
ಶಿಸ್ತು, s ಸಮಯಪಾಲನೆ, ಮಕ್ಕಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ, ರಸ್ತೆ ಸುರಕ್ಷತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿದ್ಯಾರ್ಥಿ ಜೀವನದಿಂದಲೇ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲೂಕಿನ 2 ಪ್ರೌಡಶಾಲೆಯಲ್ಲಿ ಸ್ಟುಡೆಂಟ್ ಪೋಲಿಸ್ ಕ್ರಡಿಟ್ ತರಭೇತಿ ಕಾರ್ಯಕ್ರಮವನ್ನು ಅಗಸ್ಟನಿಂದಲೇ ಆರಂಭಿಸಿದ್ದು ಇದರ ಸಮಾರೋಪ ಸಮಾರಂಭ ಹಡಿನಬಾಳ ಪ್ರೌಡಶಾಲೆಯಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಹೊನ್ನಾವರ ಪೋಲಿಸ್ ಠಾಣಿಯ ಎಎಸೈ ಗಿರೀಶ ಶೆಟ್ಟಿ ಉದ್ಘಾಟಿಸಿದರು. ನಂತರ ಮಾತನಾಡಿ ಶೈಕ್ಷಣಿಕವಾಗಿ ಯೋಗ್ಯವಾದ ವಾತವರಣದಲ್ಲಿರುವ ಈ ಶಾಲೆಯ ಮಕ್ಕಳಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿತ್ತು. ಕಳೆದ ಅಗಸ್ಟನಿಂದ ಪ್ರತಿ ಶನಿವಾರ ನಮ್ಮ ಇಲಾಖೆಯ ಅಧಿಕಾರಿಯಾದ ಶೈಲೇಶ ಮೂಲಕ ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿವಿಧ ವಿಷಯದ ಬಗ್ಗೆ ಉಪನ್ಯಾಸದ ಮೂಲಕ ಮಕ್ಕಳನ್ನು ಸದೃಡಪ್ರಜೆಯನ್ನಾಗಿ ರೂಪುಗೂಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದರಿಂದ ಮುಂದಿನ ದಿನದಲ್ಲಿ ಹಡಿನಬಾಳ ಸುತ್ತಮುತ್ತಲಿನ ಭಾಗದಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಸಂಭವಿಸುವುದಿಲ್ಲ ಎನ್ನುವ ನಂಬಿಕೆ ಇದೆ. ತಾವು ಈ ಕಾರ್ಯಕ್ರಮದ ತಿಳಿದ ಮಾಹಿತಿಯನ್ನು ಸುತ್ತಮುತ್ತಲಿನವರಿಗೆ ಅರಿವು ಮೂಡಿಸುವುದರಿಂದ ಇತರರಿಗೂ ಈ ಬಗ್ಗೆ ಜಾಗೃತರಾಗುತ್ತಾರೆ. ಈ ಕಾರ್ಯಕ್ರಮ ಯಶ್ವಸಿಯಾಗಿದೆ ಎಂದು ಹೇಳಲು ಹೆಮ್ಮೆಯೆನಿಸುತ್ತದೆ ಎಂದರು.
ತರಬೇತಿ ನೀಡಿದ ಶೈಲೇಶ ಮಾತನಾಡಿ, ಎನ್.ಸಿ.ಸಿ, ಎನ್.ಎಸ್.ಎಸ್, ಸ್ಕೌಟ್ಸ,ಗೈಡ್ಸನಂತಹ ಪಠೈತರ ಘಟಕದ ಜೊತೆ ತಾಲೂಕಿನ ಆಯ್ದ 2 ಪೌಡಶಾಲೆಗಳಿಗೆ ಸ್ಟುಡೆಂಟ್ ಪೋಲಿಸ್ ಕ್ರೇಡಿಟ್ ತರಬೇತಿ ಘಟಕ ಆರಂಭಿಸಲಾಗಿದೆ. ತರಬೇತಿ ಅವಧಿಯಲ್ಲಿ ಕಾರವಾರ ಎಸ್ಪಿ ಕಛೇರಿ, ಮಹಿಳಾ ಠಾಣಿ, ಪೋಲಿಸ್ ಠಾಣೆ, ಆಸ್ಪತ್ರೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಕರ್ತವ್ಯ ನಿರ್ವಹಣೆ, ಈ ಬಗ್ಗೆ ಮಾಹಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಗಿದೆ. ಶಿಸ್ತು, ಸಮಯಪಾಲನೆ, ಸಂಚಾರಿ ನಿಯಮಪಾಲನೆಯ ಬಗ್ಗೆ ತಿಳಿಸಲಾಗಿದೆ. ಇದು ಮನುಷ್ಯನ ಜೀವನದುದ್ದಕ್ಕೂ ಅನುಸರಿಸಬೇಕಾದ ಕ್ರಮಗಳಾಗಿದ್ದು ಇದನ್ನು ಎಂದಿಗೂ ಮರೆಯದಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಾದ ನಿಸರ್ಗ, ವಿಜೇತ, ಭಾವನ ತರಬೇತಿ ಅವಧಿಯ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೊಪಧ್ಯಾಯರಾದ ಆರ್.ಟಿ.ನಾಯ್ಕ ಮಾತನಾಡಿ ಪ್ರಾರಂಭದಲ್ಲಿ ಸರ್ಕಾರಿ ಕಾರ್ಯಕ್ರಮ ಕಾಟಾಚಾರಕ್ಕಾಗಿ ಮಾಡಲಾಗುತ್ತದೆಯೇನು ಎನ್ನುವ ಭಾವನೆ ಮೂಡಿತ್ತು. ಆದರೆ ಇವರ ತರಬೇತಿ ಅವಧಿ ಎಲ್ಲರಿಗೂ ಮನಮುಟ್ಟುವಂತೆ ಇದ್ದ ಪರಿಣಾಮ ಈ ಕಾರ್ಯಕ್ರಮ ಯಶ್ವಸಿಯಾಗಿದೆ. 40ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿದ್ದಾರೆ. ನಮ್ಮ ಪ್ರೌಡಶಾಲೆಯಲ್ಲಿ ಇಂತಹ ಕಾರ್ಯಕ್ರಮಕ್ಕೆ ಆಯ್ದುಕೊಂಡಿರುವದಕ್ಕೆ ಇಲಾಖೆಗೆ ಅಭಿನಂದನೆ ಎಂದರು.
ಶಂಕರ ಹರಿಕಂತ್ರ ಸ್ವಾಗತಿಸಿ ವಿನಾಯಕ ವಂದಿಸಿದರು. ಸುಜಾತ ದೇವರಬಾವಿ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ಶಿಕ್ಷಕರು, ಪಾಲಕರು ಉಪಸ್ಥಿತರಿದ್ದರು.

Leave a Comment