
ಅಗ್ನಿಶಿಖೆ ಅಗ್ನಿಮುಖಿ ಲಾಂಗೂಲಕಿ ಲಾಂಗಲಾಹ್ವ ಗರ್ಭಗಾತಿನಿ ಇಂದ್ರಪುಷ್ಠಿ ಅಡವಿನಾಭಿ ಪೊಟ್ಟಿದುಂಪ ಕಾದಲ್ ಪೂ ಕಾರ್ತಿಕೈ ಕೆಳಂಗು ಈಗೆ ನಾನಾ ರೀತಿ ಹೆಸರುಗಳಿಂದ ಗುರುತಿಸುತ್ತಾರೆ.
ಕಾಡುಮೇಡು ಬೆಟ್ಟಗುಡ್ಡಗಳು ಬೇಲಿಗಳಲ್ಲಿ ಬೆಳೆಯುವ ಈ ಗಿಡಕ್ಕೆ ಆಯುರ್ವೇದ ಕಂಪನಿಗಳಿಂದ ಔಷಧಿ ತಯಾರಿಸಲು ಅಪಾರ ಬೇಡಿಕೆ ಇರುವುದರಿಂದ ಇದು ಅವನತಿ ಅಂಚಿಗೆ ಬಂದು ನಿಂತಿದೆ.
ಕರ್ನಾಟಕದ ಬಾವುಟವನ್ನು ಹೋಲುವ ಬಣ್ಣಗಳಿರುವ ಈ ಹೂ ನೋಡಲು ತುಂಬಾ ಆಕರ್ಷಕವಾಗಿರುತ್ತದೆ.ಇದನ್ನು ಜಿಂಬಾಬ್ವೆ ದೇಶ ರಾಷ್ಟ್ರೀಯ ಫುಷ್ಪ ಎಂದು ಘೋಷಿಸಿದೆ.
ಅತಿಮುಖ್ಯ ಸೂಚನೆ:- ಈ ಗಿಡವು ವಿಷದಿಂದ ಕೂಡಿದ್ದು, ಅನುಭವಿ ಆಯುರ್ವೇದ ವೈದ್ಯರು ಅಥವಾ ಪಂಡಿತರ ಸಲಹೆ ಸೂಚನೆಗಳಿಲ್ಲದೆ ಉಪಯೋಗಿಸಬಾರದು. ಇದರ ಗೆಡ್ಡೆ ಶುದ್ಧಿ ಮಾಡಿದರು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳಬಾರದು. ವೈದ್ಯರ ಸಲಹೆಯಂತೆ ಇಂತಿಷ್ಟೆ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು. ಆಗೊಮ್ಮೆ ತೆಗೆದುಕೊಂಡಿದ್ದೆ ಆದರೆ ವಾಂತಿ ಭೇದಿಯಾಗುವುದಲ್ಲದೆ ಹೃದಯಸ್ಥಂಬನವಾಗಿ ಮರಣವಾಗುವ ಸಂಭವ ಸಹ ಇರುತ್ತೆ. ಇದು ಎಷ್ಟು ಉಪಕಾರಿಯೋ ಅಷ್ಟೇ ಅಪಾಯಕಾರಿ.

ಇದನ್ನು ಬಾಹ್ಯ ಉಪಯೋಗ ಮಾಡುವಾಗ ಮಾತ್ರ ಶುದ್ಧಿ ಮಾಡದೆ ಉಪಯೋಗಿಸಬಹುದು, ಹೊಟ್ಟೆಗೆ ತೆಗೆದುಕೊಳ್ಳುವಾಗ ಮಾತ್ರ ಶುದ್ಧಿ ಮಾಡಿಯೇ ಉಪಯೋಗಿಸಬೇಕು ಹೆಚ್ಚರ….! ಯಾವುದಕ್ಕೂ ವೈದ್ಯರ ಸಲಹೆ ಅತಿಮುಖ್ಯ.
ಶುದ್ಧಿ ಮಾಡುವ ವಿಧಾನ:- ಅಗ್ನಿಶಿಖೆ ಗೆಡ್ಡೆಯನ್ನು ತಂದು ಶುದ್ಧವಾಗಿ ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ ಒಂದು ಮಡಕೆಯಲ್ಲಿ ಮಜ್ಜಿಗೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕಲಸಿ ಐದರಿಂದ ಆರು ದಿನಗಳ ಕಾಲ ಚೆನ್ನಾಗಿ ನೆನಸಿಟ್ಟು,ಹೊರತೆಗೆದು ನೆರಳಲ್ಲಿ ಒಣಗಿಸಿ ಉಪಯೋಗಿಸ ಬೇಕು.
ಹಾವು ಚೇಳು ವಿಷಜಂತುಗಳು ಕಚ್ಚಿದಾಗ ಶುದ್ಧಿಮಾಡಿದ ಗೆಡ್ಡೆಯ ಚೂರ್ಣ ಸೇವಿಸಿದರೆ ವಿಷ ನಿವಾರಣೆಯಾಗುತ್ತದೆ.ಇದರ ಗಂಧವನ್ನು ಕಚ್ಚಿದ ಜಾಗಕ್ಕೆ ಲೇಪನ ಮಾಡುತ್ತಾರೆ.ಇದು ವಿಷ ನಿವಾರಣೆ ಮಾಡುವದರಲ್ಲಿ ತುಂಬಾ ಪರಿಣಾಮಕಾರಿಯಾದಂತಹ ಕೆಲಸ ಮಾಡುತ್ತೆ.
ಈ ಹೂವಿನ ಪರಾಗಧೂಳನ್ನು ಎದೆಹಾಲಿನಲ್ಲಿ ತೇಯ್ದು ಕಣ್ಣು ನೋವಿಗೆ ಈಗಲೂ ಅನೇಕ ಕಡೆ ಬಳಸುತ್ತಾರೆ.
ಗರ್ಭಿಣಿ ಸ್ತ್ರೀಯರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಗೆಡ್ಡೆಯ ಗಂಧ ತೇಯ್ದು ಅಂಗಾಲು ಅಂಗೈಗೆ ಲೇಪನ ಮಾಡಿದರೆ ಸುಖಪ್ರಸವವಾಗುತ್ತದೆ.

Leave a Comment