
ಹೊನ್ನಾವರ: ಪಂಚಪಾಂಡವರ ಕಾಲದಲ್ಲಿ ನಿರ್ಮಿತವಾದ ಪೌರಾಣಿಕ ಐತಿಹ್ಯ ಹೊಂದಿರುವ ಕಡ್ನೀರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಶಿವರಾತ್ರಿಯ ಪ್ರಯುಕ್ತ ಶುಕ್ರವಾರ ವಿಶೇಷ ಪೂಜೆ ನಡೆಯಿತು.
ಬೆಳಿಗ್ಗೆಯಿಂದ ಶ್ರೀ ದೇವರಿಗೆ ಜಲಾಭಿಷೇಕ, ಕ್ಷೀರಾಭಿಷೇಕ ಮಧ್ಯಾಹ್ನದ ವರೆಗೆ ನಿರಂತರವಾಗಿ ನಡೆಯಿತು. ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ದೇವರಿಗೆ ಹಣ್ಣು-ಕಾಯಿ ಸೇವೆ, ಪಂಚಖಾದ್ಯ, ಬಿಲ್ವಾರ್ಚನೆ ಇತ್ಯಾದಿ ಸೇವೆ ಸಲ್ಲಿಸಿ ಕೃತಾರ್ಥರಾದರು.
Leave a Comment