


ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ.)
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-11
ವರದಿ
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಶುಭಾರಂಭ
ತಿಮ್ಮಪ್ಪ ಭಟ್: ಹಲವು ಕಲಾಸಾಧಕರ ಶಕ್ತಿ ಈ ಮಂಡಳಿಗೆ ಇದೆ. ಈ ಪ್ರವಾಹವನ್ನು ಶಿವಾನಂದ ಹೆಗಡೆಯವರು ಮಹಾಶಕ್ತಿಯಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸಮಾಜದ, ಜೀವನದ ಅಂತಃಶಕ್ತಿಯನ್ನು ಕಾಪಾಡುವುದರಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದೆ. ಸಂತೋಷ ಸೂಚಕದಲ್ಲಿ ಭೂತಾನ್ ನಮಗಿಂತ ಮುಂದಿದೆ. ಆದರೆ ಈ ರೀತಿ ಕಲಾಕೇಂದ್ರಗಳು ಹೆಚ್ಚಿದಲ್ಲಿ ಮಾತ್ರ ಸಂತೋಷ ಸೂಚಕ ಹೆಚ್ಚುತ್ತದೆ.
ಗೋಪಾಲಕೃಷ್ಣ ಭಾಗವತ: ಕಲೆಯನ್ನು ಕೊಲೆ ಮಾಡುತ್ತಿರುವ ಕೆಲವು ಕಲೆಗಾರರರ ಮಧ್ಯದಲ್ಲಿ ಶ್ರೀ ಕೃಷ್ಣ ಯಾಜಿ ಚಂಡೆವಾದಕರು ಬಲು ಅಪರೂಪ ಎಂದರು.




ಪೆÇ್ರ. ಎಂ. ಎ. ಹೆಗಡೆ: ಯಕ್ಷಗಾನದಲ್ಲಿ ದುಃಖದ ಪದ್ಯಕ್ಕೂ ಚಂಡೆಯನ್ನು ಸಮರ್ಥವಾಗಿ ನುಡಿಸಬಲ್ಲ ಏಕೈಕ ವ್ಯಕ್ತಿ ಶ್ರೀ ಕೃಷ್ಣ ಯಾಜಿಯವರು. ಸಮಾಜಕ್ಕೆ ನಿಮ್ಮಂತಹ ಕೃಷ್ಣ ಯಾಜಿಯವರು ಬೇಕಾಗಿದ್ದಾರೆ. ಅದಕ್ಕೆ ಅಕಾಡೆಮಿಯ ಸಂಪೂರ್ಣ ಬೆಂಬಲವಿದೆ ಎಂದು ಭರವಸೆ ನೀಡಿದರು. ಭಾರತೀಯ ಸಂಸ್ಕೃತಿಗೆ ಪೂರಕವಾಗಿ ಸಾಂಪ್ರದಾಯಿಕ ಕಲೆಗಳಿಗೆ ಸಲ್ಲುವ ಸಹಕಾರ ಸರಕಾರದಿಂದ ಸಿಗುತ್ತಿಲ್ಲ. ಸಾಂಸ್ಕೃತಿಕ ಬದುಕು ಸಮೃದ್ಧವಾಗಬೇಕಾದರೆ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಾಂಪ್ರದಾಯಿಕ ಕಲಾ ಪ್ರಕಾರಗಳಿಗೆ ಅನುದಾನವನ್ನು ವಿಶೇಷವಾಗಿ ನೀಡಬೇಕು.

ಸಾಂಸ್ಕೃತಿಕ ಕಾರ್ಯಕ್ರಮಗಳು:
ಮೊದಲಿಗೆ ಬೆಂಗಳೂರು ಶ್ರೀ ಸಯ್ಯದ್ ಸಲ್ಲಾವುದ್ದೀನ್ ಪಾಷಾರವರ ನಿರ್ದೇಶನ ಮತ್ತು ಕೊರಿಯೋಗ್ರಪಿಯಲ್ಲಿ ಗಾಲಿಖುರ್ಚಿಯಲ್ಲಿ ವಿಶೇಷ ಚೇತನರ ವಿವಿಧ ನಾಟ್ಯ ಪ್ರದರ್ಶನ ನಡೆಯಿತು. ನಂತರ ಕರ್ನಾಟಕ ಕಲಾದರ್ಶಿನಿ (ರಿ), ಬೆಂಗಳೂರು ಇವರಿಂದ ಡಾ. ಕೆ. ಶಿವರಾಮ ಕಾರಂತರ ನಿರ್ದೇಶನ ಹಾಗೂ ವಿದ್ವಾನ್ ಸುಧೀರ ರಾವ್, ಕೊಡವೂರು ಇವರ ನಿರ್ಮಾಣದ ಯಕ್ಷಗಾನ ಬ್ಯಾಲೆ ‘ಅಭಿಮನ್ಯು ವಧೆ’ ಪ್ರಸ್ತುತಿಗೊಂಡಿತು.

Leave a Comment