ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತವಾಗಿದ್ದು, ಪ್ರಧಾನಿ ಮೋದಿ ಕರೆ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಗೆ ದೇಶಾದ್ಯಂತ ನಾಗರಿಕರು ತಮ್ಮ ಮನೆಗಳಿಂದಲೇ ಕೊರೊನೊ ತಡೆಗೆ ಹೋರಾಡುತ್ತಿರುವವರಿಗೆ ಧನ್ಯವಾದ ಅರ್ಪಿಸಿದರು. ಇದಕ್ಕೆ ಪ್ರಧಾನಿ ಮೋದಿ ದೇಶದ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಥ್ಯಾಂಕ್ಯೂ ಸಿಟಿಜನ್ಸ್ ಎಂದು ಧನ್ಯವಾದ ಸಲ್ಲಿಸಿದ್ದಾರೆ. ಮಾರಕ ಕೊರೊನಾ ಸೋಂಕು ತಡೆಗಟ್ಟಲು ಪ್ರಧಾನಿ ಮೋದಿ ಇಂದು ಜನತಾ ಕರ್ಫ್ಯೂಗೆ ಕರೆನೀಡಿದ್ದರು. ಅಲ್ಲದೇ ಸಂಜೆ 5 ಗಂಟೆಗೆ ಸರಿಯಾಗಿ ಎಲ್ಲ ನಾಗರಿಕರು ತಮ್ಮ ಮನೆಗಳಿಂದಲೇ ಚಪ್ಪಾಳೆ ತಟ್ಟಿ, ತಟ್ಟೆಗಳನ್ನು ಬಡಿದು, ಗಂಟೆ ಹೊಡೆಯುವ ಮೂಲಕ ಕೊರೊನಾ ತಡೆಗೆ ಶ್ರಮಿಸುತ್ತಿರುವವರಿಗೆ ಧನ್ಯವಾದ ಸಲ್ಲಿಸಿ ಎಂದು ಮನವಿ ಮಾಡಿದ್ದರು.
ಹೊನ್ನಾವರ ತಾಲೂಕಿನ ಜನತೆ ಸಂಜೆ ಐದು ಗಂಟೆಗೆ ಮನೆಗಳ ಮೇಲೆ ನಿಂತು ಚಪ್ಪಾಳೆ ತಟ್ಟಿ, ಗಂಟೆ, ಜಾಗಟೆ ಬಾರಿಸಿ, ಶಂಖ ಊದಿ ಕೊರೊನಾ ವೈರಸ್ ಹರಡುವಿಕೆ ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಅಭಿನಂದನೆಗಳ ಸಲ್ಲಿಸಿದರು ಗಂಟೆಗೆ ತಾಗುತ್ತಿದ್ದಂತೆಯೇ ಅಭಿನಂದನೆಯ ಸದ್ದು ಮಾರ ನಿಂತು ಚಪ್ಪಾಳೆ ಬಾವೃದ್ಧರು, ಮಹಿಳೆಯರು, ಮಕ್ಕಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡರುಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಚಿಕಿತ್ಸೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವೈದ್ಯರು, ಶುಶ್ರೂಷಕ ಸಿಬ್ಬಂದಿ, ಸರ್ಕಾರಿ ಅಧಿಕಾರಿಗಳು, ಪೊಲೀಸರು, ಮಾಧ್ಯಮದವರು ಹೀಗೆ ಸಮಾಜದ ನಾನಾ ವರ್ಗದವರು ಹಗಲಿರುಳು ದುಡಿಯುತ್ತಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಲು ಸಾಮೂಹಿಕವಾಗಿ ಚಪ್ಪಾಳೆ ತಟ್ಟಲು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಸಲಹೆ ನೀಡಿದ್ದರು ಹೊನ್ನಾವರ ಪಟ್ಟಣ ಅಷ್ಟೆ ಅಲ್ಲದೆ ಗ್ರಾಮಂತರ ಪ್ರದೇಶದ ಅಂಗಡಿಗಳು ಬಂದ್ ಆಗಿತ್ತು. ಸಾರಿಗೆ ಸಂಸ್ಥೆ ಬಸ್ ಅಲ್ಲದೇ ಮ್ಯಾಕ್ಸಿ ಕ್ಯಾಬ್ ಆಟೋ ರಿಕ್ಷಾ ಸೇರಿದಂತೆ ಎಲ್ಲ ವಾಹನ ಚಾಲಕರು ಸಂದ್ಪಿಸಿದ್ದರು. ಸದಾ ಜನಜಂಗುಲಿಯಿಂದ ತುಂಬಿದ್ದ ಹೊನ್ನಾವರ ಪಟ್ಟಣದ ರಸ್ತೆಗಳೆಲ್ಲ ವಾಹನ ಸಂಚಾರ ಇರಲಿಲ್ಲ ಬಂದರ್ ಭಾಗದಲ್ಲಿ ಮೀನು ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು ತಾಲೂಕಿನ ಬಸ್ ನಿಲ್ದಾಣವು ಕೂಡಾ ಬಸ್ ಚಲಿಸದೇ ನಿಂತಿತ್ತು. ಒಟ್ಟಾರೆ ಶಾಂತಿಯುತವಾಗಿ ಜನತಾ ಕರ್ಪೂ ನಡೆದಿದ್ದು ೫ ಗಂಟೆಗೆ ಎಲ್ಲಡೆ ಗಂಟೆ ಚಪ್ಪಾಳೆ ನಾದ ಕೇಳಿ ಬಂತು.
ಶಂಕರ ಗೌಡ. ಗುಣಮಂತೆ ಉಪನ್ಯಾಸಕರು ಹಾಗೂ ಸಾಹಿತಿಗಳು
ದಂಡಿನ ದುರ್ಗಾ ದೇವಾಲಯ ಹತ್ತಿರ ಹೊನ್ನಾವರ
Leave a Comment