• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

*ಅರಣ್ಯವಾಸಿಗಳಿಗೆ ಆತಂಕಪಡಿಸುವಂತಿಲ್ಲ ಮದ್ಯಂತರ ಆದೇಶ ಮುಂದುವರೆಸಿದ ಹೈಕೋರ್ಟ್.*

March 18, 2020 by Vishwanath Shetty Leave a Comment

IMG 20200317 WA0054

ಶಿರಸಿ:  ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿ ಪ್ರಕ್ರಿಯೆಯಲ್ಲಿ ನ್ಯೂನತೆ ಆಕ್ಷೇಪಿಸಿ, ಅರಣ್ಯ ವಾಸಿಗಳ ಪರವಾಗಿ ಸರ್ಕಾರಕ್ಕೆ ಸೂಕ್ತ ನಿರ್ಧೇಶನ ನೀಡಬೇಕೆಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಸಲ್ಲಿಸಿದ ಸಾರ್ವಜನಿಕ ಹಿತಾಶಕ್ತಿ ಅರ್ಜಿ ( ಪಿ. ಐ. ಎಲ್  ರಿಟಫಿಟೇಶನ್  ೧೧೦೮೩/ ೨೦೧೯ ) ರಲ್ಲಿ ಸರ್ಕಾರವು ಅರಣ್ಯ ವಾಸಿಗಳಿಗೆ ಆತಂಕ ಪಡಿಸಬಾರದೆಂಬ ಈ ಹಿಂದೆ ನೀಡಿದ ಮಧ್ಯಂತರ ಆದೇಶವನ್ನು ಮುಂದುವರಿಸಿ ಸರ್ಕಾರದ ಹೇಳಿಕೆಗೆ ಕಾಲಾವಕಾಶ ನೀಡಿ ಮುಂದಿನ ವಿಚಾರಣೆಗೆ ಪ್ರಕರಣವನ್ನು ಮುಂದುಡಲಾಯಿತೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂಧ್ರ ನಾಯ್ಕ ಸಲ್ಲಿಸಿದ ಸದ್ರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಂದು ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಓಕ ಮತ್ತು ಅಶೋಕ ಕೀನಾಗಿ ದ್ವಿಸದಸ್ಯದ ಪೀಠದ  ನ್ಯಾಯಾಲಯದಲ್ಲಿ ವಿಚಾರಣೆ ಜರುಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅರ್ಜಿಗಳ ವಿಲೇವಾರಿ ಸಂದರ್ಭದಲ್ಲಿ ಉಪ ಮತ್ತು ಜಿಲ್ಲಾ ಅರಣ್ಯ ಹಕ್ಕು ಸಮಿತಿ ನಿರ್ದಿಷ್ಠ ದಾಖಲೆಗಳಿಗೆ ಒತ್ತಾಯಿಸಿ ಅರ್ಜಿಗಳು ತೀರಸ್ಕಾರ ಮಾಡಿರುವ ಮಂಜೂರಿಯ ವಿವಿಧ ಹಂತದ ಸಮಿತಿಗಳು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ ಇರುವುದರಿಂದ ಅರಣ್ಯ ವಾಸಿಗಳು ಸಾಗುವಳಿ ಹಕ್ಕಿನಿಂದ ವಂಚಿತರಾಗುವ ಹಿನ್ನೆಲೆಯಲ್ಲಿ  ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕೆಂಬ ಪರಿಹಾರ ಕೋರಿ ಸಲ್ಲಿಸಿದ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಅರಣ್ಯ ವಾಸಿಗಳ ಪರವಾಗಿ ಹೋರಾಟಗಾರರ ವೇದಿಕೆಯು ಕಳೆದ ಮಾರ್ಚನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರಿನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ದಾಖಲಿಸಿದ್ದು ಇರುತ್ತದೆ.ಸಾರ್ವಜನಿಕ ಹಿತಾಶಕ್ತಿ ಅರ್ಜಿಯಲ್ಲಿ ಮಂಜೂರಿ ಸಮಿತಿಗಳು ಕಾನೂನಿನಲ್ಲಿ ಮೇಲ್ಮನವಿದಾರನಿಗೆ ಸಾಕಷ್ಠು ಕಾಲಾವಕಾಶದೊಂದಿಗೆ ವಿಚಾರಣೆ ಗೋಳಿಸಬೇಕೆಂಬ ಹಾಗೂ ಒಂದೇದಿನದ ವಿಚಾರಣೆಯಲ್ಲಿ ಸಾವಿರಾರು ಅರ್ಜಿ ಮತ್ತು ಮೇನ್ಮನವಿ ಯಾಂತ್ರಿಕವಾಗಿ ತೀರಸ್ಕಾರವಾಗಿರುವುದನ್ನು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಅಲ್ಲದೇ ಅರಣ್ಯ ವಾಸಿಗಳು ನೀಡಿದ ಅರ್ಜಿಯಲ್ಲಿ ಎರಡು-ಮೂರರಷ್ಠು ಅರ್ಜಿಗಳು ತೀರಸ್ಕಾರವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ವಾಸಿಗಳ ಪರವಾಗಿ ಕಾನೂನಿನಲ್ಲಿ ಉಲ್ಲೇಖಿಸಿದಂತೆ ನಿರ್ದಿಷ್ಟ ದಾಖಲೆಗಳಿಗೆ ಒತ್ತಾಯಿಸತಕ್ಕದ್ದಲ್ಲ ಎಂಬ ನಿರ್ಧೇಶನವನ್ನು ರಾಜ್ಯ ಸರ್ಕಾರಕ್ಕೆ ನೀಡುವಂತೆ ಅರ್ಜಿಯಲ್ಲಿ ಪರಿಹಾರ ಕೆಳಲಾಗಿದೆ ಎಂದು ಅಧ್ಯಕ್ಷ ರವೀಂಧ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

IMG 20200316 WA0100


Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Sirsi News Tagged With: ಅರಣ್ಯ ಹಕ್ಕು ಕಾಯಿದೆ, ಅರಣ್ಯವಾಸಿಗಳಿಗೆ ಆತಂಕಪಡಿಸುವಂತಿಲ್ಲ, ಕರ್ನಾಟಕ ಉಚ್ಛ ನ್ಯಾಯಾಲ, ಕಾಯಿದೆ ಅರ್ಜಿಗಳ ವಿಲೇವಾರಿ ಸಂದರ್ಭ, ಮದ್ಯಂತರ ಆದೇಶ, ಸಾರ್ವಜನಿಕ ಹಿತಾಶಕ್ತಿ, ಹೈಕೋರ್ಟ್

Explore More:

About Vishwanath Shetty

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...