
ಜೋಯಿಡಾ ;
ಜೋಯಿಡಾ ತಾಲೂಕಾ ಕೇಂದ್ರದ ತಾಲೂಕಾ ಕಛೇರಿಗಳು, ಮಾರುಕಟ್ಟೆಗಳು ಜನನಿಬಿಡ ಪ್ರದೇಶವಾಗುತ್ತಿದ್ದು, ಬಿಕೋ ಎನ್ನುತ್ತಿದೆ. ಕೊರೋನಾ ವೈರಸ್ ಆತಂಕ ಈಗ ಜೋಯಿಡಾ ತಾಲೂಕಿಗೂ ತಟ್ಟಿದಂತಿದೆ. ತಹಶೀಲ್ಲದಾರ ಕಛೇರಿ ಆವರಣದಲ್ಲಿ ಕೊರೋನಾ ಕ್ಯಾರ್ ಸೆಂಟರ್ ತೆರೆಯಲಾಗಿದೆ.
ಸರಕಾರದ ಆದೇಶದನ್ವಯ ಕೊರೋನಾ ಸೊಂಕು ಹರಡುವಿಕೆಯನ್ನು ಪರಿಣಾಮ ಕಾರಿಯಾಗಿ ತಡೆಯುವ ಮುಂಜಾಗ್ರತಾ ಕ್ರಮವಾಗಿ ತಾಲೂಕಾ ಆಡಳಿತ ತುರ್ತು ಅಲ್ಲದ ಕೆಲಸಗಳಿಗೆ ಆಗಮಿಸುವ ಸಾರ್ವಜನಿಕರ ಪ್ರವೇಶವನ್ನು ಮುಂದಿನ ಆದೇಶ ಬರುವ ವರೆಗೆ ನಿರ್ಭಂದಿಸಿದ್ದಾಗಿ ತಹಶೀಲ್ದಾರ ಸಂಜಯ ಕಾಂಬ್ಳೆ ತಿಳಿಸಿದ್ದು, ಸಾರ್ವಜನಿಕರಿಗೆ ಸಲಹೆ ಹಾಗೂ ಜಾಗ್ರತಿ ಮೂಡಿಸಲು ಕಛೇರಿ ಆವರಣದಲ್ಲಿ ಕೊರೋನಾ ಅವೆರ್ನೆಸ್ ಸೆಂಟರ್ ತೆರೆಯಲಾಗಿದ್ದಾಗಿ ತಿಳಿಸಿರುತ್ತಾರೆ.
ಸರಕಾರದ ಈ ದಿಟ್ಟ ನಿರ್ಧಾರದ ಹಿನ್ನೆಲೆಯಲ್ಲಿ ಜನ ಜಾಗ್ರತರಾಗಿದ್ದು, ತಾಲೂಕಿನಾದ್ಯಂತ ಕೊರೋನಾ ವೈರಸ್ ಬಗ್ಗೆ ಜನಸಾಮಾನ್ಯರು ಎಚ್ಚೆತ್ತುಕೊಂಡಿದ್ದು, ಮುಂಜಾಗ್ರತೆ ವಹಿಸಿದ್ದಾರೆ. ಜೋಯಿಡಾ ತಾಲೂಕಿನ ಸರಕಾರಿ ಕಛೇರಿಗಳಲ್ಲಿ ದಿನನಿತ್ಯ ಕೆಲಕಾರ್ಯಗಳಿಗೆ ಬರುತ್ತಿರುವ ಜನ ಸಾಮಾನ್ಯರು ಕಛೇರಿ ಕೆಲಸದಿಂದ ದೂರ ಉಳಿದಿದ್ದು, ಕಛೇರಿಗಳು ಬಿಕೋ ಎನ್ನುವಂತಾಗಿದೆ. ತರಕಾರಿ ಹಾಗೂ ದಿನಸಿ ವ್ಯಾಪಾರಿ ಮಳಿಗೆಗಳಲ್ಲಿ ಜನ ಸಂದಣಿ ಇಲ್ಲವಾಗಿದ್ದು, ಆಗೊಮ್ಮೆ ಈಗೊಮ್ಮೆ ಅಗತ್ಯ ಸಾಮಗ್ರಿಗಳಿಗಾಗಿ ಕೆಲ ಜನರು ಅಂಗಡಿಗಳಿಗೆ ಬರುತ್ತಿದ್ದು ಬಿಟ್ಟರೆ, ಮಾರಿಕಟ್ಟೆಗಳು ಜನರಿಲ್ಲದೆ ಬಿಕೊ ಎನ್ನುವ ವಾರಾವರಣ ಸೃಷ್ಟಿಯಾಗಿದೆ.

