
ಜಿಲ್ಲೆಯ ಹಿರಿಯ ಜೇನು ಸಾಕುವವರ ಸಹಕಾರಿ ಸಂಸ್ಥೆಯಾದ ಹೊನ್ನಾವರ ಸಂಘದವರು ಇಂದು ಸಚಿವ ಶಿವರಾಮ ಹೆಬ್ಬಾರರನ್ನು ಅವರ ಯಲ್ಲಾಪುರ ಕಾರ್ಯಾಲಯದಲ್ಲಿ ಭೇಟಿಯಾಗಿ ಜೇನುತುಪ್ಪ ನೀಡಿ ಅಭಿನಂದಿಸಿದರು.
ಸಂಸ್ಥೆಯ ಕಟ್ಟಡ ಜೀರ್ಣವಾಗಿದ್ದು ನೂತನ ಕಟ್ಟಡ ನಿರ್ಮಾಣಕ್ಕೆ ಮತ್ತು ಜೇನು ವ್ಯವಸಾಯದ ಅಭಿವೃದ್ಧಿಗೆ ಸರ್ಕಾರದಿಂದ ಸಹಾಯ ಕೋರುವ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಸಂಸ್ಥೆಯ ಕುರಿತು ನನಗೆ ಅಭಿಮಾನವಿದೆ, ಜೇನು ವ್ಯವಸಾಯ ಈಗ ಉತ್ತಮ ಆದಾಯ ಕೊಡುವ ಮತ್ತು ಬೆಳೆ ಹೆಚ್ಚಿಸುವ ವ್ಯವಸಾಯವಾಗಿದ್ದು ಸರ್ಕಾರದಿಂದ ಸಾಧ್ಯವಾದ ನೆರವನ್ನು ಕೊಡಿಸುವುದಾಗಿ ಭರವಸೆ ನೀಡಿದರು. ಸಂಘದ ಅಧ್ಯಕ್ಷ ವಿಶ್ವನಾಥ ಭಟ್, ಉಪಾಧ್ಯಕ್ಷ ಪ್ರದೀಪ ನಾಯ್ಕ, ನಿರ್ದೇಶಕ ರವಿ ಶೆಟ್ಟಿ ಎಸ್.ಆರ್. ಹೆಗಡೆ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಹೆಗಡೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment