
ಜೋಯಿಡಾ ;
ಜೋಯಿಡಾ ತಾಲೂಕಿನ ಶ್ರೀ ಕ್ಷೇತ್ರ ಉಳವಿಯಲ್ಲಿ ಕರೋನಾ ವೈರಸ್ ಬಗ್ಗೆ ಉಳವಿ ಗ್ರಾಮ ಪಂಚಾಯತ್ ವತಿಯಿಂದ ಧ್ವನಿವರ್ಧಕ ದ ಮೂಲಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಊರುಗಳಿಗೆ ಹೋಗಿ ಸೂಕ್ತ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಳವಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಂಜುನಾಥ ಮೋಕಾಶಿ ಕರೋನಾ ಎಂಬುದು ದೊಡ್ಡ ರೋಗ. ಇದನ್ನು ನಿಯಂತ್ರಣದಲ್ಲಿ ಇರಬೇಕಾದರೆ ನಾವು ಮುನ್ನಚ್ಚರಿಕೆ ವಹಿಸಬೇಕು. ಕೈ ಕಾಲುಗಳನ್ನು ತೊಳೆದು ಆಹಾರ ಸೇವಿಸಬೇಕು. ಹಾಗೂ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಸಭೆ ಸಮಾರಂಭ ಮಾಡದಂತೆ ಈ ಮೂಲಕ ಎಲ್ಲರಿಗೂ ತಿಳಿಸುತ್ತಿದ್ದೇವೆ ಎಂದರು.
ಉಳವಿ ಗ್ರಾಮ ಪಂಚಾಯತಿ ಪಿ.ಡಿಓ.ಮಹಮದ್ ಹನೀಪ್ ಕರೋನಾ ವೈರಸ್ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರು ವಹಿಸಬೇಕಾದ ಕ್ರಮದ ಬಗ್ಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಲೆ ಸಿಬ್ಬಂದಿ ಶಂಕರ ಎಸ್ ಹಾಗೂ ಇತರ ಸ್ಥಳೀಯರು ಉಪಸ್ಥಿತರಿದ್ದರು.

Leave a Comment