ಬ್ಯಾಂಕ್ಗಳು ಕೂಡಾ ಇದೇ ಕ್ರಮ ಅನುಸರಿಸಿದ್ದು, ಗ್ರಾಹಕರಿಗೆ ಗುಂಪುಗುಂಪಾಗಿ ಬಿಡದೆ ನಾಲ್ಕು ಐದು ಜನರಿಗೆ ಹಂತಹಂತವಾಗಿ ಪ್ರವೇಶ ನೀಡುತ್ತಿದ್ದು, ಜೋಯಿಡಾ ಭಹುತೇಕ ಹೊಟೆಲ್ಗಳಲ್ಲಿಯೂ ವಿಧೇಶಿಗರ ಪ್ರವೇಶ ನಿಷೇದಿಸಲಾಗಿದೆ. ಶಾಲೆ ಕಾಲೇಜುಗಳು ಬಂದಾಗಿವೆ. ಕೇವಲ ಶಿಕ್ಷಕರು ಮಾತ್ರ ಪ್ರತಿನಿತ್ಯ ಶಾಲೆಗೆ ಹೋಗಿ ಬರುತ್ತಿದ್ದು, ಪಿ.ಯು.ಸಿ. ದ್ವೀತಿಯ ವರ್ಷದ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರವಿರುವ ರಾಮನಗರ ಹಾಗೂ ಜೋಯಿಡಾ ಪದವಿ ಪೂರ್ವ ಕಾಲೇಜಿನ ಸುತ್ತಲ ವಾತಾವರಣದಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದ್ದು ತಿಳಿದು ಬಂದಿದೆ.
ಜೋಯಿಡಾ ಬಸ್ ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹೆಲ್ಫ್ ಡೆಸ್ಕ ತೆರೆಯಲಾಗಿದ್ದು, ಸ್ಕ್ಯಾನರ್ ಮೂಲಕ ಪ್ರವಾಸಿಗರನ್ನು ಪರೀಕ್ಷಿಸಲಾಗುತ್ತಿದೆ. ಗ್ರಾ.ಪಂ. ಜೋಯಿಡಾ ಸುತ್ತಲ ಗ್ರಾಮಸ್ಥರಿಗೆ ಹಾಗೂ ಹಳ್ಳಿ,ಹಳ್ಳಿಗಳಲ್ಲಿ ಕೊರೋನಾ ಬಗ್ಗೆ ದ್ವನಿವರ್ಧಕ ಬಳಸಿ ಮಾಹಿತಿ ನೀಡುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಹಿಸಲು ಸಲಹೆಯನ್ನು ನೀಡುತ್ತಿವೆ. ಜೋಯಿಡಾ ಹೋಮ್ ಕರೋಂಟೆನ್.
ಕೊರೋನಾ ಜಾಗ್ರತಿ ಕ್ಯಾಂಪ್.: ತಹಶೀಲ್ದಾರ ಕಾರ್ಯಾಲಯದಲ್ಲಿ ಕೊರೋನಾ ಅವೇರನೆಸ್ ಕ್ಯಾಂಪ್ ಆರಂಬಿಸಲಾಗಿದೆ. ಕಾರ್ಯನಿರ್ವಹಣಾಧಿಕಾರಿ ಆನಂದ ಬಡಕುಂದ್ರಿ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆ ಇಬ್ಬಂದಿಗಳು ಹಾಗೂ ಸರಕಾರಿ ಅಧಿಕಾರಿಗಳ ಉಪಪಸ್ಥಿತಿಯಲ್ಲಿ ಈ ಕ್ಯಾಂಪ್ ಕಾರ್ಯಾರಂಬಗೊಂಡಿದೆ. ತಾಲೂಕಾ ಕಚೇರಿಗೆ ಬರುವ ಸಾರ್ವಜನಿಕರಿಗೆ ಈ ಮೂಲಕ ಕೊರೋನಾ ಕುರಿತು ಮಾಹಿತಿ ಹಾಗೂ ಜಾಗ್ರತಿ ಮೂಡಿಸಲಾಗುತ್ತಿದೆ.
