
ಜೋಯಿಡಾ :- ದಾಂಡೇಲಿ ಈಗಾಗಲೇ ರಾಜ್ಯ ಮಟ್ಟದಲ್ಲಿ ಅಲ್ಲದೇ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದೆ, ಇಲ್ಲಿನ ಪ್ರವಾಸೋದ್ಯಮ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಎಂದು ಉತ್ತರಕನ್ನಡದ ಜಿಲ್ಲಾಧಿಕಾರಿ ಕೆ ಹರೀಷಕುಮಾರ ಹೇಳಿದರು.
ಅವರು ಜೋಯಿಡಾ ತಾಲೂಕಿನ ಗಣೇಶಗುಡಿಯ ಹಾರ್ನಬಿಲ್ ಅಡ್ವಂಚರ್ ನಲ್ಲಿ ನಡೆದ ಕಯಾಕಿಂಗ್ ಉತ್ಸವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗಾಳಿಪಟ ಉತ್ಸವ ಮಾಡಿದ್ದೇವೆ,ಈಗ ದಾಂಡೇಲಿಯಲ್ಲಿ ಕಯಾಕಿಂಗ್ ,ರಾಪ್ಟಿಂಗ್ ಅನ್ನು ಮಾಡುತ್ತಿದ್ದೇವೆ, ಈ ಪ್ರದೇಶವನ್ನು ವಿಶ್ವದ ಪ್ರಸಿದ್ದ ಸ್ಥಳಗಳಲ್ಲಿ ಒಂದನ್ನಾಗಿ ಮಾಡುವ ಕೆಲಸ ಆಗಬೇಕಿದೆ. ಈ ಎಲ್ಲಾ ಜಲ ಕ್ರೀಡೆಗಳು ಯುವಕರನ್ನು ಆಕರ್ಷಿಸುತ್ತೆ, ಮೋಜಿನ ಜೊತೆಗೆ ಎಚ್ಚರಿಕೆ ಕೂಡ ಇರಲಿ.
ಉತ್ತರಕನ್ನಡದಲ್ಲಿ ಅನೇಕ ಪ್ರವಾಸಿ ತಾಣಗಳು,ದೇವಾಲಯಗಳು ,ಪುಣ್ಯ ಕ್ಷೇತ್ರಗಳಿವೆ ಅವಗಳನ್ನು ಅಭಿವೃದ್ಧಿ ಮಾಡುವ ಕನಸ್ಸು ಹೊಂದಿದ್ದೇವೆ. ಇಂದು ಕಯಾಕಿಂಗ್ ಉತ್ಸವ ನಡೆಸಲು ಸಹಕರಿಸಿದ ರೆಸಾರ್ಟ್ ಮತ್ತು ಹೋಮ ಸ್ಟೇ ಮಾಲಿಕರಿಗೆ ಎಲ್ಲರಿಗೂ ಅಭಿನಂದಿಸುತ್ತೆನೆ ಎಂದರು.

ಕಯಾಕಿಂಗ್ ಉತ್ತಮ ಅನುಭವ –
ಜೋಯಿಡಾ ತಾಲೂಕಿನ ಗಣೇಶಗುಡಿ ಭಾಗದ ಕಾಳಿ ನದಿಯಲ್ಲಿ ಕಯಾಕಿಂಗ್ ಎನ್ನುವ ನೀರಿನಲ್ಲಿ ದೋಣಿಗಳ ಮೂಲಕ ತೇಲಾಡುವ ಮೂಲಕ ಇನ್ನೀತರ ನೀರಿನಲ್ಲಿ ಆಟವಾಡುವ ಚಟುವಟಿಕೆಯಾಗಿದ್ದು, ಇದು ಯುವ ಜನಕ್ಕೆ ಬಹಳ ಸಂತೋಷಮಯವಾಗಿದೆ ,ನೂರಾರು ಯುವ ಜನತೆ ಕಯಾಕಿಂಗ್ ಉತ್ಸವದಲ್ಲಿ ಭಾಗವಹಿಸಿ ಸಂತಸಪಟ್ಟರು.
ಗಣ್ಯರಿಂದ ಕಯಾಕಿಂಗ್ ಗೆ ಚಾಲನೆ
ಕಯಾಕಿಂಗ್ ಉತ್ಸವವನ್ನು ಜಿಲ್ಲಾಧಿಕಾರಿ ಹರೀಷಕುಮಾರಉದ್ಘಾಟನೆ ಮಾಡಿದ ನಂತರ ಅವರು ಕೂಡಾ ಕಯಾಕಿಂಗ್ ನಡೆಸಿದರು ಜೊತೆಯಲ್ಲಿ ಜಿ.ಪಂ.ಸದಸ್ಯ ರಮೇಶ ನಾಯ್ಕ , ಎ.ಸಿ. ಪ್ರಿಯಾಂಕ ಇನ್ನೀತರರು ನೀರಿನಲ್ಲಿ ಇಳಿದು ಕಯಾಕಿಂಗ್ ನ ಅನುಭವ ಪಡೆದರು.
ಈ ಸಂದರ್ಭದಲ್ಲಿ ಉತ್ತರಕನ್ನಡದ ಎ.ಸಿ.ಪ್ರಿಯಾಂಕ. ಜಿ.ಪಂ.ಸದಸ್ಯ ರಮೇಶ ನಾಯ್ಕ, ಅವೇಡಾ ಗ್ರಾ.ಪಂ.ಅದ್ಯಕ್ಷೆ ಕಸ್ತೂರಿ ಗುಡಿ, ಜೋಯಿಡಾ ತಹಶೀಲ್ದಾರ ಸಂಜಯ ಕಾಂಬಳೆ, ದಾಂಡೇಲಿ ತಹಶೀಲ್ದಾರ ಶೈಲೆಶ ಪರಮಾನಂದ, ಹಾರ್ನಬಿಲ್ ರೆಸಾರ್ಟ್ ಮಾಲಿಕ ಉಮೇಶ ದಾಂಡೇಲಿ ಉಪಸ್ಥಿತರಿದ್ದರು.
ಕೆ ಹರೀಶ್ ಕುಮಾರ್ – ಉತ್ತರಕನ್ನಡ ಜಿಲ್ಲಾಧಿಕಾರಿ
ಕಯಾಕಿಂಗ್ ಉತ್ಸವದಲ್ಲಿ ಭಾಗವಸಿದ್ದು ಸಂತಸ ತಂದಿದೆ, ನೀರಿನಲ್ಲಿ ತೇಲಾಡುವ ಅನುಭವ ಸೊಗಸಾಗಿದೆ. ಇದು ಜೋಯಿಡಾ ತಾಲೂಕಿನ ಪ್ರದೇಶವಾಗಿದ್ದು ಮುಂದಿನ ದಿನಗಳಲ್ಲಿ ದಾಂಡೇಲಿ ಬದಲು ಜೋಯಿಡಾ ಹೆಸರು ಸೂಚಿಸಲು ಆದೇಶಿಸಿತ್ತೇನೆ.

