
ಹೊನ್ನಾವರ: ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗಿದ ದೇಶ ದ್ರೋಹಿಗಳು ಜೀವಾವಧಿ ಜೈಲು ಶಿಕ್ಷೆ ನೀಡಬೇಕು ಎಂದು ಕ ರ ವೇ ಗಜಸೇನೆ ವತಿಯಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಶರಾವತಿ ವ್ರತ್ತದಲ್ಲಿ ದೇಶದ್ರೋಹಿ ಚಟುವಟಿಕೆ ನಡೆಸುವವರ ವಿರುದ್ದ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ತದನಂತರ ಪ್ರತಿಭಟನಾ ರ್ಯಾಲಿ ಮುಲಕ ತಹಶಿಲ್ದಾರ ಕಚೇರಿ ತಲುಪಿ ಮನವಿ ಸಲ್ಲಿಸಿದರು. ತಹಶಿಲ್ದಾರ ವಿವೇಕ ಶೆಣ್ವಿ ಮನವಿ ಸ್ವಿಕರಿಸಿದರು.
ಅಮೂಲ್ಯ ಲಿಯೊನ್, ಅನ್ನಪೂರ್ಣ ಅರ್ದಾ ಮತ್ತು ಹುಬ್ಬಳ್ಳಿಯ ಕಾಲೇಜಿನಲ್ಲಿ ಓದುತ್ತಿರುವ ಕಾಶ್ಮೀರಿ ವಿಧ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಜೈಲಿನಿಂದ ಹೊರಗಡೆ ಬಿಡಬಾರದು ಜೀವಾವಧಿ ಜೈಲಿನಲ್ಲೇ ಇರಬೇಕು ಇವರ ಜೊತೆಗೆ ಬೆಂಬಲವಾಗಿ ಪೆÇ್ರೀತ್ಸಾಹ ನೀಡುತ್ತಿರುವ ದೇಶದ್ರೋಹಿಗಳನ್ನು ಆದಷ್ಟು ಶೀಘ್ರವಾಗಿ ಬಂಧಿಸಬೇಕು. ಇಂತಹ ದೇಶದ್ರೋಹಿಗಳನ್ನು ಬಂಧಿಸಿ ವಿಚಾರ ನಡೆಸಿದ್ದಲ್ಲಿ ಅನೇಕಮುಖವಾಡಗಳು ಕಳಚಿ ಹೊರಗಡೆ ಬರುತ್ತವೆ. ಇಲ್ಲದಿದ್ದರೆ ಇಂತಹ ಕೋಮುಗಲಭೆ ಸೃಷ್ಟಿಸಿ ದೇಶದ ನೆಮ್ಮದಿಯನ್ನು ಹಾಳುಮಾಡುತ್ತಾರೆ. ಆದ್ದರಿಂದ ಇಂತಹ ದೇಶದ್ರೋಹಿ ಚಟುವಟಿಕೆಗಳಿಗೆ ಬೆಂಬಲ ಸೂಚಿಸುವವರು ಯಾವುದೇ ಪಕ್ಷದ ಮುಖಂಡರಾದರು , ಯಾವ ಸಂಘಟನೆಗೆ ಸೇರಿದವರಾದರು ಮತ್ತು ಏಂತಹ ಪ್ರತಿಷ್ಟಿತ ವ್ಯಕ್ತಿಯಾದರು ಅವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಕುರಿತು ಕರವೇ ಗಜಸೇನೆ ಜಿಲ್ಲಾ ಕೋಶಾಧ್ಯಕ್ಷ ನೀಲಕಂಠ ನಾಯ್ಕ,ತಾಲೂಕಾದ್ಯಕ್ಷ ಗಣೇಶ ನಾಯ್ಕ ಮಾತನಾಡಿ ದೇಶದಲ್ಲೇ ಇದ್ದು ಇಲ್ಲಿಯ ಅನ್ನ ತಿಂದು ರಾಷ್ಟ್ರವಿರೋಧಿ ಚಟುವಟಿಕೆ ನಡೆಸುತ್ತಾರೆ.ಇಂತಹ ದೇಶದ್ರೋಹಿಗಳನ್ನು ಬಂಧಿಸಿ ವಿಚಾರ ನಡೆಸಿದ್ದಲ್ಲಿ ಇನ್ನಷ್ಟು ಅಪರಾಧಿಗಳು ಸಿಗಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ಆದರ್ಶ ನಾಯ್ಕ,ಮಾರುತಿ ನಾಯ್ಕ, ವಿನೋದ್ ಗೌಡ, ಸಂತೋಷ್ ಜೈನ್, ವಿದ್ಯಾಧರ, ಹರೀಶ್,ಹಿಂದೂ ಜಾಗರಣಾ ವೇದಿಕೆ ವಿರೇಂದ್ರ ಮೇಸ್ತ ಮತ್ತಿತರಿದ್ದರು.

Leave a Comment