ಹೊಮ್ ಕೊರಂಟೆನ್ ವ್ಯವಸ್ಥೆ : ಸರಕಾರದ ಹಾಗೂ ಆರೋಗ್ಯ ಇಲಾಖೆಯ ನಿರ್ಧೇಶನದಂತೆ ವಿದೇಶಗಳಿಂದ ತಾಲೂಕಿಗೆ ಆಗಮಿಸುವ ವ್ಯಕ್ತಿಗಳಿಗಾಗಿ ಹಾಗೂ ಸಂಶಯಾಸ್ಪದ ವ್ಯಕ್ತಿಗಳಿಗೆ ಕೊರೋನಾ ಪರೀಕ್ಷೆ ನಡೆಸಲು ಹಾಗೂ ಸೂಕ್ತ ಚಿಕಿತ್ಸೆನೀಡಿ, ಎಚ್ಚರಿಕೆ ಕ್ರಮ ವಹಿಸಲು ಹೊಮ್ ಕೊರಂಟೆನ್ (ಮನೆಯೊಳಗೆ ಕೊರೊನಾ ಪರೀಕ್ಷೆ) ವ್ಯವಸ್ಥೆ ಕೈಗೊಳ್ಳಲಾಗುತ್ತಿದ್ದ ಮಾಹಿತಿ ತಿಳಿದು ಬಂದಿದೆ. ಈ ವ್ಯವಸ್ಥೆಯಲ್ಲಿ ವಿಧೇಶಿದಿಂದ ಬಂದ ವ್ಯಕ್ತಿಗಳಿಗೆ ಅವರ ಸ್ವಂತ ಮನೆಯಲ್ಲಿಯೇ 14 ರಿಂದ 22 ದಿನಗಳವರೆಗೆ ಮನೆಯಿಂದ ಹೊರಗೆ ಬಿಡದೆ, ಸೂಕ್ತ ನಿಗಾ ವಹಿಸಿ ಆರೋಗ್ಯಾಧಿಕಾರಿಗಳು ಪರೀಕ್ಷೆ ನಡೆಸಲಾಗುತ್ತಿದೆ. ಜೋಯಡಾದಲ್ಲಿ ಸುಮಾರು 10 ಕಡೆ ಹೊಮ್ ಕೊರೆಂಟೆನ್ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಆರೋಗ್ಯ ಇಲಾಖೆ ನಿಗಾ ವಹಿಸಿದ್ದಾಗಿ ತಿಳಿದು ಬಂದಿದ್ದು, ತಾಲೂಕಿನಲ್ಲಿ ಯಾವುದೇ ವ್ಯಕ್ತಿಗಳಲ್ಲಿ ಕೊರೋನಾ ವೈರಸ್ ಸೊಂಕು ಕಂಡುಬಂದಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹೊಮ್ ಸ್ಟೇ,ರೆಸಾರ್ಟ ಬಂದ :– ಹೊಮ್ ಸ್ಟೆ ರೆಸಾರ್ಟಗಳಲ್ಲಿ ಪ್ರವಾಸಿಗರ ಪ್ರವೇಶ ನಿರ್ಭಂದಿಸಲಾಗಿದ್ದು, ಪ್ರವಾಸಿ ಕೇಂದ್ರಗಳಲ್ಲಿ ತಿವೃ ನಿಗಾ ವಹಿಸಿರುವ ತಾಲೂಕಾ ಆಡಳಿತ, ಸಾರ್ವಜನಿಕರಲ್ಲಿ ಜಾಗ್ರತೆ ಮೂಡಿಸಿ, ಸುತ್ತಲ ಪ್ರದೇಶದಲ್ಲಿ ವಿಧೇಶಿಗರು ಇಲ್ಲವೆ ವಿಧೇಶದಿಂದ ಬಂದಿರುವ ಸ್ವದೇಶಿಯರು ಕಂಡುಬಂದಲ್ಲಿ ತತ್ತಕ್ಷಣ ತಾಲೂಕಾ ಆಡಳಿ, ಆರೋಗ್ಯ ಇಲಾಖೆ, ಇಲ್ಲವೆ ಪೋಲಿಸ್ ಇಲಾಖೆ ಮಾಹಿತಿ ತಿಳಿಸುವಂತೆ ವಿನಂತಿಸಿರುತ್ತಾರೆ.
ಸಂಜಯ ಕಾಂಬ್ಳೆ, ತಹಶೀಲ್ದಾರ ಜೋಯಿಡಾ :- ತಾಲೂಕಿನಲ್ಲಿ ಕೊರೋನಾ ವೈರಸ್ ಪ್ರಕರಣ ಎಲ್ಲಿಯೂ ಇಲ್ಲ. ಯಾರು ಭಯಪಡಬೇಕಾದ ಅಗತ್ಯವಿಲ್ಲ. ವಿಧೇಶಿಗರು, ಅಥವಾ ವಿಧೇಶದಿಂದ ಬಂದವರು ಕಂಡುಬಂದಲ್ಲಿ ಕೂಡಲೆ ತಮ್ಮ ಗಮನಕ್ಕೆ ತರುವುದು. ಆತಂಕ ಬೇಡ,ಕೊರೋನಾ ಬಗ್ಗೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವ ಮೂಲಕ ಜಾಗ್ರತರಾಗಿರಿ.
Leave a Comment