
ಉತ್ತರ ಕನ್ನಡ ಜಿಲ್ಲಾ ಪೆÇಲೀಸ್ ಅಧೀಕ್ಷಕರಾದ ಶಿವ ಪ್ರಕಾಶ್ ದೇವರಾಜು ಅವರು ಸೈಬರ್ ಕ್ರ್ಯೆಂ ಜಾಗ್ರತಿ ಕಾರ್ಯಕ್ರಮವನ್ನು ಎಸ್.ಡಿ.ಎಂ ಕಾಲೇಜಿನಲ್ಲಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಾನೂನು ಅರಿಯುವುದು ಎಲ್ಲರ ಜವಬ್ದಾರಿ. ಕಾನೂನಿನ ಪಾಲನೆ ಮಾಡುವುದರಿಂದ ಕೇವಲ ನಮ್ಮ ರಕ್ಷಣೆ ಮಾತ್ರವಲ್ಲ ನಮ್ಮನ್ನ ನಂಬಿರುವ ಕುಟುಂಬದವರ ರಕ್ಷಣೆ ಜೊತೆಗೆ ಇತರರಿಗೆ ನಮ್ಮಿಂದಾಗುವ ಹಾನಿ ತಪ್ಪಿಸಬಹುದು. ಇಂದು ದೇಶದಾದ್ಯಂತ ಸೈಬರ್ ಕ್ರ್ಯೆಂ ಹೆಚ್ಚಾಗುತ್ತಿದೆ. ನಮ್ಮ ದೇಶದಲ್ಲಿ ಇಂದು ಕೇವಲ 30% ರಷ್ಟು ಜನರು ಮಾತ್ರ ಇಂಟರ್ನೆಟ್ ಉಪಯೊಗಿಸುತ್ತಿದ್ದಾರೆ. ಒಂದು ವೇಳೆ ಶೇ 70 ರಿಂದ ಶೇ.80 ಜನ ಇಂಟರ್ನೆಟ್ ಉಪಯೊಗಿಸುವ ಸಮಯ ಬಂದಾಗ ನಮ್ಮಲ್ಲಿನ ಸೈಬರ್ ಕ್ರ್ಯೆಂಗಳು ಮಿತಿಮೀರುವುದರಲ್ಲಿ ಯಾವುದೇ ಸಂಶಯವಿಲ್ಲ. ಯುವ ಸಮುದಾಯ ಇಂಟರನೇಟ್ ಮೋಸದ ಬಗ್ಗೆ ಜಾಗೃತಿವಹಿಸಬೇಕು. ಅದರಂತೆ ಸಂಚಾರ ನಿಯಮ ಪಾಲನೆ ಬಗ್ಗೆಯೂ ಗಮನಹರಿಸಬೇಕು. ಆದ್ದರಿಂದ ಸಾರ್ವಜನಿಕರಲ್ಲಿ ಕಾನೂನು ಪಾಲನೆ ಬಗ್ಗೆ ಅರಿವು ಮೂಡಬೇಕಾಗಿದೆ. ಈ ಬಗ್ಗೆ ವಿಧ್ಯಾರ್ಥಿಗಳು ಎಚ್ಚೆತ್ತುಕೊಳ್ಳ ಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ವಿಜಯಲಕ್ಷ್ಮಿ ನಾಯ್ಕ ಮಾತನಾಡಿ ನಮ್ಮ ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಕಾನೂನಿನ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳಿಗೆರ ಮಾಹಿತಿ ದೊರೆಯುವುದರಿಂದ ಅವರ ಕುಟುಂಬ ಒಡನಾಟ ಇರುವವರಿಗೆ ಇದರ ಬಗ್ಗೆ ಜಾಗೃತಿ ಮೂಡಿಸೋಣ ಎಂದರು.
ಈ ಸಂದರ್ಬದಲ್ಲಿ ಡಿವೈಎಸ್ಪಿ ಕೆ.ಸಿ ಗೌತಮ್, ಕಾರವಾರ ವೃತ್ತನಿರಿಕ್ಷರಾದ ರಾಮಚಂದ್ರ ನಾಯ್ಕ ಹೊನ್ನಾವರ ವೃತ್ತ ನಿರಿಕ್ಷಕರಾದ ವಸಂತ ಆಚಾರಿ, ಕಾಲೇಜಿನ ಯೂನಿಯನ್ ಸಂವಾಲಕರಾದ ಡಾ. ಎಂ. ಆರ್.ನಾಯ್ಕ ಉಪಸ್ಥಿತರಿದ್ದರು. ಪಿಎಸೈ ಶಶಿಕುಮಾರ್, ಸಾವಿತ್ರಿ ನಾಯಕ ಸಿಬ್ಬಂದಿಗಳು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಶಾಂತ ಹೆಗಡೆ ಮೂಡಲಮನೆ, ಲೋಕೇಶ ಅರಳಗುಪ್ಪಿ ಕಾರ್ಯಕ್ರಮ ನಿರ್ವಹಿಸಿದರು.

Leave a Comment