
ಖಾನಾಪೂರ: ತಾಲೂಕಿನ ಬೋಗೂರು ಗ್ರಾಮದ ಹತ್ತಿರದಲ್ಲಿರುವ ತಟ್ಟಿಹಳ್ಳದ ಸೇತುವೆ ಮೇಲಿಂದ ಟ್ರ್ಯಾಕ್ಟರ್ ಹಳ್ಳಕ್ಕೆ ಬಿದ್ದು ಆರು ಜನರು ಮೃತಪಟ್ಟಿದ್ದರು. ಈ ಘಟನೆಯ ವಿಷಯವನ್ನು ಗಂಭಿರವಾಗಿ ಪರಿಗಣನೆಗೆ ತೆಗೆದುಕೊಂಡ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ ಅವರು ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಮೃತ ಕುಟುಂಬಗಳಿಗೆ ೧೦ಲಕ್ಷ ಪರಿಹಾರ ನೀಡಿ ಎಂದು ಕೋರಿದ್ದರು. ಮನವಿಯನ್ನು ಸ್ವಿಕರಿಸಿ ಮೃತರ ತಲಾ ಕಟುಂಬಕ್ಕೆ ೫ಲಕ್ಷ ಪರಿಹಾರ ಮಂಜೂರು ಮಾಡಿದ್ದರು. ಒಟ್ಟಾರೆಯಾಗಿ ಶಾಸಕಿ ಅಂಜಲಿ ನಿಂಬಾಳ್ಕರ ನೇತೃತ್ವದಲ್ಲಿ ಮೃತರ ಕುಟುಂಬದವರಿಗೆ ಮಂಜೂರಾದ ಪರಿಹಾರದ ಚೆಕ್ ಅನ್ನು ರವಿವಾರದಂದು ಖಾನಾಪುರ ತಾಲೂಕಿನ ಬೋಗುರ ಗ್ರಾಮದಲ್ಲಿ ಮೃತ ಕುಟುಂಬಸ್ಥರ ವಾರಸುದಾರರಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ತಲಾ ಐದು ಲಕ್ಷ ರೂ ಪರಿಹಾರದ ಚೆಕ್ ವಿತರಿಸಿದರು.
ಪರಿಹಾರದ ಚೆಕ್ ವಿತರಣೆ ಮಾಡುವ ಮುಂಚಿತವಾಗಿ ಸಚಿವರಾದ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ, ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿ ಹಾಗೂ ಖಾನಾಪುರ ತಹಶಿಲ್ದಾರ ರೇಶ್ಮಾ ತಾಳಿಕೋಟಿ ಅವರೊಂದಿಗೆ ಅಪಘಾತ ಸಂಭವಿಸಿದ ಹಳ್ಳದ ಸೇತುವೆಯ ಸ್ಥಳವನ್ನು ಪರಶೀಲನೆ ಮಾಡಿ ಘಟನೆಯ ಸಂಪೂರ್ಣ ವಿವರ ಪಡೆದುಕೊಂಡರು.

ಈ ಸಂಧರ್ಭದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಫೆಬ್ರುವರಿ 28,ಹಾಗೂ 29 ರಂದು ಬೆಳಗಾವಿಯಲ್ಲಿ ಪ್ರಾದೇಶಿಕ ಉದ್ಯೋಗ ಮೇಳ ನಡೆಯಲಿದೆ. ಈ ಮೇಳದ ವೆಬ್ ಸೈಟ್ ಮತ್ತು ಲಾಂಛನ ಇವತ್ತು ಬಿಡುಗಡೆ ಮಾಡುತ್ತೇನೆ ,ಗಡಿ ವಿವಾದ ಮುಗಿದ ಆದ್ಯಾಯ, ಮಹಾರಾಷ್ಟ್ರ ಕ್ಯಾತೆ ತೆಗೆಯುವುದು ಸರಿಯಲ್ಲ ಮಹಾಜನ ವರದಿಯೇ ಅಂತಿಮ. ಗಡಿವಿವಾದ ಆಗಿರಲಿ ಮಹಾದಾಯಿ ವಿಚಾರವೇ ಆಗಿರಲಿ ಸರ್ಕಾರ ಕಾನೂನು ಹೋರಾಟದ ಮೂಲಕ ರಾಜ್ಯದ ಹಿತಾಸಕ್ತಿ ಕಾಯುತ್ತದೆ.
ಜೋತೆಗೆ ಬೋಗೂರು ಹಳ್ಳಕ್ಕೆ ಟ್ರಾಕ್ಟರ್ ಬಿದ್ದು ಆರು ಜನ ಪ್ರಾಣ ಕಳೆದುಕೊಂಡಿದ್ದು. ಇನ್ನೂ ಹಲವಾರು ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರ ಕುಟುಂಬಳಿಗೆ ತಲಾ ಐದು ಲಕ್ಷ ರೂ ಪರಿಹಾರ ಕೊಟ್ಟಿದ್ದೇವೆ, ಗಾಯಗೊಂಡವರಿಗೂ ಪರಿಹಾರ ನೀಡಬೇಕೆಂದು ಸ್ಥಳಿಯರು ಆಗ್ರಹಿಸಿದ್ದು ಈ ಕುರಿತು ಮುಖ್ಯಮಂತ್ರಿ ಗಳ ಜೊತೆ ಮಾತಾಡುತ್ತೇನೆಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ, ಖಾನಾಪುರ ತಹಶಿಲ್ದಾರ ರೇಶ್ಮಾ ತಾಳಿಕೋಟಿ, ಬೋಗುರ ಗ್ರಾಮಸ್ಥರು, ಬಿಜೆಪಿ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.


Leave a Comment