ಶಿವನ ಆರಾಧನೆಯ ದಿನವಾಗಿ ಗುರುತಿಸಲ್ಪಟ್ಟಿರುವ ಮಾಘಮಾಸದ ಬಹುಳ ಚತುರ್ದಶಿಯನ್ನು ಮಹಾಶಿವರಾತ್ರಿಯನ್ನು ಆಚರಣೆ ಸಡಗರ ಸಂಭ್ರಮದಿಂದ ಹೊನ್ನಾವರ ತಾಲೂಕಿನ ಎಲ್ಲಡೆ ನಡೆಯಿತು.
ಪಂಚಕ್ಷೇತ್ರಗಳಲ್ಲೊಂದೆನಿಸಿರುವ ಗುಣವಂತೆಯ ಶಂಭುಲಿಂಗೇಶ್ವರನ ಸನ್ನಿಧಿ ಶಿವರಾತ್ರಿ ಆಚರಣೆಗೆ ತಾಲೂಕಿನಲ್ಲೆ ಪ್ರಸಿದ್ಧವೆನಿಸಿದೆ. ದೇವಾಲಯದ ಮುಂಭಾಗದಲ್ಲಿರುವ ಕೆರೆಯಲ್ಲಿ ಸ್ನಾನ ಮಾಡಿದರೆ ಚರ್ಮ ರೋಗ ನಿವಾರಣೆಯಾಗಲಿದೆ ಎನ್ನುವ ಪ್ರತಿತಿ ಇದೆ. ಶಿವರಾತ್ರಿಯ ನಿಮಿತ್ತ ಬೆಳಿಗ್ಗೆಯಿಂದಲೇ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೀರಾಭೀಷೇಕ, ರುದ್ರಾಭೀಷೇಕ, ಜಲಾಭೀಷೇಕ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೇರವೇರಿದವು ಮುಂಜಾನೆ 4 ಗಂಟೇಯಿಂದ ರಾತ್ರಿ 9ರವರೆಗೂ ಸರತಿ ಸಾಲಿನಲ್ಲಿ ನಿಂತು ದರ್ಶನ ಮಾಡಿದರು.

ವೈಶ್ಯವಾಣಿ ಸಮುದಾಯದ ಮಹಾಗಣಪತಿ ದೇವಾಲಯದಲ್ಲಿ ಶಿವರಾತ್ರಿ ನಿಮಿತ್ತ 21ವರ್ಷದ ಅಂಗವಾಗಿ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಶಂಖದಿಂದ ಹಾಲು ಶಿವನ ಲಿಂಗದ ಮೇಲೆ ಬೀಳುವಂತೆ ಮಾಡಿರುವುದು ವಿಶೇಷವಾಗಿತ್ತು.
ಪಟ್ಟಣದ ಮೂಡಗಣಪತಿ ದೇವಾಲಯ, ಚಂದ್ರಮೂಳೇಶ್ವರ, ರಾಮತೀರ್ಥದ ರಾಮೇಶ್ವರ, ಗ್ರಾಮೀಣ ಭಾಗದ ಮಾಳಕೋಡ ಶ್ರೀ ಕ್ಷೇತ್ರಪಾಲೇಶ್ವರ, ಖರ್ವಾ ಹಸಿಮನೆಯ ಶ್ರೀ ಕೋದಂಡೇಶ್ವರ, ಮೂಡ್ಕಣಿಯ ಶ್ರೀ ಶಂಭುಲಿಗೇಶ್ವರ, ಉಪ್ಲೆಯ ಶ್ರೀ ಮಹಾಲಿಂಗೇಶ್ವರ, ದಿಬ್ಬಣಗಲ್ ಶ್ರೀ ಗಣಪತಿ ಈಶ್ವರ, ಶ್ರೀ ಶಂಭುಲಿಂಗೇಶ್ವರ ದೇವಾಲಯ ಹಡಿನಬಾಳ, ಕೊಡಾಣಿಯ ಶ್ರೀ ಕಾಮೇಶ್ವರ, ಕರ್ಕಿಯ ಸರ್ಪಕರ್ಣೇಶ್ವರ, ಶಿರೂರಿನ ಭೈರವೇಶ್ವರ, ಚಂದಾವರದ ಕೋನೇಶ್ವರ ಸಾಲ್ಕೋಡ ಬೊಂಡಕಾರೇಶ್ವರ, ದರ್ಬೆಜಡ್ಡಿ ಸೋಮೇಶ್ವರ ಮಂಕಿ ಕೋಕ್ಕೇಶ್ವರ ಸೇರಿದಂತೆ ವಿವಿಧ ಶಿವ ಸಾನಿಧ್ಯವಿರುವ ದೇವಾಲಯಗಳಲ್ಲಿ ಶಿವರಾತ್ರ ಆಚರಣೆ ಶೃದ್ದಾಭಕ್ತಿಯಿಂದ ನೇರವೇರಿತು.
Leave a Comment