ಜೋಯಿಡಾ ತಾಲೂಕಿನಲ್ಲಿ ನಡೆಯುವ ಈ ಉತ್ಸವಕ್ಕೆ ದಾಂಡೇಲಿ ಎಂದು ಬೋರ್ಡ್ ಹಾಕಲಾಗಿತ್ತು , ಹಾಗೂ ಕಯಾಕಿಂಗ್ ಉತ್ಸವಕ್ಕೆ ಪ್ರವಾಸೋದ್ಯಮ ಇಲಾಕೆಯಿಂದ ಬಂದ ಅತಿಥಿಗಳಿಗೆ ಟೀ ಶರ್ಟ ನೀಡಿದ್ದರು ಅದರ ಮೇಲೆಯೂ ಸ್ಥಳ ದಾಂಡೇಲಿ ಎಂದು ಬರೆಸಲಾಗಿತ್ತು. ಇದನ್ನು ನೋಡಿದ ಕೆಲ ಜೋಯಿಡಾದ ಜನರು ಹಾಗೂ ಪತ್ರಕರ್ತರ ಸಂಘದವರು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿ ಇದು ಜೋಯಿಡಾ ತಾಲೂಕು ಕಯಾಕಿಂಗ್ ಉತ್ಸವ ನಡೆಯುತ್ತಿರುವುದು ಜೋಯಿಡಾ ತಾಲೂಕಿನಲ್ಲಿ ಹಾಗೂ ಇಲ್ಲಿನ ಕೆಲ ಹೋಮ್ ಸ್ಟೇ ಹಾಗೂ ರೆಸಾರ್ಟ್ ನವರು ದಾಂಡೇಲಿ ಎಂದು ಬೋರ್ಡ್ ಹಾಕಿದ್ದಾರೆ ,ಜೋಯಿಡಾ ಮೊದಲೇ ಹಿಂದುಳಿದ ತಾಲೂಕು ,ಪ್ರವಾಸೋದ್ಯಮದ ಮೂಲಕವೇ ತಾಲೂಕು ಬೆಳೆಯುತ್ತಿದೆ,ಈಗ ಇದರಿಂದಲೂ ನಮ್ಮತಾಲೂಕನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಹರೀಷಕುಮಾರ ಈ ಬಗ್ಗೆ ನನಗೆ ತಿಳಿದಿರಲಿಲ್ಲ ,ಕೂಡಲೇ ಎಲ್ಲಾ ಹೋಮ್ ಸ್ಟೇ ಮಾಲಿಕರಿಗೆ ಹಾಗೂ ರೇಸಾರ್ಟ ಮಾಲಿಕರಿಗೆ ಜೋಯಿಡಾ ಎಂದು ಹೆಸರು ಹಾಕಲು ಸೂಚಿಸುತ್ತವೆ, ಅಲ್ಲದೆ ಮುಂದೆ ಇಂಥ ಉತ್ಸವ ಜೋಯಿಡಾ ತಾಲೂಕಿನ ಯಾವುದೇ ಗಡಿಯಲ್ಲಿ ನಡೆದರು ಜೋಯಿಡಾ ಹೆಸರು ಬರುವಂತೆ ತಿಳಿಸುತ್ತೇನೆ ಎನ್ನುವ ಭರವಸೆ ನೀಡಿದರು.



Leave a Comment