆಡ್ ನಿರ್ಮಿಸಿ ಅಥವಾ ಈಗೀನ ಬಸ್‍ಸ್ಟ್ಯಾಂಡ್ ಮುಂದುವರಿಸುವ ಸಾಧ್ಯತೆ ಇದೆ. ಒಂದು ವೇಳೆ ಈಗ ಇರುವ ಸ್ಥಳದಲ್ಲಿ ಮಾಡಿದರೆ ಸ್ಥಳೀಯ ಬಸ್ಸುಗಳು ಬಸ್‍ಸ್ಟ್ಯಾಂಡ್‍ವರೆಗೂ ಬಂದು ಹೋಗುತ್ತವೆ. ಎಕ್ಸ್‍ಪ್ರೆಸ್ ಬಸ್ ಮಾತ್ರ ಬರುವುದಿಲ್ಲ. ಜನರಿಗೆ ಆದಷ್ಟು ತೊಂದರೆಯಾಗದಂತೆ ಕೆಲಸ ಮಾಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಭರವಸೆಕೊಟ್ಟಿದ್ದಾರೆ.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ, ಬಿಜೆಪಿ ಮುಖಂಡರಾದ ರಾಜು ಭಂಡಾರಿ, ಗಣಪತಿ ನಾಯ್ಕ ಬಿಟಿ, ಎಂ.ಎಸ್.ಹೆಗಡೆ ಕಣ್ಣಿ,ಪಟ್ಟಣ ಪಂಚಾಯತ ಸದಸ್ಯರಾದ ಶಿವರಾಜ ಮೇಸ್ತ, ನಾಗರಾಜ ಭಟ್, ಸುಜಾತ ಮೇಸ್ತ, ಮತ್ತಿತರ ಸದಸ್ಯರು ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment